ವಾಟ್ಸ್​ಆ್ಯಪ್ ಬಳಸಿ.. ಜಿಯೋಮಾರ್ಟ್​ ಮೂಲಕ ಖರೀದಿ ನಡೆಸಿ!

ವಾಟ್ಸ್​ಆ್ಯಪ್​ ಮೂಲಕ ಹೆಚ್ಚಿನ ಶ್ರಮವಿಲ್ಲದೇ ಭಾರತೀಯ ಈ ಕಾಮರ್ಸ್​ ಕ್ಷೇತ್ರದಲ್ಲಿ ಧೂಳೆಬ್ಬಿಸಲು ರಿಲಯನ್ಸ್ ಉಪಾಯ ಹೂಡಿದೆ. ವಾಟ್ಸ್​ಆ್ಯಪ್​ ಮೂಲಕ ಹೆಚ್ಚು ಶ್ರಮವಿಲ್ಲದೇ ಭಾರತದ ಇ-ಕಾಮರ್ಸ್​ ಕ್ಷೇತ್ರದಲ್ಲಿ ಧೂಳೆಬ್ಬಿಸಲು ರಿಲಯನ್ಸ್ ಉಪಾಯ ಹೂಡಿದೆ. ಹಿಂದಿನ ವರ್ಷವಷ್ಟೇ ಜಿಯೋಗೆ ಸಂಬಂಧಿಸಿದ ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಫೇಸ್​ಬುಕ್  ಹೂಡಿಕೆ ಮಾಡಿತ್ತು.

ವಾಟ್ಸ್​ಆ್ಯಪ್ ಬಳಸಿ.. ಜಿಯೋಮಾರ್ಟ್​ ಮೂಲಕ ಖರೀದಿ ನಡೆಸಿ!
ಸಾಂಕೇತಿಕ ಚಿತ್ರ
Edited By:

Updated on: Oct 07, 2026 | 8:05 PM

ಮುಂಬೈ: ವಾಟ್ಸ್​ಆ್ಯಪ್​ ಮೂಲಕವೇ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಸಾಧ್ಯವಾದರೆ..? ಹೌದು, ಈ ಸೌಲಭ್ಯ ಒದಗಿಸಲು ಜಿಯೋಮಾರ್ಟ್​ ಮುಂದಾಗಿದೆ. ಮುಂದಿನ 6 ತಿಂಗಳಲ್ಲಿ ನೀವು ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವ ಮೂಲಕವೇ ಜಿಯೋಮಾರ್ಟ್​ನಿಂದ ಶಾಪಿಂಗ್ ಮಾಡಬಹುದಾಗಿದೆ. ಈ ಮೂಲಕ ಅಂತರ್ಜಾಲ ಮಾರುಕಟ್ಟೆ ಕ್ಷೇತ್ರದಲ್ಲಿ ಅಮೆಜಾನ್ ಮತ್ತು ಫ್ಲಿಫ್​ಕಾರ್ಟ್​ಗಳಿಗೆ ಸೆಡ್ಡು ಹೊಡೆಯುವ ಯತ್ನಕ್ಕೆ JioMart ಮುಂದಾಗಿದೆ.

ವಾಟ್ಸ್​ಆ್ಯಪ್​ ಮೂಲಕ ಹೆಚ್ಚು ಶ್ರಮವಿಲ್ಲದೇ ಭಾರತದ ಇ-ಕಾಮರ್ಸ್​ ಕ್ಷೇತ್ರದಲ್ಲಿ ಧೂಳೆಬ್ಬಿಸಲು ರಿಲಯನ್ಸ್ ಉಪಾಯ ಹೂಡಿದೆ. ಹಿಂದಿನ ವರ್ಷವಷ್ಟೇ ಜಿಯೋಗೆ ಸಂಬಂಧಿಸಿದ ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಫೇಸ್​ಬುಕ್  ಹೂಡಿಕೆ ಮಾಡಿತ್ತು.

ಹೇಗೆ ನೆರವಾಗಲಿದೆ ವಾಟ್ಸ್​ಆ್ಯಪ್?
ಭಾರತದಲ್ಲಿ ವಾಟ್ಸ್​ಆ್ಯಪ್​ ಬಳಕೆದಾರರ ಸಂಖ್ಯೆ 40 ಕೋಟಿಗೂ ಹೆಚ್ಚು. ಇವರಿಗೆ ವಾಟ್ಸ್​ಆ್ಯಪ್ ಮೂಲಕವೇ ಅಗತ್ಯ ಸಾಮಾಗ್ರಿ ಖರೀದಿಸುವ ಸೌಲಭ್ಯ  ಒದಗಿಸುವುದು ಜಿಯೋಮಾರ್ಟ್​ನ​ ಯೋಜನೆಯಾಗಿದೆ. ಅಮೆಜಾನ್, ಫ್ಲಿಫ್​ಕಾರ್ಟ್​ಗಳಲ್ಲಿ ಅಗತ್ಯ ಸಾಮಾಗ್ರಿಗಳನ್ನು ಖರೀದಿಸುವ ಬದಲು ವಾಟ್ಸ್​ಆ್ಯಪ್​ ಮೂಲಕವೇ  ಗ್ರಾಹಕರು ಸುಲಭವಾಗಿ ಶಾಪಿಂಗ್ ಮಾಡಬಹುದು ಎಂಬುದು ರಿಲಯನ್ಸ್​ನ ಯೋಜನೆಯಾಗಿದೆ. ಅಲ್ಲದೇ, ವಾಟ್ಸ್​ಆ್ಯಪ್​ ಬಳಸಿ ಗ್ರಾಮೀಣ ಭಾಗದಲ್ಲೂ ಆನ್​ಲೈನ್ ಶಾಪಿಂಗ್​ ಉತ್ತೇಜಿಸುವ ಉದ್ದೇಶ ಜಿಯೋಮಾರ್ಟ್​ನದ್ದಾಗಿದೆ.

Published On - 4:10 pm, Mon, 18 January 21

guruganesh bhat
Loading...
Unable to load recommendations.
Follow Us