Remal Cyclone: ಪಶ್ಚಿಮ ಬಂಗಾಳದ ಕಡಲತೀರಕ್ಕೆ ಅಪ್ಪಳಿಸಿದ ರೆಮಲ್ ಚಂಡಮಾರುತ, ಹಲವೆಡೆ ಭೂಕುಸಿತ

|

Updated on: May 27, 2024 | 8:06 AM

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ರೆಮಲ್ ಚಂಡಮಾರುತವು ಉಗ್ರ ರೂಪ ತಾಳುತ್ತಿದೆ, ಪಶ್ಚಿಮ ಬಂಗಾಳದ ಹಲವೆಡೆ ಮಳೆ, ಭೂ ಕುಸಿತ ಶುರುವಾಗಿದೆ, ಚಂಡಮಾರುತ ಪರಿಣಾಮ ಬಿಹಾರದ ಮೇಲೂ ಗೋಚರಿಸುತ್ತಿದೆ. ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ.

Remal Cyclone: ಪಶ್ಚಿಮ ಬಂಗಾಳದ ಕಡಲತೀರಕ್ಕೆ ಅಪ್ಪಳಿಸಿದ ರೆಮಲ್ ಚಂಡಮಾರುತ, ಹಲವೆಡೆ ಭೂಕುಸಿತ
ಮಳೆ
Follow us on

ರೆಮಲ್​ ಚಂಡಮಾರುತವು ಪಶ್ಚಿಮ ಬಂಗಾಳ(West Bengal)ದ ಕರಾವಳಿಗೆ ಬಂದು ಅಪ್ಪಳಿಸಿದೆ, ಎಲ್ಲೆಡೆ ಭೂಕುಸಿತ ಉಂಟಾಗುತ್ತಿದೆ. ಇದರ ಪರಿಣಾಮ ಬಿಹಾರದ ಮೇಲೂ ಗೋಚರಿಸಲಿದೆ. ಬಂಗಾಳದಲ್ಲಿ ರೆಮಲ್ ಚಂಡಮಾರುತದ ಪ್ರಭಾವದ ಹಿನ್ನೆಲೆಯಲ್ಲಿ ಕೋಲ್ಕತ್ತಾ-ಪಾಟ್ನಾ ನಡುವೆ ಹಾರಾಟ ನಡೆಸುತ್ತಿದ್ದ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ 700ಕ್ಕೂ ಹೆಚ್ಚುಪ್ರಯಾಣಿಕರು ತೊಂದರೆ ಅನುಭವಿಸಿದರು.

ಹವಾಮಾನ ಇಲಾಖೆಯು ಪಶ್ಚಿಮ ಬಂಗಾಳ ಮತ್ತು ಒಡಿಶಾ ಹೊರತುಪಡಿಸಿ ಬಹುತೇಕ ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗುತ್ತಿದೆ.ಚಂಡಮಾರುತದ ಪ್ರಭಾವ ಈ ರಾಜ್ಯಗಳಲ್ಲಿ ಒಂದೆರಡು ದಿನ ಇರಬಹುದು.
ಸೋಮವಾರ ಹಾಗೂ ಮಂಗಳವಾರ ಅಸ್ಸಾಂ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್​, ಅರುಣಾಚಲಪ್ರದೇಶ ಹಾಗೂ ತ್ರಿಪುರಾದಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸೂಕ್ಷ್ಮ ಪ್ರದೇಶಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಾಗೆಯೇ ಅಪಾಯದ ಭೀತಿ ನಡುವೆ ಬಾಂಗ್ಲಾದೇಶದ ಸೂಕ್ಷ್ಮ ಪ್ರದೇಶಗಳಿಂದ ಎಂಟು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮತ್ತಷ್ಟು ಓದಿ: Cyclone Remal: ‘ರೆಮಲ್’ ಸೈಕ್ಲೋನ್ ಎದುರಿಸಲು ಕೇಂದ್ರ ಸರ್ಕಾರ ಸನ್ನದ್ಧ: ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 21 ಗಂಟೆಗಳ ಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದು ದೇಶೀಯ ಹಾಗೂ ಅಂತಾರಾಷ್ಟ್ರೀಯ ಸೇರಿದಂತೆ 394 ವಿಮಾನಗಳ ಮೇಲೆ ಪರಿಣಾಮ ಬೀರುತ್ತದೆ. ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಸರಕು ಹಾಗೂ ಕಂಟೈನರ್ ನಿರ್ವಹಣೆ ಕಾರ್ಯಾಚರಣೆಯನ್ನು ಭಾನುವಾರ ಸಂಜೆಯಿಂದ 12 ಗಂಟೆಗಳ ಕಾಲ ನಿಲ್ಲಿಸಲಾಗಿದೆ.

ಚಿರಾಂಗ್, ಗೋಲ್ಪಾರಾ, ಬಕ್ಸಾ, ದಿಮಾ ಹಸಾವೊ, ಕ್ಯಾಚಾರ್, ಹೈಲಕಂಡಿ ಮತ್ತು ಕರೀಮ್‌ಗಂಜ್ ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ನೀಡಿದರೆ, ಧುಬ್ರಿ, ದಕ್ಷಿಣ ಸಲ್ಮಾರಾ, ಬೊಂಗೈಗಾಂವ್, ಬಜಾಲಿ, ತಮುಲ್‌ಪುರ್, ಬಾರ್ಪೇಟಾದಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ