Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಕುರಿತು ಹೇಳಿಕೆ ನೀಡಿದ ಶರದ್ ಪವಾರ್ ವಿರುದ್ಧ ಪಿಯೂಷ್ ಗೋಯಲ್ ವಾಗ್ದಾಳಿ

ವಿಶ್ವದ ಯಾವುದೇ ಭಾಗದಲ್ಲಿ ಭಯೋತ್ಪಾದನೆಯ ಪಿಡುಗನ್ನು ಎಲ್ಲಾ ರೀತಿಯಲ್ಲೂ ಖಂಡಿಸಬೇಕು ಎಂದು ಹೇಳಿದ ಗೋಯಲ್, ಪವಾರ್ ಅವರು ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಕಣ್ಣೀರು ಸುರಿಸಿದ ಮತ್ತು ಭಾರತದ ನೆಲದಲ್ಲಿ ಭಯೋತ್ಪಾದಕ ದಾಳಿಗಳು ನಡೆದಾಗ ಮಲಗಿದ್ದ ಅದೇ ಸರ್ಕಾರದ ಭಾಗವಾಗಿದ್ದರು ಎಂದಿದ್ದಾರೆ.

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಕುರಿತು ಹೇಳಿಕೆ ನೀಡಿದ ಶರದ್ ಪವಾರ್ ವಿರುದ್ಧ ಪಿಯೂಷ್ ಗೋಯಲ್ ವಾಗ್ದಾಳಿ
ಪಿಯೂಷ್ ಗೋಯಲ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 18, 2023 | 7:22 PM

ದೆಹಲಿ ಅಕ್ಟೋಬರ್ 18: ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ (Israel-Palestine Conflict) ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ವಿರುದ್ಧ ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal)  ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿರಿಯ ನಾಯಕನಿಗೆ ಭಯೋತ್ಪಾದನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ “ಸಾಧಾರಣ ದೃಷ್ಟಿಕೋನ” ಇದ್ದು, ಇಂಥಾ ಕೊಳೆತ ಮನಸ್ಥಿತಿ ನಿಲ್ಲಬೇಕಿದೆ ಎಂದು ಗೋಯಲ್ ಹೇಳಿದ್ದಾರೆ. 1991 ರಿಂದ 1993 ರವರೆಗೆ ಪ್ರಧಾನಿ ಪಿ.ವಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಭಾರತದ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ ಪವಾರ್, ಪ್ಯಾಲೆಸ್ತೀನ್ ಮೂಲದ ಭಯೋತ್ಪಾದಕ ಗುಂಪು ಹಮಾಸ್‌ನೊಂದಿಗಿನ ಯುದ್ಧ ಮಾಡುತ್ತಿರುವ ಇಸ್ರೇಲ್‌ನ ಪರವಾಗಿ ಭಾರತ 100 ಪ್ರತಿಶತದಷ್ಟು ಬೆಂಬಲವಾಗಿ ನಿಂತಿದೆ ಎಂದು ನಾನು ನಂಬುವುದಿಲ್ಲ ಎಂದು ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಭಾರತದ ನಿಲುವಿನ ಬಗ್ಗೆ ಶರದ್ ಪವಾರ್‌ನಂತಹ ಹಿರಿಯ ನಾಯಕ “ಅಸಂಬದ್ಧ” ಹೇಳಿಕೆಗಳನ್ನು ನೀಡಿದಾಗ ಅದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಕೇಂದ್ರ ಸಚಿವರು ಎಕ್ಸ್​​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಶ್ವದ ಯಾವುದೇ ಭಾಗದಲ್ಲಿ ಭಯೋತ್ಪಾದನೆಯ ಪಿಡುಗನ್ನು ಎಲ್ಲಾ ರೀತಿಯಲ್ಲೂ ಖಂಡಿಸಬೇಕು ಎಂದು ಹೇಳಿದ ಗೋಯಲ್, ಪವಾರ್ ಅವರು ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಕಣ್ಣೀರು ಸುರಿಸಿದ ಮತ್ತು ಭಾರತದ ನೆಲದಲ್ಲಿ ಭಯೋತ್ಪಾದಕ ದಾಳಿಗಳು ನಡೆದಾಗ ಮಲಗಿದ್ದ ಅದೇ ಸರ್ಕಾರದ ಭಾಗವಾಗಿದ್ದರು ಎಂದಿದ್ದಾರೆ.

ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆಯು “ಗಂಭೀರ ಮತ್ತು ಸೂಕ್ಷ್ಮವಾಗಿದೆ”. ಅಫ್ಘಾನಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇತರ ರಾಷ್ಟ್ರಗಳಂತಹ ಮುಸ್ಲಿಂ ರಾಷ್ಟ್ರಗಳ ದೃಷ್ಟಿಕೋನಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪವಾರ್ ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಬೆಲೆ ಹೆಚ್ಚಳದ ಹಿಂದೆ ಅದಾನಿ ಗ್ರೂಪ್ ಕೈವಾಡ, ₹32,000 ಕೋಟಿ ಹಗರಣ ಆರೋಪ ಹೊರಿಸಿದ ರಾಹುಲ್ ಗಾಂಧಿ

ಅಕ್ಟೋಬರ್ 8 ರಂದು, ಹಮಾಸ್ ತನ್ನ ಅತಿಕ್ರಮಣವನ್ನು ಪ್ರಾರಂಭಿಸಿದ ಒಂದು ದಿನದ ನಂತರ, ಪ್ರಧಾನಿ ಮೋದಿ ಇಸ್ರೇಲ್ ಗೆ ಒಗ್ಗಟ್ಟು ವ್ಯಕ್ತಪಡಿಸಿ “ಭಯೋತ್ಪಾದಕ” ದಾಳಿಗಳನ್ನು ಖಂಡಿಸಿದರು. ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿಯಿಂದ ತೀವ್ರ ಆಘಾತವಾಗಿದೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಮೋದಿ ಹೇಳಿದರು.

ಅಕ್ಟೋಬರ್ 10 ರಂದು, ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಭಾರತದ ಜನರು ತಮ್ಮ ದೇಶದೊಂದಿಗೆ ದೃಢವಾಗಿ ನಿಂತಿದ್ದಾರೆ, ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ಏತನ್ಮಧ್ಯೆ,ವಿದೇಶಾಂಗ ಸಚಿವಾಲಯ ಇಸ್ರೇಲಿ ನಗರಗಳ ಮೇಲೆ ಹಮಾಸ್‌ನ ದಾಳಿಗಳನ್ನು “ಭಯೋತ್ಪಾದಕ ದಾಳಿ” ಎಂದು ವಿವರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ