ಶಾಲೆಗಳ ಪುನರಾರಂಭದ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಲಹೆ ನೀಡುವ ಸಾಧ್ಯತೆ: ವರದಿ

| Updated By: ರಶ್ಮಿ ಕಲ್ಲಕಟ್ಟ

Updated on: Jan 28, 2022 | 10:32 AM

ಕೊವಿಡ್-19 ಎಲ್ಲಾ ವಯೋಮಾನದ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಆದಾಗ್ಯೂ, ಮಕ್ಕಳಲ್ಲಿ ಮರಣ ಪ್ರಮಾಣ ಮತ್ತು ರೋಗದ ತೀವ್ರತೆಯು ಅತ್ಯಲ್ಪವಾಗಿದೆ. ಮಕ್ಕಳು ಶಾಲೆಗೆ ಮರಳಲು ಇದು ಉತ್ತಮ ಸಮಯ ಎಂದು ಆರೋಗ್ಯ ತಜ್ಞರು ಭಾವಿಸಿದ್ದಾರೆ.

ಶಾಲೆಗಳ ಪುನರಾರಂಭದ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಲಹೆ ನೀಡುವ ಸಾಧ್ಯತೆ: ವರದಿ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: 15 ವರ್ಷ ವಯಸ್ಸಿನ ಮಕ್ಕಳಿಗೆ ಕೊವಿಡ್-19 (Covid-19) ವಿರುದ್ಧ ವ್ಯಾಕ್ಸಿನೇಷನ್ ಡ್ರೈವ್ (Vaccination drive) ವೇಗವನ್ನು ಪಡೆಯುತ್ತಿರುವುದರಿಂದ ಶಾಲೆಗಳನ್ನು ಪುನರಾರಂಭಿಸುವ (Reopening of schools)ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಲಹೆಯನ್ನು ನೀಡುವ ಸಾಧ್ಯತೆಯಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ರಾಷ್ಟ್ರವ್ಯಾಪಿ ಶಾಲೆಗಳನ್ನು ಪುನಃ ತೆರೆಯುವ ಮತ್ತು ವಿಧಾನಗಳ ಕುರಿತು ಕೆಲಸ ಮಾಡುವ ಮಾರ್ಗಗಳನ್ನು ಸೂಚಿಸಲು ರಾಷ್ಟ್ರೀಯ ತಜ್ಞರ ಗುಂಪನ್ನು ಕೇಳಿದ್ದಾರೆ ಎಂದು ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಕೊವಿಡ್-19 ಎಲ್ಲಾ ವಯೋಮಾನದ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಆದಾಗ್ಯೂ, ಮಕ್ಕಳಲ್ಲಿ ಮರಣ ಪ್ರಮಾಣ ಮತ್ತು ರೋಗದ ತೀವ್ರತೆಯು ಅತ್ಯಲ್ಪವಾಗಿದೆ. ಮಕ್ಕಳು ಶಾಲೆಗೆ ಮರಳಲು ಇದು ಉತ್ತಮ ಸಮಯ ಎಂದು ಆರೋಗ್ಯ ತಜ್ಞರು ಭಾವಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಹೇಳಿರುವುದಾಗಿ ಎಎನ್‌ಐ ವರದಿಯಲ್ಲಿ ಉಲ್ಲೇಖಿಸಿದೆ. ಮಾರ್ಚ್ 2020 ರಲ್ಲಿ ಕೊವಿಡ್ -19 ಏಕಾಏಕಿ ಪ್ರಾರಂಭವಾದಾಗಿನಿಂದ ತರಗತಿಗಳು ಹೆಚ್ಚಾಗಿ ಮುಚ್ಚಲ್ಪಟ್ಟಿವೆ. ಕೆಲವು ರಾಜ್ಯಗಳು ತಮ್ಮ ಲಸಿಕೆ ಹಾಕದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿ ವ್ಯಾಪಕವಾದ ಆತಂಕದ ನಡುವೆ ಭಾಗಶಃ ಶಾಲೆಗಳನ್ನ ತೆರೆದಿವೆ. ಹೆಚ್ಚು ಸಾಂಕ್ರಾಮಿಕವಾದ ಒಮಿಕ್ರಾನ್ ರೂಪಾಂತರದ ಹೊರಹೊಮ್ಮುವಿಕೆಯ ಮಧ್ಯೆ 15-17 ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆ ನೀಡಿದ ನಂತರ ಶಾಲೆಗಳನ್ನು ಪುನಃ ತೆರೆಯಲು ಕೇಂದ್ರವು ಬಯಸಿದೆ ಎಂದು ವರದಿ ಹೇಳಿದೆ.

“ಆದಾಗ್ಯೂ, ಶಾಲೆಗಳನ್ನು ತೆರೆಯಲು ಅವರು ಸಿದ್ಧರಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ರಾಜ್ಯಗಳಿಗೆ ಬಿಟ್ಟದ್ದು” ಎಂದು ಎಎನ್‌ಐ ಮೂಲವನ್ನು ಉಲ್ಲೇಖಿಸಿದೆ.

ಭಾರತವು ಜನವರಿ 16, 2021 ರಂದು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ತನ್ನ ವ್ಯಾಕ್ಸಿನೇಷನ್ ಡ್ರೈವ್ ಆರಂಭಿಸಿ ಕ್ರಮೇಣ ಎಲ್ಲಾ ವಯಸ್ಕರಿಗೆ ತೆರೆಯಿತು. 15-18 ವರ್ಷ ವಯಸ್ಸಿನ ಹದಿಹರೆಯದವರಿಗೆ ಲಸಿಕೆ ಹಾಕುವ ಮುಂದಿನ ಹಂತವು ಜನವರಿ 3, 2022 ರಿಂದ ಪ್ರಾರಂಭವಾಯಿತು. ಆರೋಗ್ಯ ರಕ್ಷಣೆ, ಮುಂಚೂಣಿ ಕಾರ್ಯಕರ್ತರು ಮತ್ತು ಅಪಾಯದಲ್ಲಿರುವ ಗುಂಪುಗಳಿಗೆ ಹೆಚ್ಚುವರಿ ‘ಮುಂಜಾಗ್ರತಾ ಪ್ರಮಾಣ’ಗಳನ್ನು ನೀಡಲಾಗಿದೆ. ಗುರುತಿಸಲಾದ ವರ್ಗದ ಫಲಾನುಭವಿಗಳಿಗೆ ಒಂದು ಕೋಟಿಗೂ ಹೆಚ್ಚು ಕೊವಿಡ್ ಬೂಸ್ಟರ್ ಡೋಸ್‌ಗಳನ್ನು ಇಲ್ಲಿಯವರೆಗೆ ನೀಡಲಾಗಿದೆ.

ಸುಮಾರು ಶೇ 95ರಷ್ಟು ಅರ್ಹ ಜನಸಂಖ್ಯೆಯು ಕೊವಿಡ್ -19 ರ ಮೊದಲ ಡೋಸ್‌ನೊಂದಿಗೆ ಪಡೆದಿದೆ ಎಂದು ಮಾಂಡವಿಯಾ ಗುರುವಾರ ಹೇಳಿದರು. ಶುಕ್ರವಾರ ಬೆಳಗಿನ ಹೊತ್ತಿಗೆ, ಭಾರತದ ಒಟ್ಟು ವ್ಯಾಕ್ಸಿನೇಷನ್ ಅಂಕಿ ಅಂಶವು 164.44 ಕೋಟಿ ಗಡಿಯನ್ನು ದಾಟಿದೆ.

ಇದನ್ನೂ ಓದಿ:ದೇಶದಲ್ಲಿ ಕಡಿಮೆಯಾದ ಕೊರೊನಾ ಪ್ರಕರಣಗಳು; ಇಂದು 2,51,209 ಹೊಸ ಪ್ರಕರಣ ಪತ್ತೆ, 627 ಜನರು ಸೋಂಕಿನಿಂದ ನಿಧನ

Published On - 10:15 am, Fri, 28 January 22