ಇಂದು ಭಾರತದಲ್ಲಿ 75ನೇ ಗಣರಾಜ್ಯೋತ್ಸವ(Republic Day)ವನ್ನು ಆಚರಿಸಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ಮೂಲಕ ಶುಭ ಕೋರಿದೆ. 1950ರಲ್ಲಿ ಈ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು ಮತ್ತು ರಾಷ್ಟ್ರವು ತನ್ನನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿತು.
ಕಳೆದ ವರ್ಷ ಕೂಡ ಗೂಗಲ್ ಡೂಡಲ್ ರಚಿಸುವ ಮೂಲಕ ಭಾರತದ ಗಣರಾಜೋತ್ಸವವನ್ನು ಸಂಭ್ರಮಿಸಿತ್ತು. ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಪರೇಡ್‌ನ ದ್ರಶ್ಯವನ್ನು ಡೂಡಲ್ನಲ್ಲಿ ಗೂಗಲ್ ರಚಿಸಿತ್ತು. ಗೂಗಲ್ ಡೂಡಲ್ ಮಾಡುವ ಮೂಲಕ ಭಾರತದ 75ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗಿಯಾಗಿದೆ. ಅತಿಥಿ ಕಲಾವಿದೆ ವೃಂದಾ ಜವೇರಿ ಅವರು ಈ ಗೂಗಲ್ ಡೂಡಲ್ನ್ನು ರಚಿಸಿದ್ದಾರೆ.
ಕಪ್ಪು ಬಿಳುಪಿನ ಟಿವಿ ಪರದೆ, ಬಣ್ಣದ ಟಿವಿ ಪರದೆ ಹಾಗೂ ಮೊಬೈಲ್ ಪರದೆ ಅದರದಲ್ಲಿದೆ. ಗಣರಾಜ್ಯೋತ್ಸವ ಪರೇಡ್ ಕೂಡ ಆ ಪರದೆಯಲ್ಲಿ ಕಾಣಬಹುದು. 75ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಪಾಲ್ಗೊಂಡಿದ್ದಾರೆ.
ಮತ್ತಷ್ಟು ಓದಿ: 75ನೇ ಗಣರಾಜ್ಯೋತ್ಸವದಲ್ಲಿ ಹಲವು ವಿಶೇಷ! ಇಲ್ಲಿದೆ ವಿವರ
ಗಣತಂತ್ರದ ಪರೇಡ್ ಚಲನದ ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿ ಮಹಿಳಾ ಪೊಲೀಸರು ಭಾಗಿಯಾಗಲಿದ್ದಾರೆ. ಈ ತುಕಡಿಯಲ್ಲಿ ಸಂಪೂರ್ಣ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಲಿದ್ದಾರೆ. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಥೀಮ್ ಅಡಿ 194 ಮಹಿಳಾ ಪೊಲೀಸರು ಪರೇಡ್ ಮಾಡಲಿದ್ದು, ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನ ಮುನ್ನಡೆಸಲಿದ್ದಾರೆ.
250 ವರ್ಷಗಳ ಸೇವೆ ಪೂರೈಸಿರುವ ‘ಅಂಗರಕ್ಷಕರು’ 1773ರಲ್ಲಿ ಆರಂಭವಾದ ರಾಷ್ಟ್ರಪತಿ ಅಂಗರಕ್ಷಕ ದಳ ಇದೇ ಮೊದಲ ಬಾರಿ ರಾಷ್ಟ್ರಧ್ವಜ ಹಿಡಿದು ಸಾಗಲಿದ್ದಾರೆ. ರಾಷ್ಟ್ರಪತಿ ಭವನದಿಂದ ರಾಷ್ಟ್ರಪತಿಯವರನ್ನು ಅಂಗರಕ್ಷಕರು ಕರೆತರಲಿರಲಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಫ್ರೆಂಚ್ ವಿದೇಶಿ ಪಡೆ ಭಾಗಿಯಾಗಲಿರುವುದು ಮತ್ತೊಂದು ವಿಶೇಷವಾಗಿದೆ. ಕ್ಯಾಪ್ಟನ್ ಖೌರ್ಡಾ ನೇತೃತ್ವದಲ್ಲಿ ಫ್ರೆಂಚ್ ಸೇನಾ ಬ್ಯಾಂಡ್ ಭಾಗಿಯಾಗಲಿದೆ. 30 ಮಂದಿ ಸಂಗೀತಗಾರರಿಂದ ರೆಜಿಮೆಂಟ್ ಗೀತೆ ಗಾಯನ ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ