Republic Day: ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳಾ ಅಗ್ನಿವೀರ್ ವಾಯು ಸೈನಿಕರ ಶಕ್ತಿಪ್ರದರ್ಶನಕ್ಕೆ ಅವಕಾಶ 

ಮಹಿಳಾ ಅಗ್ನಿವೀರ್ ವಾಯು ಸೈನಿಕರನ್ನು ಈ ಬಾರಿಯ ಗಣರಾಜ್ಯೋತ್ಸವದ ಪರೇಡ್​​​ನಲ್ಲಿ ಭಾಗವಹಿಸಲಿದ್ದಾರೆ ಎಂದು ಸೇನೆ ಹೇಳಿದೆ. ಭಾರತೀಯ ವಾಯುಪಡೆಯ ತುಕಡಿಯ ಭಾಗವಾಗಲಿದ್ದಾರೆ ಎಂದು ಹೇಳಿದೆ. ಅಗ್ನಿಪಥ್ ಯೋಜನೆಯನ್ನು ಸೆಪ್ಟೆಂಬರ್ 2022ರಲ್ಲಿ ಆರಂಭಿಸಲಾಗಿತ್ತು. ಈ ಯೋಜನೆಯ ಪ್ರಕಾರ ಸಶಸ್ತ್ರ ಪಡೆಗಳಿಗೆ ನಾಲ್ಕು ವರ್ಷಗಳ ಸೇವೆಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

Republic Day: ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳಾ ಅಗ್ನಿವೀರ್ ವಾಯು ಸೈನಿಕರ ಶಕ್ತಿಪ್ರದರ್ಶನಕ್ಕೆ ಅವಕಾಶ 
Follow us
|

Updated on: Jan 08, 2024 | 4:06 PM

ದೆಹಲಿ, ಜ.8: ಅಗ್ನಿವೀರ್​​ನಲ್ಲಿ (Agniveer) ಮಹಿಳಾ ನೇಮಕಾತಿ ಸೇನೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಉತ್ತಮ ನಿದರ್ಶನವಾಗಿದೆ. ಸೇನೆಯಲ್ಲಿ ಮಹಿಳೆಯರಿಗೂ ಒಂದು ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಅಗ್ನಿಪಥ್​​​ನಲ್ಲಿ ಮಹಿಳೆಯರನ್ನು ನೇಮಕ ಮಾಡಲಾಗಿದೆ. ಇದೀಗ ಮಹಿಳಾ ಅಗ್ನಿವೀರ್ ವಾಯು ಸೈನಿಕರನ್ನು (Women Agniveer Vayu soldiers) ಈ ಬಾರಿಯ ಗಣರಾಜ್ಯೋತ್ಸವದ ಪರೇಡ್​​​ನಲ್ಲಿ ಭಾಗವಹಿಸಲಿದ್ದಾರೆ ಎಂದು ಸೇನೆ ಹೇಳಿದೆ. ಭಾರತೀಯ ವಾಯುಪಡೆಯ ತುಕಡಿಯ ಭಾಗವಾಗಲಿದ್ದಾರೆ ಎಂದು ಹೇಳಿದೆ.

ಅಗ್ನಿಪಥ್ ಯೋಜನೆಯನ್ನು ಸೆಪ್ಟೆಂಬರ್ 2022ರಲ್ಲಿ ಆರಂಭಿಸಲಾಗಿತ್ತು. ಈ ಯೋಜನೆಯ ಪ್ರಕಾರ ಸಶಸ್ತ್ರ ಪಡೆಗಳಿಗೆ ನಾಲ್ಕು ವರ್ಷಗಳ ಸೇವೆಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅಗ್ನಿವೀರ್​​ನಲ್ಲಿ ನಾಲ್ಕು ವರ್ಷ ಪೂರ್ತಿಗೊಂಡ ನಂತರ ಸೇನೆಯ ಕೆಲವೊಂದು ಪಡೆಗಳಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಲು ಅವಕಾಶವನ್ನು ನೀಡುತ್ತದೆ. ಇನ್ನು ಕೆಲವರಿಗೆ ಬೇರೆ ಸರ್ಕಾರಿ ಹುದ್ದೆಗಳಿಗೆ ಹಾಗೂ ರಾಜ್ಯದ ರಕ್ಷಣಾ ಇಲಾಖೆಗಳಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಹಲವು ದಿನಗಳಿಂದ ದೆಹಲಿಯ ಚಳಿಗೆ ಮುಂಜಾನೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪೂರ್ಣ ಸಮಸ್ತ್ರ ಧರಿಸಿ ಅಭ್ಯಾಸಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: 2023 ರ ಅಗ್ನಿವೀರ್ ಫಲಿತಾಂಶ ಪ್ರಕಟ; ಫಲಿತಾಂಶ ಡೌನ್‌ಲೋಡ್ ಮಾಡುಲು ನೇರ ಲಿಂಕ್ ಇಲ್ಲಿದೆ

ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷರು

ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿರಲು ಆಹ್ವಾನವನ್ನು ಸ್ವೀಕರಿಸಿದ ಮ್ಯಾಕ್ರನ್, ನನ್ನ ಆತ್ಮೀಯ ಸ್ನೇಹಿತ ನರೇಂದ್ರ ಮೋದಿಯವರೇ, ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು. ಭಾರತದ ಗಣರಾಜ್ಯೋತ್ಸವ ದಿನದಂದು ನಿಮ್ಮೊಂದಿಗೆ ಭಾಗವಹಿಸಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ