ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಬೇಕಿತ್ತು, ಪ್ರತಿಕ್ರಿಯೆ ಲಭಿಸಿಲ್ಲ: ನಿತೀಶ್ ಕುಮಾರ್

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಬೇಕಿತ್ತು, ಪ್ರತಿಕ್ರಿಯೆ ಲಭಿಸಿಲ್ಲ: ನಿತೀಶ್ ಕುಮಾರ್
ನಿತೀಶ್ ಕುಮಾರ್

Bihar CM Nitish Kumar: "ಸಮಾಜದಲ್ಲಿ ಯಾವುದೇ ಉದ್ವಿಗ್ನತೆ ಸೃಷ್ಟಿಯಾಗುವುದಿಲ್ಲ. ಸಂತೋಷವಿರುತ್ತದೆ. ಪ್ರತಿ ಸ್ತರದ ಜನರು ಯೋಜನೆಗಳಿಂದ ಪ್ರಯೋಜನ ಪಡೆಯುತ್ತಾರೆ. ಅಂತಹ ಜನಗಣತಿ "ಬ್ರಿಟಿಷ್ ಆಳ್ವಿಕೆಯಲ್ಲೂ ನಡೆದಿದೆ" ಎಂದಿದ್ದಾರೆ ನಿತೀಶ್ ಕುಮಾರ್.

TV9kannada Web Team

| Edited By: Rashmi Kallakatta

Aug 05, 2021 | 11:11 PM

ದೆಹಲಿ: ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಈ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭೇಟಿ ಮಾಡಲು ಕೋರಿದ್ದು, ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ. ನಿತೀಶ್ ಕುಮಾರ್ ಅವರ ಜನತಾದಳ ಯುನೈಟೆಡ್ (ಜೆಡಿಯು) ನ ಸಂಸದರಿಗೆ ಈ ಹಿಂದೆ ಮೋದಿ ಭೇಟಿ ನಿರಾಕರಿಸಿದ್ದು,  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಹೇಳಲಾಗಿತ್ತು.

ಜಾತಿ ಗಣತಿಯು ಯಾವುದೇ ಆಧಾರವಿಲ್ಲದೆ ಕೆಲವು ಜನರನ್ನು ಅಸಮಾಧಾನಗೊಳಿಸುತ್ತದೆ.”ಜಾತಿ ಗಣತಿ ಮಾಡುವುದು ಕೇಂದ್ರಕ್ಕೆ ಬಿಟ್ಟದ್ದು.ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ನಮ್ಮ ಕೆಲಸ. ಒಂದು ಜಾತಿಯವರು ಇಷ್ಟಪಡುತ್ತಾರೆ ಮತ್ತು ಇನ್ನೊಂದು ಜಾತಿಯವರು ಇಷ್ಟಪಡುವುದಿಲ್ಲ ಎಂದು ಭಾವಿಸಬೇಡಿ.ಇದು ಎಲ್ಲರ ಹಿತಾಸಕ್ತಿ” ಎಂದು ನಿತೀಶ್ ಹೇಳಿದ್ದಾರೆ.

“ಸಮಾಜದಲ್ಲಿ ಯಾವುದೇ ಉದ್ವಿಗ್ನತೆ ಸೃಷ್ಟಿಯಾಗುವುದಿಲ್ಲ. ಸಂತೋಷವಿರುತ್ತದೆ. ಪ್ರತಿ ಸ್ತರದ ಜನರು ಯೋಜನೆಗಳಿಂದ ಪ್ರಯೋಜನ ಪಡೆಯುತ್ತಾರೆ. ಅಂತಹ ಜನಗಣತಿ “ಬ್ರಿಟಿಷ್ ಆಳ್ವಿಕೆಯಲ್ಲೂ ನಡೆದಿದೆ” ಎಂದಿದ್ದಾರೆ ಅವರು.

ಜಾತಿ ಜನಗಣತಿ ಬಗ್ಗೆ ಮೈತ್ರಿ ಪಕ್ಷವಾದ ಬಿಜೆಪಿ ಕಳವಳ ವ್ಯಕ್ತಪಡಿಸಿತ್ತು. ಇದು ಸಾಮಾಜಿಕ ಸೌಹಾರ್ದತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಬಿಹಾರ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಹೇಳಿದ್ದಾರೆ.

ಬಿಹಾರ ವಿಧಾನಸಭೆಯು ಜಾತಿ ಆಧಾರಿತ ಜನಗಣತಿಯನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸಿದಾಗ ಮತ್ತು ಅದನ್ನು ಕೇಂದ್ರಕ್ಕೆ ಕಳುಹಿಸಿದಾಗ ಯಾವುದೇ ಬಿಜೆಪಿ ಶಾಸಕರು ಯಾವುದೇ ಆಕ್ಷೇಪವನ್ನು ಎತ್ತಲಿಲ್ಲ . “ಹಾಗಾದರೆ ಕೆಲವು ಕಡೆಗಳಿಂದ ಈಗ ಆಕ್ಷೇಪಗಳನ್ನು ಎತ್ತಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ನಿತೀಶ್ ಕೇಳಿದ್ದಾರೆ.

ಸ್ವಾತಂತ್ರ್ಯನಂತರ , ಬಿ.ಆರ್.ಅಂಬೇಡ್ಕರ್ ಅವರಂತಹ ನಾಯಕರು ಜಾತಿ ಗಣತಿಯು ಒಂದು ಸಮಾನ ಸಮಾಜಕ್ಕೆ ವಿರೋಧಿಯಾಗಿರುತ್ತದೆ ಎಂದು ವಾದಿಸಿದ್ದರು. 1947 ರಿಂದ ಪ್ರತಿ ಜನಗಣತಿಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಮಾತ್ರ ಎಣಿಕೆ ಮಾಡಿದೆ.

ಕಳೆದ ತಿಂಗಳು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಗೃಹ ಇಲಾಖೆಯ ಸಚಿವ ನಿತ್ಯಾನಂದ ರೈ “ಜನಗಣತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳನ್ನು ಹೊರತುಪಡಿಸಿ ಜಾತಿವಾರು ಜನಸಂಖ್ಯೆಯನ್ನು ಎಣಿಸದಿರಲು ಭಾರತ ಸರ್ಕಾರವು ನೀತಿಯ ವಿಷಯವಾಗಿ ನಿರ್ಧರಿಸಿದೆ” ಎಂದಿದ್ದರು.

ಬಿಜೆಪಿಯನ್ನು ಹೊರತುಪಡಿಸಿ ಬಿಹಾರದ ಎಲ್ಲಾ ಪಕ್ಷಗಳು ಜಾತಿ ಗಣತಿಗೆ ಕರೆ ನೀಡಿವೆ. ಬಿಹಾರದ ಇತರ ನಾಯಕರಾದ ಎಚ್ಎಎಂ (ಹಿಂದುಸ್ತಾನ್ ಅವಾಮ್ ಮೋರ್ಚಾ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮತ್ತು ರಾಷ್ಟ್ರೀಯ ಜನತಾದಳದ ತೇಜಸ್ವಿ ಯಾದವ್ ಕೂಡ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಕೇಂದ್ರವು ಒಪ್ಪದಿದ್ದಲ್ಲಿ ರಾಜ್ಯ ಸರ್ಕಾರವೇ ಇಂತಹ ಪ್ರಕ್ರಿಯೆ ಮಾಡುವಂತೆ ನಿತೀಶ್ ಕುಮಾರ್ ಸರ್ಕಾರವನ್ನು ಕೇಳಿಕೊಂಡಿದೆ.

ಇದನ್ನೂ ಓದಿ:  ಶಾಸಕ ಜಮೀರ್ ಅಹ್ಮದ್ ಮನೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳಿಂದ ಐಟಿ ದಾಳಿ

ಇದನ್ನೂ ಓದಿ:  ಆನಂದಂ ವಿಳಯಾಡುಂ ವೀಡು ಚಿತ್ರೀಕರಣದ ವೇಳೆ ಅವಘಡ; ತಮಿಳು ನಟ,ನಿರ್ದೇಶಕ ಚೇರನ್ ತಲೆಗೆ ಗಾಯ

(Requested an appointment with Prime Minister Narendra Modi No Response Yet says Bihar CM Nitish Kumar)

Follow us on

Related Stories

Most Read Stories

Click on your DTH Provider to Add TV9 Kannada