‘ಆನಂದಂ ವಿಳಯಾಡುಂ ವೀಡು’ ಚಿತ್ರೀಕರಣದ ವೇಳೆ ಅವಘಡ; ತಮಿಳು ನಟ,ನಿರ್ದೇಶಕ ಚೇರನ್ ತಲೆಗೆ ಗಾಯ

Tamil Director Cheran: ಗಾಯಗೊಂಡಿದ್ದರೂ ನಟ ಗೌತಮ್ ಕಾರ್ತಿಕ್ ಅಭಿನಯದ ಆನಂದಂ ವಿಳಯಾಡುಂ ವೀಡು ಚಿತ್ರದ ಚಿತ್ರೀಕರಣವನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂದಾ ಪೆರಿಯಸಾಮಿ ನಿರ್ದೇಶನದ ತಂಡ ಚಿತ್ರೀಕರಣ ಮುಗಿಸಿ ಚೆನ್ನೈಗೆ ಮರಳಿದ್ದಾರೆ.

'ಆನಂದಂ ವಿಳಯಾಡುಂ ವೀಡು' ಚಿತ್ರೀಕರಣದ ವೇಳೆ ಅವಘಡ; ತಮಿಳು ನಟ,ನಿರ್ದೇಶಕ ಚೇರನ್ ತಲೆಗೆ ಗಾಯ
ಚೇರನ್


ಚೆನ್ನೈ: ಆನಂದಂ ವಿಳಯಾಡುಂ ವೀಡು ಚಿತ್ರೀಕರಣದ  ವೇಳೆ ಅವಘಡ ಸಂಭವಿಸಿದ್ದು, ತಮಿಳು ಸಿನಿಮಾ  ನಿರ್ದೇಶಕ-ನಟ ಚೇರನ್ ಅವರ ತಲೆಗೆ ಗಾಯವಾಗಿದೆ. ಚೇರನ್ ತಮಿಳುನಾಡಿನ ದಿಂಡಿಗಲ್‌ನ ಮನೆಯೊಂದರಲ್ಲಿ ಚಿತ್ರೀಕರಣದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಚಿತ್ರೀಕರಣದ ಸಮಯದಲ್ಲಿ ಚೇರನ್ ಜಾರಿ ಬಿದ್ದು ಅವರ ತಲೆಗೆ ಎಂಟು ಹೊಲಿಗೆಗಳನ್ನು ಹಾಕಲಾಗಿದೆ.

ಗಾಯಗೊಂಡಿದ್ದರೂ ನಟ ಗೌತಮ್ ಕಾರ್ತಿಕ್ ಅಭಿನಯದ ಆನಂದಂ ವಿಳಯಾಡುಂ ವೀಡು ಚಿತ್ರದ ಚಿತ್ರೀಕರಣವನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂದಾ ಪೆರಿಯಸಾಮಿ ನಿರ್ದೇಶನದ ತಂಡ ಚಿತ್ರೀಕರಣ ಮುಗಿಸಿ ಚೆನ್ನೈಗೆ ಮರಳಿದ್ದಾರೆ.

ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾಗಿದ್ದಾರೆ ಚೇರನ್. ನಿರ್ದೇಶನದ ಜೊತೆಗೆ, ಚೇರನ್ ಒಂದು ಡಜನ್‌ಗೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ತಮಿಳು ಸೀಸನ್ 3 ಕೂಡಾ ಇವರು ಭಾಗವಹಿಸಿದ್ದರು.

ಇದನ್ನೂ ಓದಿ: ಗಾಯಕ ನವೀನ್​ ಸಜ್ಜು ಪ್ರಕಾರ ’ಕನ್ನಡ ಬಿಗ್​ ಬಾಸ್ ಸೀಸನ್​ 8’​ ಗೆಲ್ಲೋರು ಇವರೇ

ಇದನ್ನೂ ಓದಿ: ‘ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಅನುಶ್ರೀಗೆ ಸಿಕ್ಕರು ಈ ವಿಶೇಷ ವ್ಯಕ್ತಿ

(Tamil director-actor Cheran injured while shooting Anandham Vilayadum Veedu)

 

Click on your DTH Provider to Add TV9 Kannada