Lok Sabha Election: ಲೋಕಸಭಾ ಚುನಾವಣೆ: ಲಾಲೂ ಪ್ರಸಾದ್​ ಯಾದವ್ ಪುತ್ರಿ ರೋಹಿಣಿ ಸ್ಪರ್ಧೆ

ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಆರ್​ಜೆಡಿ ಮುಖ್ಯಸ್ಥ, ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ದಿನಾಂಕವನ್ನು ಘೋಷಿಸಿದೆ. ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತೆಣಿಕೆ ನಡೆಯಲಿದೆ.

Lok Sabha Election: ಲೋಕಸಭಾ ಚುನಾವಣೆ: ಲಾಲೂ ಪ್ರಸಾದ್​ ಯಾದವ್ ಪುತ್ರಿ ರೋಹಿಣಿ ಸ್ಪರ್ಧೆ
ರೋಹಿಣಿ ಆಚಾರ್ಯ
Follow us
ನಯನಾ ರಾಜೀವ್
|

Updated on: Mar 18, 2024 | 2:50 PM

ಮುಂಬರುವ ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್(Lalu Prasad Yadav) ಪುತ್ರಿ ರೋಹಿಣಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ದಿನಾಂಕವನ್ನು ಘೋಷಿಸಿದೆ. ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತೆಣಿಕೆ ನಡೆಯಲಿದೆ.

ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಆರಂಭಿಸಿವೆ. ಈಗ ಬಿಹಾರದ ಸರನ್ ಲೋಕಸಭಾ ಕ್ಷೇತ್ರದಿಂದ ಲಾಲೂ ಪ್ರಸಾದ್ ಯಾದವ್ ಪುತ್ರಿ ಆರ್​ಜೆಡಿ ಕಾರ್ಯಕರ್ತೆ ರೋಹಿಣಿ ಆಚಾರ್ಯ ಅವರನ್ನು ಕಣಕ್ಕಿಳಿಸಲು ಚರ್ಚೆ ನಡೆಯುತ್ತಿದೆ. ಆರ್​ಜೆಡಿ ತನ್ನ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ.

ಸರನ್​ನಿಂದ ರೋಹಿಣಿಯವರನ್ನು ಕಣಕ್ಕಿಳಿಸುವ ಕುರಿತು ಆರ್​ಜೆಡಿ ಎಂಎಲ್​ಸಿ ಸುನೀಲ್​ ಕುಮಾರ್ ಸಿಂಗ್, ಸಿಂಗಾಪುರದಲ್ಲಿ ನೆಲೆಸಿರುವ ರೋಹಿಣಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ತಮ್ಮ ಮಗಳು ರೋಹಿಣಿ ತನ್ನ ಕಿಡ್ನಿಯನ್ನು ದಾನ ಮಾಡುವ ಮೂಲಕ ತನ್ನ ಜೀವವನ್ನು ಉಳಿಸಿದ್ದಾಳೆ ಎಂದು ಅವರು ಪ್ರತಿ ಬಾರಿಯೂ ಅನೇಕ ವೇದಿಕೆಗಳಲ್ಲಿ ಹೇಳುತ್ತಲೇ ಇರುತ್ತಾರೆ. ಇದೀಗ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಶೀಘ್ರದಲ್ಲೇ ಚುನಾವಣಾ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರನ್ ಆರ್‌ಜೆಡಿ ಗೆದ್ದ ಕ್ಷೇತ್ರವಾಗಿದೆ. ಆದರೆ, ಸದ್ಯ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಇಲ್ಲಿಂದ ಸಂಸದರಾಗಿದ್ದಾರೆ.

ಮತ್ತಷ್ಟು ಓದಿ: Lok Sabha Election: ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಎಸ್‌ಪಿ

ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಅವರ ಪುತ್ರ ಸುಧಾಕರ್ ಸಿಂಗ್ ಅವರು ಬಕ್ಸರ್ ಕ್ಷೇತ್ರದಿಂದ ಟಿಕೆಟ್ ಪಡೆಯಬಹುದು. ಕೃಷಿ ಸಚಿವರಾಗಿದ್ದ ಕುಮಾರ್ ಸರ್ವಜೀತ್ ಅವರಿಗೆ ಗಯಾ ಸ್ಥಾನ ನೀಡಬಹುದು. ಅಲೋಕ್ ಮೆಹ್ತಾ ಅವರಿಗೆ ಉಜಿಯಾರ್‌ಪುರ ಸ್ಥಾನವನ್ನೂ ನೀಡಬಹುದು ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ