AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವೈ ಉದ್ಯೋಗಿ ಸಾವಿನ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಭಾರೀ ಆಕ್ರೋಶ

ಅಧಿಕ ಕೆಲಸದ ಒತ್ತಡದಿಂದ ಇವೈ ಇಂಡಿಯಾ ಉದ್ಯೋಗಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ. ಇವೈ ಉದ್ಯೋಗಿಯ ಸಾವಿಗೆ ಕೆಲಸದ ಒತ್ತಡವನ್ನು ನಿಭಾಯಿಸಲು ಅಸಮರ್ಥತೆ ಕಾರಣ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ತೀವ್ರ ಟೀಕೆ ವ್ಯಕ್ತಪಡಿಸಿದೆ.

ಇವೈ ಉದ್ಯೋಗಿ ಸಾವಿನ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಭಾರೀ ಆಕ್ರೋಶ
ನಿರ್ಮಲಾ ಸೀತಾರಾಮನ್
Follow us
ಸುಷ್ಮಾ ಚಕ್ರೆ
|

Updated on: Sep 23, 2024 | 7:15 PM

ನವದೆಹಲಿ: ಅಧಿಕ ಕೆಲಸದ ಒತ್ತಡದಿಂದ ಇವೈ ಕಂಪನಿಯ ಉದ್ಯೋಗಿ ಸಾವನ್ನಪ್ಪಿದ್ದಾರೆ ಎಂದು ಆಕೆಯ ತಾಯಿ ಆರೋಪಿಸಿದ್ದರು. ಇವೈ (ಅರ್ನ್ಸ್ಟ್ ಆ್ಯಂಡ್ ಯಂಗ್‌) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಚಾರ್ಟರ್ಡ್ ಅಕೌಂಟೆಂಟ್‌ನ ಸಾವಿನ ಕುರಿತಾದ ಅವರ ತಾಯಿಯ ಹೇಳಿಕೆಗಳ ಸುತ್ತಲಿನ ವಿವಾದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ. ಇವೈ ಉದ್ಯೋಗಿಯ ಸಾವಿಗೆ ಆಕೆಯ ಅಸಮರ್ಥತೆಯೇ ಕಾರಣ ಎಂದು ಹೇಳಿದ್ದಾರೆ.

ಒತ್ತಡವನ್ನು ನಿಭಾಯಿಸಲು ಜನರಿಗೆ ಆಂತರಿಕ ಶಕ್ತಿ ಬೇಕು ಮತ್ತು ಇದನ್ನು ದೈವತ್ವದಿಂದ ಮಾತ್ರ ಸಾಧಿಸಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ನಿರ್ಮಲಾ ಸೀತಾರಾಮನ್ ಅವರ ಈ ಪ್ರತಿಕ್ರಿಯೆ ಸಂವೇದನಾಶೀಲವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪುಣೆಯ ಇವೈ ಕಂಪನಿ ಉದ್ಯೋಗಿ ಸಾವು; ತನಿಖೆಗೆ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಒತ್ತಾಯ

ಇವೈ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಪೆರಿವೈಲ್ ಅವರ ಸಾವಿಗೆ ಕಾರಣವಾದ ಸಂಸ್ಥೆಯ ಕೆಲಸದ ವಾತಾವರಣದ ಆರೋಪಗಳ ಬಗ್ಗೆ ಕೇಂದ್ರ ಕಾರ್ಮಿಕ ಸಚಿವಾಲಯವು ಸಮಗ್ರ ತನಿಖೆ ನಡೆಸಲಿದೆ ಎಂದು ಕೇಂದ್ರ ಹಣಕಾಸು ಸಚಿವರು ಒತ್ತಿ ಹೇಳಿದ್ದಾರೆ. ತಮ್ಮ ಹೇಳಿಕೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿಎ ಓದಿರುವ 26 ವರ್ಷ ವಯಸ್ಸಿನ ಯುವತಿ ಕೆಲಸದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅತಿಯಾದ ಕೆಲಸದ ಹೊರೆಯಿಂದಾಗಿ ಖಾಸಗಿ ಕಂಪನಿ ಉದ್ಯೋಗಿಯ ಸಾವಿನ ಬಗ್ಗೆ ತನಿಖೆಗೆ ಮುಂದಾದ ಸರ್ಕಾರ

“ದೇವರಲ್ಲಿ ನಂಬಿಕೆ ಇಡಿ, ನಮಗೆ ದೇವರ ಅನುಗ್ರಹ ಬೇಕು. ದೇವರನ್ನು ಹುಡುಕಿ, ಉತ್ತಮ ಶಿಸ್ತನ್ನು ಕಲಿಯಿರಿ. ಇದರಿಂದ ಮಾತ್ರ ನಿಮ್ಮ ಆತ್ಮಶಕ್ತಿ ಬೆಳೆಯುತ್ತದೆ. ಆತ್ಮಶಕ್ತಿ ಬೆಳೆಯುವುದರೊಂದಿಗೆ ಮಾತ್ರ ಆಂತರಿಕ ಶಕ್ತಿ ಬರುತ್ತದೆ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ