Vizag: ನರಸಿಂಹ ಸ್ವಾಮಿ ದೇವರ ಹುಂಡಿಯಲ್ಲಿತ್ತು 100 ಕೋಟಿ ರೂ ಚೆಕ್! ಬ್ಯಾಂಕಿಗೆ ಕಳುಹಿಸಿ ಪರಿಶೀಲಿಸಿದಾಗ.. ಅಕೌಂಟ್​​ನಲ್ಲಿತ್ತು 17 ರೂಪಾಯಿ!

ಹುಂಡಿಯಲ್ಲಿ 100 ಕೋಟಿ ರೂ ಮೊತ್ತದ ಚೆಕ್ ವಿಚಾರ ಮಾಧ್ಯಮಗಳ ಗಮನಕ್ಕೂ ಬಂದಿದೆ. ಕೆಲ ಮಾಧ್ಯಮ ಪ್ರತಿನಿಧಿಗಳೂ ತಕ್ಷಣವೇ ಬ್ಯಾಂಕ್​ಗೆ ಹೋಗಿ ಖಾತೆಯನ್ನು ಪರಿಶೀಲಿಸಿದರು. ಈ ಬಾರಿ ಅವರೂ ಶಾಕ್ ಆಗಿದ್ದಾರೆ. ಯಾಕೆಂದರೆ ಆ ಖಾತೆಯಲ್ಲಿ ಕೇವಲ 17 ರೂಪಾಯಿ ಹೌದು, ಅಕ್ಷರಶಃ ಹದಿನೇಳು ರೂಪಾಯಿ ಇತ್ತು. ಇದರೊಂದಿಗೆ ಈ ಚೆಕ್​ ಹಿಂದಿನ ರಹಸ್ಯ ಯಾರೋ ತಮಾಷೆಗೆ ಮಾಡಿರಬಹುದಾ ಅಥವಾ ಹುಚ್ಚುಹುಚ್ಚಾಗಿ ಹೀಗೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Vizag: ನರಸಿಂಹ ಸ್ವಾಮಿ ದೇವರ ಹುಂಡಿಯಲ್ಲಿತ್ತು 100 ಕೋಟಿ ರೂ ಚೆಕ್! ಬ್ಯಾಂಕಿಗೆ ಕಳುಹಿಸಿ ಪರಿಶೀಲಿಸಿದಾಗ.. ಅಕೌಂಟ್​​ನಲ್ಲಿತ್ತು 17 ರೂಪಾಯಿ!
ದೇವರ ಹುಂಡಿಯಲ್ಲಿತ್ತು 100 ಕೋಟಿ ರೂ ಚೆಕ್!
Follow us
ಸಾಧು ಶ್ರೀನಾಥ್​
|

Updated on: Aug 24, 2023 | 1:23 PM

ವಿಶಾಖಪಟ್ಟಣ, ಆಗಸ್ಟ್ 24: ವಾಡಿಕೆಯಂತೆ 15 ದಿನಕ್ಕೊಮ್ಮೆ ಹುಂಡಿ ಎಣಿಕೆ ಮಾಡಿದ ದೇವಸ್ಥಾನದ ಅಧಿಕಾರಿಗಳು ಮೊದಮೊದಲು ಸಂತಸದಿಂದಲೇ ತಪಾಸಣೆ ನಡೆಸಿದ್ರಾದರೂ ಮುಂದೆ ಮುಂದೆ ಆಘಾತ ಹಾಗೂ ಭಾವುಕರಾದರು. ಯಾಕಪ್ಪಾ ಅಂದ್ರೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿಯ ಕಣ್ಣಿಗೆ ಒಂದಲ್ಲ, ಎರಡಲ್ಲ, 100 ಕೋಟಿ ರೂಪಾಯಿ ಮೌಲ್ಯದ ಚೆಕ್ (bank cheque) ಬಿದ್ದಿದೆ. ಅವರು ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನೂರಾರು ವರ್ಷಗಳ ದೇವಸ್ಥಾನದ ಇತಿಹಾಸದಲ್ಲಿಯೇ ನಡೆಯದ ಈ ವಿಶೇಷ ಘಟನೆಯನ್ನು ಉನ್ನತ ಅಧಿಕಾರಿಗಳು ಅನುಮಾನಿಸದಿದ್ದರೂ, ಸದರಿ ಭಕ್ತ ಜನ ಯಾರೆಂದು ಅವರಿಗೂ ತಿಳಿಯದ ಕಾರಣ ಅವರನ್ನು ದೇವಾಲಯದ ಶಿಷ್ಟಾಚಾರಗಳೊಂದಿಗೆ ಖುದ್ದಾಗಿ ಭೇಟಿ ಮಾಡಲು ಆಲೋಚಿಸಿದರು. ಸಿಂಹಾಚಲಂ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ಹುಂಡಿಯನ್ನು (Simhachalam Appana Temple Hundi in Vizag) 15 ದಿನಕ್ಕೊಮ್ಮೆ ಎಣಿಸಲಾಗುತ್ತದೆ. ಅಲ್ಲದೇ ಹುಂಡಿ ಎಣಿಕೆ ವೇಳೆ ಸಿಬ್ಬಂದಿಗೆ ಅಪಾರ ಮೊತ್ತದ ಕಾಣಿಕೆಯೊಂದು ಹೀಗೆ ಸಿಕ್ಕಿದೆ.

ಉಳಿತಾಯ ಖಾತೆಯಲ್ಲಿ 100 ಕೋಟಿ ರೂ

ಆಘಾತದಿಂದ ಚೇತರಿಸಿಕೊಂಡ ನಂತರ, ದೆಗುಲದ ಅಧಿಕಾರಿಗಳು ಮತ್ತು ಸಿಬ್ಬಂದಿ 100 ಕೋಟಿ ರೂಪಾಯಿ ಮೌಲ್ಯದ ಚೆಕ್ ಮೂಲ ವಿವರಗಳನ್ನು ಸಂಗ್ರಹಿಸಲು ಮುಂದಾದರು. ಚೆಕ್​​ ಮೇಲಿನ ವಿವರಗಳ ಆಧಾರದ ಮೇಲೆ ಅದು ಬೊಡ್ಡೆಪಲ್ಲಿ ರಾಧಾಕೃಷ್ಣ ಅವರ ಉಳಿತಾಯ ಖಾತೆಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಚೆಕ್ ಸಂಖ್ಯೆ MVP ಡಬಲ್ ರೋಡ್ ಶಾಖೆಯ ಹೆಸರಿನಲ್ಲಿತ್ತು. ಏನೇ ಆದರೂ ಉಳಿತಾಯ ಖಾತೆಯಿಂದ 100 ಕೋಟಿ ದೇಣಿಗೆ ನೀಡಿರುವ ಬಗ್ಗೆ ದೇವಸ್ಥಾನದ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಅದರಲ್ಲಿಯೂ ವರಾಹ ಲಕ್ಷ್ಮೀ ನರಸಿಂಹ ದೇವಸ್ಥಾನದ ಹೆಸರಿನಲ್ಲಿ ಬರೆದಿದ್ದ ಚೆಕ್‌ನಲ್ಲಿ ಮೊದಲು 10 ರೂಪಾಯಿ ಎಂದು ಬರೆದು, ಮತ್ತೆ 100 ಕೋಟಿ ಎಂದು ಬರೆದಿರುವುದು ಕಂಡು ಬಂದಿದೆ. ಎಲ್ಲರಿಗೂ ಕುತೂಹಲದ ಜತೆಗೆ ಅನುಮಾನವೂ ಮೂಡಿತ್ತು.

ಖಾತೆಯಲ್ಲಿ ಕೇವಲ 17 ರೂ!

ಹುಂಡಿಯಲ್ಲಿ 100 ಕೋಟಿ ರೂ ಮೊತ್ತದ ಚೆಕ್ ವಿಚಾರ ಮಾಧ್ಯಮಗಳ ಗಮನಕ್ಕೂ ಬಂದಿದೆ. ಕೆಲ ಮಾಧ್ಯಮ ಪ್ರತಿನಿಧಿಗಳೂ ತಕ್ಷಣವೇ ಬ್ಯಾಂಕ್​ಗೆ ಹೋಗಿ ಖಾತೆಯನ್ನು ಪರಿಶೀಲಿಸಿದರು. ಈ ಬಾರಿ ಅವರೂ ಶಾಕ್ ಆಗಿದ್ದಾರೆ. ಯಾಕೆಂದರೆ ಆ ಖಾತೆಯಲ್ಲಿ ಕೇವಲ 17 ರೂಪಾಯಿ ಹೌದು, ಅಕ್ಷರಶಃ ಹದಿನೇಳು ರೂಪಾಯಿ ಇತ್ತು. ಇದರೊಂದಿಗೆ ಈ ಚೆಕ್​ ಹಿಂದಿನ ರಹಸ್ಯ ಯಾರೋ ತಮಾಷೆಗೆ ಮಾಡಿರಬಹುದಾ ಅಥವಾ ಹುಚ್ಚುಹುಚ್ಚಾಗಿ ಹೀಗೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನವು ಅಧಿಕೃತವಾಗಿ ಬ್ಯಾಂಕ್‌ಗೆ ಚೆಕ್ ಕಳುಹಿಸಲಿದೆ

ಆದರೆ ಅಧಿಕೃತವಾಗಿ ಚೆಕ್ ಹೊಂದಿರುವವರ ವಿವರಗಳನ್ನು ಕಂಡುಹಿಡಿಯಲು ದೇವಾಲಯದ ಅಧಿಕಾರಿಗಳು ಇಂದು ಗುರುವಾರ ಅಧಿಕೃತವಾಗಿ ಚೆಕ್ ಅನ್ನು ಬ್ಯಾಂಕ್‌ಗೆ ಕಳುಹಿಸಿ ಸಂಪೂರ್ಣ ವಿವರಗಳನ್ನು ಪಡೆಯಲು ನಿರ್ಧರಿಸಿದ್ದಾರೆ. ಅದರ ಆಧಾರದ ಮೇಲೆ ದೇವಸ್ಥಾನದ ಅಧಿಕಾರಿಗಳು ವ್ಯಕ್ತಿಯ ವಿವರಗಳನ್ನು ಪತ್ತೆ ಹಚ್ಚಿ ಅವರನ್ನು ಸಂಪರ್ಕಿಸಿ, ಇಂತಹ ದುರ್ವರ್ತನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ