ಧರ್ಮಶಾಲಾ: ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಭಾರತೀಯ ಜನತಾ ಪಕ್ಷದ (BJP) ಸರ್ಕಾರದ ಮೇಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ನಿಯಂತ್ರಣ ಹೊಂದಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಸ್ಪಷ್ಟಪಡಿಸಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಮಾಜಿ ಸೈನಿಕರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಸಂಘದ ಪ್ರಮುಖ ವ್ಯಕ್ತಿಗಳು ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಅವರು ಸಂಘದ ಭಾಗವಾಗಿಯೇ ಉಳಿಯುತ್ತಾರೆ ಎಂದು ಅವರು ಹೇಳಿದ್ದಾರೆ. ಸರ್ಕಾರದಲ್ಲಿ ವಿಭಿನ್ನ ಕಾರ್ಯನಿರ್ವಾಹಕರಿದ್ದಾರೆ. ಅವರು ವಿಭಿನ್ನ ನೀತಿಗಳನ್ನು, ಕಾರ್ಯ ವಿಧಾನಗಳನ್ನು ಹೊಂದಿದ್ದಾರೆ. ಅವರ ಚಿಂತನೆ ಮತ್ತು ಯೋಚನೆಯು ಸಂಘದ್ದಾಗಿದ್ದು ಅದು ಪರಿಣಾಮಕಾರಿಯಾಗಿದೆ. ಮುಖ್ಯ ಜನರು ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದು, ಅವರು ಅದನ್ನು ಮುಂದುವರೆಸಲಿದ್ದಾರೆ. ಇಂತಹ ಸಂಬಂಧ ಮತ್ತು ಮಾಧ್ಯಮವನ್ನು ನಾವು ‘ರಿಮೋಟ್ ಕಂಟ್ರೋಲ್’ ಎನ್ನಲಾಗದು. ಮತ್ತು ಅಂತಹ ಯಾವುದೇ ನಿಯಂತ್ರಣವನ್ನು ಸರ್ಕಾರದ ಮೇಲೆ ಸಂಘವು ಹೊಂದಿಲ್ಲ ಎಂದು ಮೋಹನ್ ಭಾಗವತ್ ತಿಳಿಸಿದ್ದನ್ನು ಎಎನ್ಐ ವರದಿ ಮಾಡಿದೆ. ಶನಿವಾರ ಸಂಜೆ ಧರ್ಮಶಾಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಮಾಜಿ ಸೈನಿಕರು ಭಾಗವಹಿಸಿದ್ದರು.
ಈ ಹಿಂದೆ ಸಂಘಕ್ಕೆ ಎದುರಾದ ಅಡೆತಡೆಗಳನ್ನು ಪ್ರಸ್ತಾಪಿಸಿ ಭಾಗವತ್, ‘‘ಸರ್ಕಾರಗಳು ನಮ್ಮ ವಿರುದ್ಧ ಇದ್ದವು ಮತ್ತು ನಮ್ಮ ಕುರಿತು ಯಾವಾಗಲೂ ವಿರೋಧವಿದೆ. ಆದರೆ ಸಂಘವು 96 ವರ್ಷಗಳಿಂದ ಎಲ್ಲಾ ಅಡೆತಡೆಗಳನ್ನು ದಾಟಿ ನಡೆಯುತ್ತಿದೆ. ಸಮಾಜದಲ್ಲಿ ಕೆಲಸ ಮಾಡುವ ಅವಶ್ಯಕತೆಯಿರುವಲ್ಲೆಲ್ಲಾ ಸ್ವಯಂಸೇವಕರು ಯಾವಾಗಲೂ ಲಭ್ಯವಿರುತ್ತಾರೆ. ಜತೆಗೆ ಅವರು ಸಮಾಜದ ಜನರನ್ನು ಜೊತೆಯಲ್ಲಿ ಕರೆದೊಯ್ಯುತ್ತಾರೆ. ಆದರೆ ಅವರು ಸ್ವಯಂಸೇವಕರು ಸ್ವತಂತ್ರರಾಗಿದ್ದಾರೆ ಎಂದು ಭಾಗವತ್ ಹೇಳಿದ್ದಾರೆ. ಯಾವುದೇ ಪ್ರಚಾರ, ಆರ್ಥಿಕ ಶಕ್ತಿ ಅಥವಾ ಸರ್ಕಾರದ ನೆರವಿಲ್ಲದೆ ಸಂಘವು ನಿರಂತರವಾಗಿ ಸಮಾಜಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಭಾಗವತ್ ಇದೇ ವೇಳೆ ಹೇಳಿದ್ದಾರೆ.
40,000 ವರ್ಷಗಳಿಂದ ಭಾರತೀಯರ ಡಿಎನ್ಎ ಒಂದೇ ಆಗಿದೆ: ಭಾಗವತ್ ಪ್ರತಿಪಾದನೆ
ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಎಲ್ಲಾ ಭಾರತೀಯರ ಡಿಎನ್ಎ ಒಂದೇ ಎಂದು ಪ್ರತಿಪಾದಿಸಿದ್ದಾರೆ. 40,000 ವರ್ಷಗಳ ಹಿಂದಿನ ಭಾರತೀಯರ ಡಿಎನ್‌ಎ ಇಂದಿನ ಜನರಂತೆಯೇ ಇದೆ. ಮತ್ತು ನಮ್ಮೆಲ್ಲರ ಪೂರ್ವಜರು ಒಂದೇ ಆಗಿದ್ದಾರೆ. ಅಂತಹ ಪೂರ್ವಜರಿಂದ ನಮ್ಮ ದೇಶವು ಪ್ರವರ್ಧಮಾನಕ್ಕೆ ಬಂದಿತು ಮತ್ತು ಸಂಸ್ಕೃತಿ ಮುಂದುವರೆಯಿತು ಎಂದು ಅವರು ಹೇಳಿದ್ದಾರೆ.
ಮೋಹನ್ ಭಾಗವತ್ ಮಾತನಾಡಿರುವ ವಿಡಿಯೋ ಇಲ್ಲಿದೆ:
#WATCH | For over 40,000 years DNA of all people in India has been the same…I am not faffing,” said RSS chief Mohan Bhagwat at an event in Dharamshala, Himachal Pradesh (18.12) pic.twitter.com/cAtY12oe5i
— ANI (@ANI) December 19, 2021
ಇದನ್ನೂ ಓದಿ:
ಗಂಗಾನದಿಯಲ್ಲಿ ಏಕಾಂಗಿಯಾಗಿ ಪವಿತ್ರ ಸ್ನಾನ ಮಾಡುವವರು ಹಿಂದುತ್ವವಾದಿ; ರಾಹುಲ್ ಗಾಂಧಿ ಹೊಸ ವ್ಯಾಖ್ಯಾನ
ಕೇರಳದಲ್ಲಿ ರಾಜಕೀಯ ನಾಯಕರ ಹತ್ಯೆ ಖಂಡಿಸಿದ ಸಿಎಂ ಪಿಣರಾಯಿ ವಿಜಯನ್; 2 ಪಕ್ಷಗಳ ನಾಯಕರ ನಡುವೆ ಆರೋಪ-ಪ್ರತ್ಯಾರೋಪ
Published On - 4:05 pm, Sun, 19 December 21