ದೀಪಾವಳಿ ಸಂಭ್ರಮ: ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಿ ದೀಪ ಬೆಳಗಿದ RSS ನಾಯಕ
ಎಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಇದರ ಮಧ್ಯೆ ಆರ್ಎಸ್ಎಸ್ ನಾಯಕ ನವದೆಹಲಿಯ ದರ್ಗಾಕ್ಕೆ ಭೇಟಿ ನೀಡಿ ದೀಪ ಬೆಳಗಿರುವುದು ವಿಶೇಷ,
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಇಂದ್ರೇಶ್ ಕುಮಾರ್ ಅವರು ನವದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾಕ್ಕೆ (Nizamuddin Dargah) ಭೇಟಿ ನೀಡಿದರು. ಈ ವೇಳೆ ದೀಪಾವಳಿಯ ಹಬ್ಬದ ನಿಮಿತ್ತ ದರ್ಗಾ ಆವರಣದಲ್ಲಿ ಮಣ್ಣಿನ ದೀಪಗಳನ್ನು ಬೆಳಗಿದರು.
ಈ ವೇಳೆ ಮಾತನಾಡಿದ ಇಂದ್ರೇಶ್ ಕುಮಾರ್, ನಿಜಾಮುದ್ದೀನ್ ದರ್ಗಾ ಸಂಕೀರ್ಣದೊಳಗೆ ಮಣ್ಣಿನ ದೀಪಗಳನ್ನು ಬೆಳಗಿಸುವುದರಿಂದ ಶಾಂತಿ, ಸಮೃದ್ಧಿ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಸೂಚಿಸುತ್ತದೆ ಎಂದು ಎಂದಿದ್ದಾರೆ.
Ayodhya Deepotsav ಅಯೋಧ್ಯೆ ರಾಮಮಂದಿರದಲ್ಲಿ ನರೇಂದ್ರ ಮೋದಿ ಪ್ರಾರ್ಥನೆ, ದೀಪೋತ್ಸವದಲ್ಲಿ ಭಾಗಿ
ದೀಪಾವಳಿ ಹಬ್ಬವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಪ್ರತಿ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಭಾರತವು ತೀರ್ಥಯಾತ್ರೆಗಳು, ಉತ್ಸವಗಳು ಮತ್ತು ಜಾತ್ರೆಗಳ ನಾಡು. ಎಲ್ಲರೂ ಬಡವರಿಗೆ ರೊಟ್ಟಿಯನ್ನು ನೀಡಿ ತಮ್ಮಲ್ಲಿ ಸಹೋದರತ್ವವನ್ನು ಹೆಚ್ಚಿಸುತ್ತಾರೆ. ಧರ್ಮಾಂಧತೆ, ದುಶ್ಚಟ, ದ್ವೇಷ, ಗಲಭೆ, ಯುದ್ಧ ಬೇಡ ಎಂಬುದನ್ನು ಪ್ರತಿ ಹಬ್ಬವೂ ಕಲಿಸುತ್ತದೆ. ನಾವು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಯಸುತ್ತೇವೆ ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಯಾರನ್ನೂ ಬಲವಂತವಾಗಿ ಮತಾಂತರ ಮಾಡಿ ಹಿಂಸಾಚಾರ ಮಾಡಬಾರದು. ಪ್ರತಿಯೊಬ್ಬರೂ ಅವರವರ ಧರ್ಮ, ಜಾತಿಯನ್ನು ಅನುಸರಿಸಬೇಕು. ಅನ್ಯ ಧರ್ಮವನ್ನು ಟೀಕಿಸಿ ಅವಮಾನಿಸಬೇಡಿ. ದೇಶದಲ್ಲಿ ಎಲ್ಲ ಧರ್ಮಗಳನ್ನು ಗೌರವಿಸಿದಾಗ, ಕಲ್ಲು ಹೊಡೆಯುವ ಮೂಲಭೂತವಾದಿಗಳಿಂದ ದೇಶ ಮುಕ್ತವಾಗುತ್ತದೆ. ಎಲ್ಲಾ ಧರ್ಮಗಳನ್ನು ಗೌರವಿಸುವ ಮತ್ತು ಸ್ವೀಕರಿಸುವ ಏಕೈಕ ದೇಶ ಭಾರತ ಎಂದು ತಿಳಿಸಿದರು.