Ayodhya Deepotsav ಅಯೋಧ್ಯೆ ರಾಮಮಂದಿರದಲ್ಲಿ ನರೇಂದ್ರ ಮೋದಿ ಪ್ರಾರ್ಥನೆ, ದೀಪೋತ್ಸವದಲ್ಲಿ ಭಾಗಿ
ಅಯೋಧ್ಯೆಯಲ್ಲಿ ಭಾನುವಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ, ಅಯೋಧ್ಯೆಯನ್ನು ಸ್ವರ್ಗಕ್ಕೆ ಹೋಲಿಸುವ ಕಾಲವೂ ಇತ್ತು. ಆದರೆ, ಈಗ ಅಯೋಧ್ಯೆ ಅಭಿವೃದ್ಧಿಯ ವಿಚಾರದಲ್ಲಿ ಹೊಸ ಮಟ್ಟಕ್ಕೇರುತ್ತಿದೆ.
ದೆಹಲಿ: ದೀಪಾವಳಿ (Diwali) ಆಚರಣೆಯಲ್ಲಿ ಪಾಲ್ಗೊಳ್ಳಲು ಇಂದು ಸಂಜೆ ಉತ್ತರ ಪ್ರದೇಶದ ಅಯೋಧ್ಯೆಗೆ (Ayodhya) ಬಂದಿಳಿದ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ದೇವಾಲಯ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲಿದ್ದಾರೆ. ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀರಾಮನ ಸಾಂಕೇತಿಕ ಪಟ್ಟಾಭಿಷೇಕವನ್ನು ಮಾಡಿದರು. ನಂತರ ಅವರು ಸರಯು ನದಿಯ ದಡದಲ್ಲಿ “ಆರತಿ”ಯಲ್ಲಿ ಪಾಲ್ಗೊಂಡು ದೀಪೋತ್ಸವ ಆಚರಣೆಗೆ ಚಾಲನೆ ನೀಡುತ್ತಾರೆ ಎಂದು ಹೇಳಿಕೆ ತಿಳಿಸಿದೆ. ವಿವಿಧ ರಾಜ್ಯಗಳ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವ ಐದು ಅನಿಮೇಟೆಡ್ ಟ್ಯಾಬ್ಲೋ ಮತ್ತು 11 ರಾಮಲೀಲಾ ಟ್ಯಾಬ್ಲೋಗಳನ್ನು ಟೇಬಲ್ಲಾಕ್ಸ್ ಪ್ರಸ್ತುತಪಡಿಸಲಾಗುತ್ತದೆ.ಪ್ರಧಾನಮಂತ್ರಿ ಮೋದಿಯವರು ಸರಯು ನದಿಯ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ 3D ಹೊಲೊಗ್ರಾಫಿಕ್ ಪ್ರೊಜೆಕ್ಷನ್ ಮ್ಯಾಪ್ ಪ್ರದರ್ಶನವನ್ನು ನೋಡಲಿದ್ದಾರೆ ಮತ್ತು ಮ್ಯೂಸಿಕಲ್ ಲೇಸರ್ ಶೋ ಅನ್ನು ನೋಡಲಿದ್ದಾರೆ.
ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ
ಅಯೋಧ್ಯೆಯಲ್ಲಿ ಭಾನುವಾರ ದೀಪೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಂಕೇತಿಕ ಭಗವಾನ್ ಶ್ರೀರಾಮನ ರಾಜ್ಯಾಭಿಷೇಕವನ್ನು ನೆರವೇರಿಸಿದರು.
#WATCH | Prime Minister Narendra Modi offers prayers to Lord Ramlala Virajman in Shri Ram Janmabhoomi on the eve of #Diwali in Ayodhya, Uttar Pradesh
(Source: DD) pic.twitter.com/YVnnjRQ4fX
— ANI (@ANI) October 23, 2022
ದೀಪೋತ್ಸವ ಆರಂಭವಾಗಿದ್ದು ಪ್ರಧಾನಿ ಮೋದಿಯವರ ಸ್ಫೂರ್ತಿಯಿಂದ: ಯೋಗಿ ಆದಿತ್ಯನಾಥ
ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ಸ್ಫೂರ್ತಿಯಿಂದ ಆರು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ದೀಪೋತ್ಸವ ಆಚರಣೆಗಳು ಪ್ರಾರಂಭವಾದವು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಭಾನುವಾರ ಹೇಳಿದ್ದಾರೆ. ಯುಪಿಯ ಈ ಹಬ್ಬ ದೇಶದ ಹಬ್ಬವಾಯಿತು. ಇಂದು, ಇದು ಯಶಸ್ಸಿನ ಹೊಸ ಹಂತವನ್ನು ಮುಟ್ಟುತ್ತಿದೆ ಎಂದು ಅವರು ಹೇಳಿದ್ದಾರೆ.
May the divine blessings of Bhagwaan Shree Ram brighten our lives. Watch from Ayodhya… https://t.co/Hr2nVF2G2u
— Narendra Modi (@narendramodi) October 23, 2022
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
ಆಜಾದಿ ಕಾ ಅಮೃತ್ ಮಹೋತ್ಸವದ ಜೊತೆಗೆ ಭವ್ಯವಾದ ದೀಪಾವಳಿ ಆಚರಣೆಗಳು ಹೊಂದಿಕೆಯಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. “ನಾನು ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಲು ಬಯಸುತ್ತೇನೆ ನಾವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಈ ವರ್ಷ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ಅಯೋಧ್ಯೆಯಲ್ಲಿ ಭಾನುವಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ, ಅಯೋಧ್ಯೆಯನ್ನು ಸ್ವರ್ಗಕ್ಕೆ ಹೋಲಿಸುವ ಕಾಲವೂ ಇತ್ತು. ಆದರೆ, ಈಗ ಅಯೋಧ್ಯೆ ಅಭಿವೃದ್ಧಿಯ ವಿಚಾರದಲ್ಲಿ ಹೊಸ ಮಟ್ಟಕ್ಕೇರುತ್ತಿದೆ. ಹಿಂದೆ, ಭಗವಾನ್ ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು ಇಂದು ಅಯೋಧ್ಯೆಯ ಅಭಿವೃದ್ಧಿಗೆ ಸಾವಿರಾರು ಕೋಟಿಗಳನ್ನು ಖರ್ಚು ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.
ರಾಮ ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ನ ಸಂಕೇತ
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸಗಳಿಗೆ ರಾಮನೇ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಭಗವಾನ್ ಶ್ರೀರಾಮನ ‘ಕರ್ತವ್ಯ ಬಲ’ದ ಬೋಧನೆಗಳಿಂದ, ಅವರ ಆಡಳಿತವನ್ನು ಗೌರವಿಸಲು ಮತ್ತು ಜಾಗತಿಕವಾಗಿ ನಮ್ಮ ಗುರುತನ್ನು ಸ್ಥಾಪಿಸಲು ನಾವು ‘ಕರ್ತವ್ಯ ಪಥ’ವನ್ನು ಕಂಡುಕೊಂಡಿದ್ದೇವೆ ಎಂದು ಅವರು ಹೇಳಿದರು.
ಮೋದಿ ಭಾಷಣದ ಮುಖ್ಯಾಂಶಗಳು
- ಭಗವಾನ್ ಶ್ರೀರಾಮನ ‘ಸಂಕಲ್ಪ ಶಕ್ತಿ’ಯಿಂದ ನಾವು ಕಲಿಯಬೇಕಾಗಿದೆ. ನವ ಭಾರತವು ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ಹೊಸ ಹಂತವನ್ನು ಸಾಧಿಸುತ್ತದೆ.
- ಶ್ರೀರಾಮ ಯಾರನ್ನೂ ಬಿಡುವುದಿಲ್ಲ, ಯಾರಿಂದಲೂ ದೂರ ಸರಿಯುವುದಿಲ್ಲ.
- ಶ್ರೀರಾಮ ಲಲ್ಲಾ ಅವರ ‘ದರ್ಶನ’ ಮತ್ತು ನಂತರ ರಾಜ ರಾಮನ ‘ರಾಜ್ಯಾಭಿಷೇಕ’, ಈ ಅದೃಷ್ಟವು ಭಗವಾನ್ ರಾಮನ ಕೃಪೆಯಿಂದ ಮಾತ್ರ ದೊರೆಯುತ್ತದೆ. ನಾವು ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಈ ದೀಪಾವಳಿ ಬಂದಿದೆ. ಭಗವಾನ್ ರಾಮನ ‘ಸಂಕಲ್ಪ ಶಕ್ತಿ’ ಭಾರತವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ.
- ನಿಶಾದ್ ರಾಜ್ ಪಾರ್ಕ್ ಅನ್ನು ಶೃಂಗ್ವೆರ್ಪುರ್ ಧಾಮ್ (ಪ್ರಯಾಗ್ ರಾ್ಜ್) ನಲ್ಲಿ ಸ್ಥಾಪಿಸಲಾಗುತ್ತಿದೆ. ಅಲ್ಲಿ 51 ಅಡಿ ಎತ್ತರದ ರಾಮ ಮತ್ತು ನಿಶಾದ್ ರಾಜ್ ನ ಪ್ರತಿಮೆಯನ್ನು ನಿರ್ಮಿಸಲಾಗುವುದು ಭಗವಾನ್ ರಾಮನ ಆದರ್ಶಗಳನ್ನು ಅನುಸರಿಸುವುದು ಎಲ್ಲಾ ಭಾರತೀಯರ ಕರ್ತವ್ಯ.
- ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಹಾತೊರೆಯುವ ಜನರಿಗೆ ಭಗವಾನ್ ರಾಮನ ಆದರ್ಶಗಳು ದಾರಿದೀಪ.
- ಇಂದು ದೀಪೋತ್ಸವದಲ್ಲಿ, ನಾವು ಭಗವಾನ್ ರಾಮನಿಂದ ಕಲಿಯುವ ನಮ್ಮ ಸಂಕಲ್ಪವನ್ನು ಪುನರಾವರ್ತಿಸಬೇಕಾಗಿದೆ. ರಾಮನನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಕರೆಯುತ್ತಾರೆ. ಮರ್ಯಾದೆ, ಗೌರವವನ್ನು ಹೊಂದಲು ಮತ್ತು ಗೌರವವನ್ನು ನೀಡಲು ಕಲಿಸುತ್ತದೆ.
- ದೆಹಲಿಯ ಹೃದಯಭಾಗದಲ್ಲಿರುವ ಬ್ರಿಟಿಷರ ಕಾಲದ ರಾಜಪಥವನ್ನು ಮರುನಾಮಕರಣ ಮಾಡಲು ಪ್ರೇರಣೆ ನೀಡಿದವರು ಶ್ರೀರಾಮ.
Published On - 6:20 pm, Sun, 23 October 22