AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುತ್ತಲೂ ಆವರಿಸಿದ ಹೊಂಜು, ದೆಹಲಿಯಲ್ಲಿ ಸತತ 8ನೇ ದಿನ ಹದಗೆಟ್ಟ ಗಾಳಿಯ ಗುಣಮಟ್ಟ

ದೆಹಲಿಯಲ್ಲಿ ಒಟ್ಟಾರೆ AQI ಭಾನುವಾರ ಬೆಳಗ್ಗೆ 10 ಗಂಟೆಗೆ 243 ರಷ್ಟಿತ್ತು. ಕಳೆದ ಸಂಜೆ 265 ರಷ್ಟಿತ್ತು. ಸೋಮವಾರ ದೀಪಾವಳಿ ಆಚರಣೆ ನಂತರ ವಾಯು ಮಾಲಿನ್ಯ ಮತ್ತಷ್ಟು ಹೆಚ್ಚಲಿದೆ

ಸುತ್ತಲೂ ಆವರಿಸಿದ ಹೊಂಜು, ದೆಹಲಿಯಲ್ಲಿ ಸತತ 8ನೇ ದಿನ ಹದಗೆಟ್ಟ ಗಾಳಿಯ ಗುಣಮಟ್ಟ
ದೆಹಲಿ ವಾಯು ಮಾಲಿನ್ಯ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 23, 2022 | 4:09 PM

Share

ದೆಹಲಿ: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಹತ್ತಿರದ ನಗರಗಳಲ್ಲಿ ವಿಷಕಾರಿ ಹೊಗೆ ಆವರಿಸಿದ್ದು ಗಾಳಿಯ ಗುಣಮಟ್ಟವು ಹದಗೆಟ್ಟಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹದಗೆಡುವ ನಿರೀಕ್ಷೆಯಿದೆ. ಭಾನುವಾರ ಸತತ ಎಂಟನೇ ದಿನವೂ ದೆಹಲಿಯ ಗಾಳಿಯ ಗುಣಮಟ್ಟ ‘ಕಳಪೆ’ ವಿಭಾಗದಲ್ಲಿ ದಾಖಲಾಗಿದೆ ಎಂದು ವರದಿಗಳು ಸೂಚಿಸಿವೆ. ದೀಪಾವಳಿ ಆಚರಣೆಯೊಂದಿಗೆ ಗಾಳಿಯ ಗುಣಮಟ್ಟ ಸೂಚ್ಯಂಕವು (AQI) ಮತ್ತಷ್ಟು ತೀವ್ರ ಆಗಬಹುದು. ಬೆಳೆ ತ್ಯಾಜ್ಯ ಸುಡುವಿಕೆಯ ಹೊಗೆ ಮತ್ತು ಇತರ ಅಂಶಗಳು ಕೂಡಾ ಇದಕ್ಕೆ ಕಾರಣವಾಗಬಹುದು. ದೆಹಲಿಯಲ್ಲಿ ಒಟ್ಟಾರೆ AQI ಭಾನುವಾರ ಬೆಳಗ್ಗೆ 10 ಗಂಟೆಗೆ 243 ರಷ್ಟಿತ್ತು. ಕಳೆದ ಸಂಜೆ 265 ರಷ್ಟಿತ್ತು. ಸೋಮವಾರ ದೀಪಾವಳಿ ಆಚರಣೆ ನಂತರ ವಾಯು ಮಾಲಿನ್ಯ ಮತ್ತಷ್ಟು ಹೆಚ್ಚಲಿದೆ ಪ್ರತಿ ವರ್ಷ ದೀಪಾವಳಿಯ ಆಸುಪಾಸಿನಲ್ಲಿ ರಾಷ್ಟ್ರ ರಾಜಧಾನಿಯು ತೀವ್ರ ಮಾಲಿನ್ಯದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜನರು ಪಟಾಕಿಗಳನ್ನು ಸಿಡಿಸುವುದರಿಂದ ಅತಿ ಸೂಕ್ಷ್ಮವಾದ PM2.5 ಕಣಗಳ (ಗಾಳಿಯಲ್ಲಿನ ಹಾನಿಕಾರಕ ಭಾರೀ ಲೋಹಗಳು ಮತ್ತು ವಿಷಕಾರಿ ರಾಸಾಯನಿಕ ಸಂಯುಕ್ತಗಳು) ಸಾಂದ್ರತೆ ಮತ್ತಷ್ಟು ಹೆಚ್ಚಾಗುತ್ತದೆ.

ಏತನ್ಮಧ್ಯೆ, ಈ ವರ್ಷ ತ್ಯಾಜ್ಯ ಸುಡುವಿಕೆಯಿಂದ ಉಂಟಾಗುವ ಮಾಲಿನ್ಯಕಾರಕಗಳು ಗಾಳಿಯ ವೇಗ ಕಡಿಮೆ ಗ ಆಗಿರುವುದಿಂದಕಡಿಮೆಯಾಗಿದೆ. “ಆದಾಗ್ಯೂ, ಸೋಮವಾರ ಮಧ್ಯಾಹ್ನದಿಂದ ಗಾಳಿಯ ದಿಕ್ಕು ಮತ್ತು ವೇಗವು ತುಂಬಾ ಅನುಕೂಲಕರವಾಗಿರುತ್ತದೆ. ಇದು ಅಕ್ಟೋಬರ್ 25 ಬೆಳೆ ತ್ಯಾಜ್ಯ ಸುಡುವಿಕೆಯಿಂದಾಗಿ ದೆಹಲಿಯ PM2.5 ಮಾಲಿನ್ಯದಲ್ಲಿ 15-18 ಶೇಕಡಾಕ್ಕೆ ಹೆಚ್ಚಿಸುತ್ತದೆ. ಗಾಳಿಯ ಗುಣಮಟ್ಟವನ್ನು ‘ತೀವ್ರ’ ವರ್ಗಕ್ಕೆ ತಳ್ಳುತ್ತದೆ ಎಂದು SAFAR ನ ಸಂಸ್ಥಾಪಕ ಯೋಜನಾ ನಿರ್ದೇಶಕ ಗುಫ್ರಾನ್ ಬೇಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ ಮಾಲಿನ್ಯಕ್ಕೆ ಸೂಕ್ಷ್ಮವಾಗಿರುವ ಜನರು ಹೊರಗೆ ಅಡ್ಡಾಡುವುದು ಅಥವಾ ಭಾರೀ ಶ್ರಮವನ್ನು ಕಡಿಮೆ ಮಾಡಬಹೇಕೆಂದು ಸಫರ್ ಸಲಹೆ ನೀಡಿದೆ.ಅಂಥವರು ಆಗಾಗ್ಗೆ ವಿರಾಮ ತೆಗೆದುಕೊಳ್ಳಬೇಕು. “ಆಸ್ತಮಾಟಿಕ್ಸ್, ಕೆಮ್ಮು ಅಥವಾ ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬಂದರೆ ಔಷಧಿಯನ್ನು ಸಿದ್ಧವಾಗಿಡಿ. ಹೃದ್ರೋಗಿಗಳೇ, ಬಡಿತ, ಉಸಿರಾಟದ ತೊಂದರೆ ಅಥವಾ ಅಸಾಮಾನ್ಯ ಆಯಾಸ ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ” ಎಂದು ಸಂಸ್ಥೆ ಹೇಳಿದೆ.

ದೆಹಲಿ ಸರ್ಕಾರವು ಈ ವರ್ಷ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಸಿಡಿಸುವಿಕೆಯ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದೆ. ನಿಯಮ ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಿದೆ. ವಾಹನಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮುಂದಿನ ತಿಂಗಳು ಪ್ರಾರಂಭವಾಗಲಿರುವ ‘ರೆಡ್ ಲೈಟ್ ಆನ್ ಗಾಡಿ ಆಫ್’ ಅಭಿಯಾನವನ್ನು ಸಹ ಘೋಷಿಸಲಾಗಿದೆ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?