ಜೈ ಶ್ರೀರಾಮ್​​ಗೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್​ ಎಂದು ಕೂಗಿದ್ದ ಮಂಡ್ಯದ ಮುಸ್ಕಾನ್​ ಖಾನ್​ಗೆ ಆರ್​ಎಸ್​ಎಸ್​ ಮುಸ್ಲಿಂ ಘಟಕದ ಬೆಂಬಲ

ಮಹಿಳೆಯರಿಗೆ ಗೌರವ ಕೊಡಬೇಕು ಎಂಬುದನ್ನು ಹಿಂದು ಸಂಸ್ಕೃತಿ ಕಲಿಸಿದೆ. ಅವಳೆದುರು ಆಕ್ರಮಣಕಾರಿಯಾಗಿ ಜೈ ಶ್ರೀರಾಮ್​ ಘೋಷಣೆ ಮಾಡಿ, ಹೆದರಿಸಲು ನೋಡಿದ್ದು ತಪ್ಪು. ಆಕೆ ಹಿಜಾಬ್​ ಧರಿಸಲು ಸಂವಿಧಾನದಲ್ಲೇ ಹಕ್ಕು ನೀಡಲಾಗಿದೆ ಎಂದು ಆರ್​ಎಸ್​ಎಸ್​ ಮುಖಂಡ ಅನಿಲ್​ ಸಿಂಗ್ ಹೇಳಿದ್ದಾರೆ.

ಜೈ ಶ್ರೀರಾಮ್​​ಗೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್​ ಎಂದು ಕೂಗಿದ್ದ ಮಂಡ್ಯದ ಮುಸ್ಕಾನ್​ ಖಾನ್​ಗೆ ಆರ್​ಎಸ್​ಎಸ್​ ಮುಸ್ಲಿಂ ಘಟಕದ ಬೆಂಬಲ
ಮುಸ್ಕಾನ್ ಖಾನ್​
Follow us
TV9 Web
| Updated By: Lakshmi Hegde

Updated on:Feb 10, 2022 | 1:17 PM

ಅಯೋಧ್ಯಾ: ಕರ್ನಾಟಕ ಹಿಜಾಬ್​ ವಿವಾದದಲ್ಲಿ (Hijab Row in Karnataka) ಇದೀಗ ಸುದ್ದಿಯಾಗುತ್ತಿರುವುದು ಮುಸ್ಕಾನ್​ ಖಾನ್ ಎಂಬ ಬಾಲಕಿ. ಮಂಡ್ಯದ ಪಿಇಎಸ್​ ಕಾಲೇಜಿನ ವಿದ್ಯಾರ್ಥಿನಿಯಾದ ಈಕೆಗೆ ಆರ್​ಎಸ್​ಎಸ್​ನ ಮುಸ್ಲಿಂ ಘಟಕ, ಮುಸ್ಲಿಂ ರಾಷ್ಟ್ರೀಯ ಮಂಚ್​ ಬೆಂಬಲ ವ್ಯಕ್ತಪಡಿಸಿದೆ.  ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್​ ಘೋಷಣೆ ಕೂಗಿದವರ ಎದುರು ಅಲ್ಲಾಹು ಅಕ್ಬರ್​ ಎಂದು ಕೂಗಿದ ಈಕೆಯ ವಿಡಿಯೋ ರಾಷ್ಟ್ರಮಟ್ಟದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ಈಕೆ ಐರನ್​ ಲೇಡಿ ಎಂದಿದ್ದಾರೆ. ಅಷ್ಟೇ ಅಲ್ಲ ಜಮೀಯತ್ ಉಲಮಾ-ಇ-ಹಿಂದ್ (JuH) ಎಂಬ ಮುಸ್ಲಿಂ ಸಂಘಟನೆ ಬೀಬಿ ಮುಸ್ಕಾನ್ ಖಾನ್​ಗೆ 5 ಲಕ್ಷ ರೂಪಾಯಿ ನಗದನ್ನು ಘೋಷಣೆ ಮಾಡಿದೆ. 

ಇದೀಗ ಮುಸ್ಕಾನ್ ಖಾನ್​ಗೆ ಬೆಂಬಲ ಸೂಚಿಸಿದ ಮುಸ್ಲಿಂ ರಾಷ್ಟ್ರೀಯ ಮಂಚ್​, ಹಿಜಾಬ್​ ಎಂಬುದು ಭಾರತೀಯ ಸಂಸ್ಕೃತಿಯ ಒಂದು ಭಾಗ ಎಂದು ಹೇಳಿದೆ. ಮುಸ್ಲಿಂ ಘಟಕದ  ಅವಧ್ ಪ್ರಾಂತ್ಯದ ಸಂಚಾಲಕ್​ ಅನಿಲ್​ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿ, ಮುಸ್ಕಾನ್ ಖಾನ್​ ನಮ್ಮ ಸಮುದಾಯದ ಮಗಳು, ಸಹೋದರಿ. ಆಕೆಗೆ ಎದುರಾಗಿರುವ ಕಷ್ಟದ ಸಮಯದಲ್ಲಿ ಅವಳ ಪರ ನಾವು ನಿಲ್ಲುತ್ತೇವೆ ಎಂದಿದ್ದಾರೆ.

ಮಹಿಳೆಯರಿಗೆ ಗೌರವ ಕೊಡಬೇಕು ಎಂಬುದನ್ನು ಹಿಂದು ಸಂಸ್ಕೃತಿ ಕಲಿಸಿದೆ. ಅವಳೆದುರು ಆಕ್ರಮಣಕಾರಿಯಾಗಿ ಜೈ ಶ್ರೀರಾಮ್​ ಘೋಷಣೆ ಮಾಡಿ, ಹೆದರಿಸಲು ನೋಡಿದ್ದು ತಪ್ಪು. ಆಕೆ ಹಿಜಾಬ್​ ಧರಿಸಲು ಸಂವಿಧಾನದಲ್ಲೇ ಹಕ್ಕು ನೀಡಲಾಗಿದೆ. ಹಾಗೂ ಒಮ್ಮೆ ಆಕೆ ಕಾಲೇಜು ಕ್ಯಾಂಪಸ್​​ನಲ್ಲಿ ಅಲ್ಲಿನ ನಿಯಮ ಉಲ್ಲಂಘಿಸಿದಳು ಎಂದಾದರೆ, ಅದಕ್ಕೆ ಆ ಶಿಕ್ಷಣ ಸಂಸ್ಥೆ ಶಿಕ್ಷೆ ನೀಡುತ್ತದೆ.  ಅದು ಬಿಟ್ಟು ಹುಡುಗರು ಕೇಸರಿ ಶಾಲು ಧರಿಸಿ, ಜೈಶ್ರೀರಾಮ್​ ಎಂದು ಕೂಗುತ್ತ ಬಂದಿದ್ದು ತಪ್ಪು. ಇದು ನಿಜಕ್ಕೂ ಅನಿರೀಕ್ಷಿತ ಘಟನೆ. ಅವರೆಲ್ಲ ಹಿಂದು ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಅನಿಲ್ ಸಿಂಗ್ ಹೇಳಿದ್ದಾರೆ.  ಮುಸ್ಲಿಮ್​ ಸಮುದಾಯವೆಂಬುದು ನಮ್ಮ ಭ್ರಾತೃ ಸಮುದಾಯ. ಅವರನ್ನು ಅವರ ಸಂಸ್ಕೃತಿಯೊಂದಿಗೇ ನಾವು ಸ್ವೀಕರಿಸಬೇಕು ಎಂದಿದ್ದಾರೆ.

ಮುಸ್ಕಾನ್ ಖಾನ್​ ಮಂಡ್ಯ ಕಾಲೇಜಿನಲ್ಲಿ ಬಿ.ಕಾಮ್​ ಎರಡನೇ ವರ್ಷದ ಪದವಿ ಓದುತ್ತಿದ್ದಾರೆ. ಹಿಜಾಬ್​-ಕೇಸರಿ ಶಾಲು ವಿವಾದದಲ್ಲಿ ಸದ್ಯ ತುಂಬ ಪ್ರಚಲಿತದಲ್ಲಿರುವ ಹೆಸರು.  ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ನಾನು ಅಸೈನ್​ಮೆಂಟ್ ಕೊಡಲು ಕಾಲೇಜಿಗೆ ಬಂದಿದ್ದೆ. ಆದರೆ ನಾನು ನನ್ನ ಸ್ಕೂಟರ್​ ಇಳಿದು, ಕಾಲೇಜಿನ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದಂತೆ ಒಂದಷ್ಟು ಹುಡುಗರು ಜೈ ಶ್ರೀರಾಮ್​ ಎಂದು ದೊಡ್ಡದಾಗಿ ಘೋಷಣೆ ಕೂಗುತ್ತ ಬಂದರು. ಅದಕ್ಕೆ ಪ್ರತಿಯಾಗಿ ನಾನು ಅಲ್ಲಾ ಹು ಅಕ್ಬರ್​ ಎಂದೆ ಎಂದು ಹೇಳಿದ್ದಾಳೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಟ್ವೀಟ್, ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆಗೆ ಎಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

Published On - 1:17 pm, Thu, 10 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ