ಕರ್ನಾಟಕ ಹಿಜಾಬ್​ ವಿವಾದದ ಬಗ್ಗೆ ಮಾತನಾಡಿದ್ದ ಪಾಕಿಸ್ತಾನಕ್ಕೆ ಅಸಾದುದ್ದೀನ್ ಓವೈಸಿ ಖಡಕ್​ ತಿರುಗೇಟು; ನರಕಕ್ಕೆ ಹೋಗಿ ಎಂದ ಸಂಸದ

ನೀವು ಭಾರತದತ್ತ ನೋಡಲೇಬೇಡಿ. ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಲೂ ಬೇಡಿ. ನೀವು ನಿಮ್ಮ ಬಲೂಚಿಸ್ತಾನ ಪ್ರತಿಭಟನೆಯಂಥ ಇನ್ನೂ ಅನೇಕ ಜಂಜಾಟಗಳನ್ನು ಮೊದಲು ಸರಿಪಡಿಸಿಕೊಳ್ಳಿ. ಭಾರತದಲ್ಲಿ ಇರುವ ಆಂತರಿಕ ಸಮಸ್ಯೆಗಳನ್ನು ನಾವೆಲ್ಲ ಸೇರಿ ಸರಿಪಡಿಸುತ್ತೇವೆ ಎಂದು ಓವೈಸಿ ಪಾಕಿಗಳಿಗೆ ತಿರುಗೇಟು ನೀಡಿದ್ದಾರೆ.

ಕರ್ನಾಟಕ ಹಿಜಾಬ್​ ವಿವಾದದ ಬಗ್ಗೆ ಮಾತನಾಡಿದ್ದ ಪಾಕಿಸ್ತಾನಕ್ಕೆ ಅಸಾದುದ್ದೀನ್ ಓವೈಸಿ ಖಡಕ್​ ತಿರುಗೇಟು; ನರಕಕ್ಕೆ ಹೋಗಿ ಎಂದ ಸಂಸದ
ಅಸಾದುದ್ದೀನ್ ಓವೈಸಿ
Follow us
TV9 Web
| Updated By: Lakshmi Hegde

Updated on: Feb 10, 2022 | 10:56 AM

ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್​ ವಿವಾದದ (Karnataka Hijab Row) ಬಗ್ಗೆ ಪಾಕಿಸ್ತಾನ (Pakistan) ಕೂಡ ಪ್ರತಿಕ್ರಿಯೆ ನೀಡಿದೆ. ಅಲ್ಲಿನ ಇಬ್ಬರು ಸಚಿವರಾದ ಶಾ ಮೊಹಮ್ಮದ್​ ಖುರೇಷಿ ಮತ್ತು ಫಾವದ್​ ಚೌಧರಿ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಪಾಕಿಸ್ತಾನ ಮೂಲದ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್​ ಕೂಡ ಟ್ವೀಟ್ ಮಾಡಿ, ಹಿಜಾಬ್​ಗಾಗಿ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಿರುವುದು ಭಯಾನಕ ಎಂದಿದ್ದರು. ಹೀಗೆ ಭಾರತದಲ್ಲಿ ನಡೆಯುತ್ತಿರುವ ವಿವಾದದಕ್ಕೆ ಮೂಗು ತೂರಿಸಿದ ಪಾಕಿಸ್ತಾನದ ವಿರುದ್ಧ ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi)ಕಿಡಿಕಾರಿದ್ದಾರೆ. ಈ ಪಾಕಿಸ್ತಾನ ನರಕಕ್ಕೆ ಹೋಗಲಿ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅಸಾದುದ್ದೀನ್ ಓವೈಸಿ, ಪಾಕಿಸ್ತಾನ ನರಕಕ್ಕೆ ಹೋಗಲಿ. ನಾವ್ಯಾವತ್ತೂ ಜಿನ್ನಾ ಹೆಸರನ್ನು ಉಲ್ಲೇಖಿಸುವುದಿಲ್ಲ. ಮತ್ತೆ ನೀವ್ಯಾಕೆ ಭಾರತದ ಆಂತರಿಕ ವಿಚಾರಕ್ಕೆ ಮೂಗು ತೂರಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್​​ ಮೇಲೆ ದಾಳಿಯಾಗಿದ್ದು ಪಾಕಿಸ್ತಾನದಲ್ಲಿಯೇ. ಅದರಿಂದಾಗಿ ಆಕೆ ಪಾಕಿಸ್ತಾನವನ್ನೇ ತೊರೆಯುವಂತಾಯ್ತು. ಆದರೆ ನಮ್ಮ ದೇಶದಲ್ಲಿ ನಮ್ಮ ಹೆಣ್ಣುಮಕ್ಕಳು ಇಲ್ಲಿಯೇ ಧೈರ್ಯವಾಗಿ ಶಿಕ್ಷಣ ಕಲಿಯುತ್ತಿದ್ದಾರೆ. ಅಷ್ಟೇ ಅಲ್ಲ, ಆ ದೇಶದಲ್ಲಿ ಮುಸ್ಲಿಮೇತರರು ಪ್ರಧಾನಿಯಾಗಲು ಸಂವಿಧಾನದಲ್ಲಿ ಅವಕಾಶವನ್ನೇ ಕೊಟ್ಟಿಲ್ಲ. ಇಷ್ಟೆಲ್ಲ ಸಮಸ್ಯೆಗಳು ನಿಮ್ಮ ದೇಶದಲ್ಲೇ ಇರುವಾಗ ಭಾರತದ ಬಗ್ಗೆ ಮಾತನಾಡಲು ಬರಬೇಡಿ ಎಂದು ಓವೈಸಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.

ನೀವು ಭಾರತದತ್ತ ನೋಡಲೇಬೇಡಿ. ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಲೂ ಬೇಡಿ. ನೀವು ನಿಮ್ಮ ಬಲೂಚಿಸ್ತಾನ ಪ್ರತಿಭಟನೆಯಂಥ ಇನ್ನೂ ಅನೇಕ ಜಂಜಾಟಗಳನ್ನು ಮೊದಲು ಸರಿಪಡಿಸಿಕೊಳ್ಳಿ. ಭಾರತದಲ್ಲಿ ಇರುವ ಆಂತರಿಕ ಸಮಸ್ಯೆಗಳನ್ನು ನಾವೆಲ್ಲ ಸೇರಿ ಸರಿಪಡಿಸುತ್ತೇವೆ ಎಂದು ಓವೈಸಿ ಪಾಕಿಸ್ತಾನಿಗಳಿಗೆ ಖಡಕ್​ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅಂದರೆ ಪಾಕಿಸ್ತಾನದಲ್ಲಿ ಇಮ್ರಾನ್​ ಖಾನ್​ ಸರ್ಕಾರದ ವಿರುದ್ಧ ಈಗಾಗಲೇ ಅನೇಕರು ತಿರುಗಿಬಿದ್ದಿದ್ದಾರೆ. ಕಾಲುಬುಡದಲ್ಲಿ ಅಷ್ಟು ಸಮಸ್ಯೆ ಇಟ್ಟುಕೊಂಡು ಭಾರತದತ್ತ ಯಾಕೆ ನೋಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಏನು ಹೇಳಿದ್ದರು ಪಾಕ್ ಸಚಿವರು?

ಮಾಹಿತಿ ಇಲಾಖೆ ಸಚಿವರಾಗಿರುವ ಫಾವದ್​ ಚೌಧರಿ ಟ್ವೀಟ್ ಮಾಡಿ, ಪ್ರಧಾನಿ ಮೋದಿಯವರ ಭಾರತದಲ್ಲಿ ಈಗೇನು ನಡೆಯುತ್ತಿದೆಯೋ ಅದು ಭಯಹುಟ್ಟಿಸುವಂತಿದೆ. ಅಸ್ಥಿರ ನಾಯಕತ್ವದಿಂದಾಗಿ ಭಾರತದ ಸಮಾಜ ಅತ್ಯಂತ ವೇಗವಾಗಿ ಅವನತಿಯಾಗುತ್ತಿದೆ. ಇತರ ನಾಗರಿಕರು ಉಳಿದ ಉಡುಪುಗಳನ್ನು ಧರಿಸುವುದು ಹೇಗೆ ಅವರ ವೈಯಕ್ತಿಕ ಆಯ್ಕೆಯೋ, ಹಿಜಾಬ್​ ಧರಿಸುವುದೂ ಕೂಡ ಮುಸ್ಲಿಂ ಹೆಣ್ಣುಮಕ್ಕಳ ವೈಯಕ್ತಿಕ ಆಯ್ಕೆ ಎಂದು ಹೇಳಿದ್ದರು.

ಹಾಗೇ, ಪಾಕ್ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಖುರೇಷಿ ಟ್ವೀಟ್ ಮಾಡಿ,  ಮುಸ್ಲಿಂ ಹೆಣ್ಣುಮಕ್ಕಳನ್ನು ಅವರು ಧರಿಸುವ ಹಿಜಾಬ್​ ಕಾರಣಕ್ಕೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದೆಂದರೆ ಅದು ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಸಮಾಧಿ ಮಾಡಿದಂತೆ.  ಮುಸ್ಲಿಮರನ್ನು ನಿರ್ಬಂಧಿಸಲು ಭಾರತ ಮಾಡುತ್ತಿರುವ ಇಂಥ ಪ್ರಯತ್ನಗಳನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು.

ಮತ್ತೊಂದೆಡೆ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್​, ಹಿಜಾಬ್​ ಅಥವಾ ಶಿಕ್ಷಣ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜು ಬಲವಂತ ಮಾಡುತ್ತಿದೆ. ಹಿಜಾಬ್ ಧರಿಸಿಬಂದಿದ್ದಾರೆ ಎಂಬ ಕಾರಣಕ್ಕೆ ಹೆಣ್ಣುಮಕ್ಕಳನ್ನು ಕ್ಲಾಸ್​ ಒಳಗೆ ಬಿಡದೆ ಇರುವುದು ನಿಜಕ್ಕೂ ಭಯಾನಕ. ಹುಡುಗಿಯರು ಹೆಚ್ಚು ಬಟ್ಟೆ ಧರಿಸುವುದಕ್ಕೆ ಮತ್ತು ಕಡಿಮೆ ಬಟ್ಟೆ ಧರಿಸುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸುವುದು ಯಾವಾಗಿನಿಂದಲೂ ಇದ್ದೇಇದೆ. ಆದರೆ ಹಿಜಾಬ್​​ ಧರಿಸಿ ಬರುತ್ತಾರೆಂದು ಮುಸ್ಲಿಂ ಮಹಿಳೆಯರನ್ನು ತುಚ್ಛವಾಗಿ ಕಾಣಬಾರದು ಎಂಬ ಸಲಹೆಯನ್ನೂ ನೀಡಿದ್ದರು.

ಇದನ್ನೂ ಓದಿ: ಲೋಕಸಭೆಯಲ್ಲಿ ಸಂಸದರು ತಮಿಳಿನಲ್ಲಿ ಕೇಳಿದ ಪ್ರಶ್ನೆಗೆ ಸಚಿವರಿಂದ ಹಿಂದಿಯಲ್ಲಿ ಉತ್ತರ, ಇದು ಅವಮಾನ ಎಂದ ಶಶಿ ತರೂರ್

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್