ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳಿಗೆ ಇಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಕೊಡಿ: ಐಎಂಎ ಸಲಹೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 05, 2022 | 7:41 AM

ಈ ವಿದ್ಯಾರ್ಥಿಗಳನ್ನು ಭಾರತದ ಮೆಡಿಕಲ್ ಕಾಲೇಜುಗಳಿಗೆ ಸೇರಿಸುವ ಕುರಿತು ಸರಿಯಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದೆ.

ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳಿಗೆ ಇಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಕೊಡಿ: ಐಎಂಎ ಸಲಹೆ
ಉಕ್ರೇನ್​ನಿಂದ ಹಿಂದಿರುಗುತ್ತಿರುವ ಭಾರತದ ವಿದ್ಯಾರ್ಥಿಗಳು
Follow us on

ದೆಹಲಿ: ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಭಾರತಕ್ಕೆ ಹಿಂದಿರುಗಿರುವ ವಿದ್ಯಾರ್ಥಿಗಳಿಗೆ ಇಲ್ಲಿನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿಯೇ ಪ್ರವೇಶ ಕಲ್ಪಿಸಬೇಕು ಎಂದು ಭಾರತೀಯ ವೈದ್ಯಕೀಯ ಒಕ್ಕೂಟ (Indian Medical Association – IMA) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಭಾರತಕ್ಕೆ ಬಂದಿರುವ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆವರಿಸಿರುವ ಕಾರ್ಮೋಡ ಬದಿಗೆ ಸರಿಸಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಈ ವಿದ್ಯಾರ್ಥಿಗಳನ್ನು ಭಾರತದ ಮೆಡಿಕಲ್ ಕಾಲೇಜುಗಳಿಗೆ ಸೇರಿಸುವ ಕುರಿತು ಸರಿಯಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದೆ.

ಉಕ್ರೇನ್​ನಲ್ಲಿರುವ ವೈದ್ಯಕೀಯ ಶಿಕ್ಷಣ ವಿಭಾಗದಿಂದ ಈ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಗತಿ ಮತ್ತು ವಿವಿಧ ಹಂತದ ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳ ಮಾಹಿತಿ ಪಡೆದುಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಭಾರತದ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬೇಕು. ತೇರ್ಗಡೆಯಾದ ನಂತರ ಈ ವಿದ್ಯಾರ್ಥಿಗಳನ್ನು ಭಾರತದಲ್ಲಿಯೇ ವಿದ್ಯಾಭ್ಯಾಸ ಮಾಡಿ, ಪದವಿ ಪಡೆದವರ ಸರಿಸಮನಾಗಿ ಪರಿಗಣಿಸಬೇಕು. ಅವರದು ವಿದೇಶದಲ್ಲಿ ಪಡೆದ ಪದವಿ ಎನಿಸಿಕೊಳ್ಳುವುದಿಲ್ಲ ಎಂದು ಹೇಳಿದೆ.

ಉಕ್ರೇನ್​ನಲ್ಲಿ ಪ್ರವೇಶ ಪಡೆದಿದ್ದ ಭಾರತದ ವೈದ್ಯಕೀಯ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿದೆ. ವೈದ್ಯಕೀಯ ಪದವಿ ತರಗತಿಗಳ ವಿವಿಧ ಹಂತಗಳಲ್ಲಿ ಇವರು ಅಭ್ಯಾಸ ಮಾಡುತ್ತಿದ್ದವರು. ಉಕ್ರೇನ್​ನ ಸದ್ಯದ ಬಿಕ್ಕಟ್ಟು ಎಂದು ಪರಿಹಾರ ಕಾಣಲಿದೆ ಎಂಬುದು ಅಸ್ಪಷ್ಟವಾಗಿದೆ. ಈ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಲು ಬಿಡಬಾರದು ಎಂದು ಐಎಂಎ ಕೋರಿದೆ.

ಚುರುಕಾಯ್ತು ರಕ್ಷಣಾ ಕಾರ್ಯಾಚರಣೆ

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್ ಕಾರ್ಯಾಚರಣೆ ಚುರುಕುಗೊಂಡಿದೆ. ಇಂದು ಉಕ್ರೇನ್​ನಿಂದ ಭಾರತಕ್ಕೆ 16 ವಿಮಾನಗಳು ಬರುವ ನಿರೀಕ್ಷಿಯಿದೆ. ‘ಆಪರೇಷನ್ ಗಂಗಾ’ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೆ 11,000 ಭಾರತೀಯರನ್ನು ಏರ್​ಲಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: Russia Ukraine War Live: ಅಮೆರಿಕ ಕಂಪನಿಗಳನ್ನು ನಿರ್ಬಂಧಿಸಿದ ರಷ್ಯಾ, ಉಕ್ರೇನ್​ನಿಂದ ಭಾರತೀಯರನ್ನು ಕರೆತರಲು ಸತತ ಪ್ರಯತ್ನ

ಇದನ್ನೂ ಓದಿ: ಇನ್ನೂ ಖಾರ್ಕಿವ್​ನಲ್ಲಿ ಸಿಲುಕಿರುವವರಿಗೆ ರಷ್ಯಾದ ಮೂಲಕ ಬರುವುದೊಂದೇ ಉಳಿದಿರುವ ದಾರಿ ಎನ್ನುತ್ತಾರೆ ವಾಪಸ್ಸು ಬಂದಿರುವ ವಿದ್ಯಾರ್ಥಿ

Published On - 7:39 am, Sat, 5 March 22