ನವದೆಹಲಿ: ಈಗಾಗಲೇ ಭಾರತದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ (Covid-19 Vaccine) ನೀಡುವ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ (Free Vaccine) ಪಡೆಯಲು ಇಚ್ಛಿಸದವರು ನಿಗದಿತ ಹಣ ಪಾವತಿ ಮಾಡಿ ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಲಸಿಕೆ ಪಡೆಯಬಹುದು. ಆದರೆ, ಈ ಅಭಿಯಾನ ಶುರುವಾದ ಬಳಿಕ ದೇಶದಲ್ಲಿ ಕೋವ್ಯಾಕ್ಸಿನ್ (Covaxin) ಮತ್ತು ಕೋವಿಶೀಲ್ಡ್ (Covishield Vaccine) ಲಸಿಕೆಗಳ ಕೊರತೆ ಎದುರಾಗಿದೆ. ಇನ್ನೇನು ಮುಂದಿನ ವಾರದ ವೇಳೆಗೆ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ (Sputnik V Vaccine) ಭಾರತಕ್ಕೆ ಕಮರ್ಷಿಯಲ್ ಆಗಿ ಕಾಲಿಡಲಿದೆ.
ಮೇ 14ರಂದು ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಾಥಮಿಕ ಹಂತವಾಗಿ ಉತ್ಪಾದನೆ ಮಾಡಲಾಗಿತ್ತು. ಆದರೆ, ಈ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ರಷ್ಯಾ ನಿರ್ಧರಿಸಿದೆ. ಈಗಾಗಲೇ ಸ್ಪುಟ್ನಿಕ್ ವಿ ಲಸಿಕೆಗೆ ಬಹಳ ಆರ್ಡರ್ಗಳು ಬರುತ್ತಿರುವುದರಿಂದ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ಯೋಚಿಸಲಾಗಿದೆ.
ಭಾರತದಲ್ಲಿ 850 ಮಿಲಿಯನ್ ಡೋಸ್ ಗಳಿಗೂ ಹೆಚ್ಚು ಸ್ಪುಟ್ನಿಕ್ ಲಸಿಕೆಗಳನ್ನು ತಯಾರಿಸಲು ಯೋಚಿಸಲಾಗಿದೆ. ಪ್ರಪಂಚದಲ್ಲಿ ತಯಾರಾಗುವ ಸ್ಪುಟ್ನಿಕ್ ವಿ ಲಸಿಕೆಯ ಶೇ. 65ರಿಂದ 70ರಷ್ಟನ್ನು ಭಾರತದಲ್ಲಿ ತಯಾರಿಲು ನಿರ್ಧರಿಸಲಾಗಿದೆ. ಕೊರೋನಾ ವೈರಸ್ನ ರೂಪಾಂತರಿಯಾದ ಡೆಲ್ಟಾ ವೈರಸ್ ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಶೇ. 90ರಷ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಲಾಗಿದೆ.
ಆಲ್ಫಾ, ಬಟಾ, ಡೆಲ್ಟಾ ರೂಪಾಂತರಿ ಕೊರೋನಾ ವೈರಸ್ಗಳ ವಿರುದ್ಧ ಸ್ಪುಟ್ನಿಕ್ ವಿ ಲಸಿಕೆ ಹೋರಾಡಬಲ್ಲದು. ಈ ರೂಪಾಂತರಿ ವೈರಸ್ಗಳು ಮೂಲಕ ಕೋವಿಡ್ ವೈರಸ್ಗಿಂತಲೂ ಅಪಾಯಕಾರಿಯಾಗಿವೆ. ಸ್ಪುಟ್ನಿಕ್ ವಿ ಲಸಿಕೆಯು ಈಗಾಗಲೇ ಭಾರತ ಸೇರಿ 67 ರಾಷ್ಟ್ರಗಳಲ್ಲಿ ನೋಂದಣಿಯಾಗಿದೆ. ಮೇ ತಿಂಗಳಲ್ಲಿ ಮೊದಲ ಬಾರಿಗೆ ಹೈದರಾಬಾದ್ನಲ್ಲಿ ಚಾಲನೆಗೊಂಡ ಸ್ಪುಟ್ನಿಕ್ ವಿ ಲಸಿಕೆಯನ್ನು ಈಗಾಗಲೇ ಭಾರತದ 50 ನಗರಗಳಿಗೆ ವಿತರಿಸಲಾಗಿದೆ. ಬೆಂಗಳೂರು, ವಿಜಾಗ್, ಮುಂಬೈ, ಕೊಲ್ಕತ್ತಾ, ದೆಹಲಿ, ಚೆನ್ನೈ, ವಿಜಯವಾಡ, ಕೊಲ್ಲಾಪುರ, ಕೊಚ್ಚಿ, ರಾಯ್ಪುರ, ಚಂಡೀಗಢ, ಪುಣೆ, ನಾಗ್ಪುರ, ನಾಸಿಕ್, ಕೊಯಮತ್ತೂರು, ರಾಂಚಿ, ಜೈಪುರ, ಲಕ್ನೋ, ಪಾಟ್ನಾ, ಭುವನೇಶ್ವರ, ಅಹಮದಾಬಾದ್, ರಾಜಕೋಟ್, ಭೂಪಾಲ್, ಧಾರವಾಡ, ಗುಲ್ಬರ್ಗ, ಗುಂಟೂರು, ಮಧುರೈ, ಮೈಸೂರು ಮುಂತಾದ ನಗರಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ: Sputnik V: ಶೀಘ್ರದಲ್ಲೇ ಬೆಂಗಳೂರು ಸೇರಿ 9 ನಗರಗಳಲ್ಲಿ ಲಭ್ಯವಾಗಲಿದೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ
ಇದನ್ನೂ ಓದಿ: Sputnik V Vaccine ಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ 30 ಲಕ್ಷ ಡೋಸ್
( Russia’s Sputnik V Vaccine Will be Launched Commercially by Next Week in India)
Published On - 11:46 am, Tue, 13 July 21