S20-G20 Summit: ಇಶಾ ಯೋಗ ಕೇಂದ್ರವು ಭಾರತದ ಹೊಸ ಗುರುತು: ಜಿ20 ಪ್ರತಿನಿಧಿಗಳ ಮೆಚ್ಚುಗೆ

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲಿ ಜಿ20ಯ ಎಸ್-20 (ವಿಜ್ಞಾನ-20) ಶೃಂಗಸಭೆ ನಡೆಯಿತು.

S20-G20 Summit: ಇಶಾ ಯೋಗ ಕೇಂದ್ರವು ಭಾರತದ ಹೊಸ ಗುರುತು: ಜಿ20 ಪ್ರತಿನಿಧಿಗಳ ಮೆಚ್ಚುಗೆ
ಜಿ20 ಗಣ್ಯರು
Image Credit source: ANI

Updated on: Jul 24, 2023 | 9:45 AM

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲಿ ಜಿ20ಯ ಎಸ್-20 (ವಿಜ್ಞಾನ-20) ಶೃಂಗಸಭೆ ನಡೆಯಿತು. ಅದರಲ್ಲಿ ಪಾಲ್ಗೊಂಡಿದ್ದ 100ಕ್ಕೂ ಅಧಿಕ ಗಣ್ಯರು, ಇಶಾ ಯೋಗ ಕೇಂದ್ರ ಭಾರತದ ಹೊಸ ಗುರುತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದ್ಗುರು ಅವರು ಇನ್ನರ್ ಎಂಜಿನಿಯರಿಂಗ್ ಟೆಕ್ನಾಲಜೀಸ್ ಫಾರ್ ವೆಲ್ ಬೀಯಿಂಗ್ ವಿಷಯದ ಕುರಿತು ಸಂವಾದ ನಡೆಸಿದರು.

ನಾವು ನಮ್ಮನ್ನು ಉತ್ತಮವಾಗಿ ರೂಪಿಸಿಕೊಳ್ಳುವುದು ಮತ್ತು ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಗತಿ ನಮ್ಮ ಬದ್ಧತೆಯಾಗಿದೆ. ಇದು ಮಾತ್ರ ನಮ್ಮ ಜೀವನಶೈಲಿಯನ್ನು ಬದಲಾಯಿಸಬಹುದು ಎಂದು ಸದ್ಗುರು ಅವರು ಹೇಳಿದರು.

ಈ ಸಮಾವೇಶದಲ್ಲಿ ವಿವಿಧ ದೇಶಗಳ ವಿಜ್ಞಾನಿಗಳು, ಶಿಕ್ಷಣ ತಜ್ಞರು ಸೇರಿದಂತೆ 35 ಮಂದಿ ವಿದೇಶಿ ಗಣ್ಯರು ಹಾಗೂ 65 ಮಂದಿ ಭಾರತೀಯ ಗಣ್ಯರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಹಸಿರು ಇಂಧನ, ಯುನಿವರ್ಸಲ್ ಹೋಲಿಸ್ಟಿಕ್ ಹೆಲ್ತ್, ವಿಜ್ಞಾನವನ್ನು ಸಮಾಜ ಮತ್ತು ಸಂಸ್ಕೃತಿಗೆ ಜೋಡಿಸುವ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಇಶಾ ಯೋಗ ಕೇಂದ್ರದಲ್ಲಿ ನಡೆದ ಸಮಾವೇಶದಲ್ಲಿ ವಿಶ್ವದ ವಿಜ್ಞಾನಿಗಳು, ಶಿಕ್ಷಣ ತಜ್ಞರು ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು. ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡಿದ ಜಿ20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳಿಗೆ ಭಾರತೀಯ ಸಂಸ್ಕೃತಿ ಮತ್ತು ಯೋಗ ಸಂಪ್ರದಾಯವನ್ನು ಪ್ರದರ್ಶಿಸಲಾಯಿತು . ಈ ವೇಳೆ ಆದಿಯೋಗಿ ಶಿವನ ಪ್ರತಿಮೆಯ ಮುಂದೆ ಪ್ರತಿನಿಧಿಗಳು ಚಿತ್ರಗಳನ್ನು ತೆಗೆಸಿಕೊಂಡರು.

ಸಂವಾದದ ಬಳಿಕ  ಗಣ್ಯರು ಮಾತನಾಡಿ, ಹಳೆಯ ವಿಜ್ಞಾನದ ಪರಿಭಾಷೆಗಳು ಈಗ ಅರ್ಥಕಳೆದುಕೊಂಡಿವೆ. ಜೀವನಾಧಾರಿತ ವಿಜ್ಞಾನದ ಬಗ್ಗೆ ಚರ್ಚೆ ನಡೆಸಲು ಫೌಂಡೇಶನ್ ಮಾಡಿಕೊಂಡಿರುವುದು ಉತ್ತಮವಾಗಿದೆ. ವಸುಧೈವ ಕುಟುಂಬಕಂ ಪರಿಕಲ್ಪನೆಯಲ್ಲಿ ಭಾರತ ಜಿ 20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವುದು ಬಹಳ ಅರ್ಥಪೂರ್ಣವಾಗಿದೆ.

ಈ ಕಾರ್ಯಕ್ರಮವನ್ನು ಯಾವುದೇ 5 ಹೋಟೆಲ್‌ನಲ್ಲಿ ನಡೆಸಬಹುದಾಗಿತ್ತು. ಆದರೆ ಇಶಾದಲ್ಲಿ ಆಯೋಜನೆ ಮಾಡಿರುವುದು ಉತ್ತಮ ವಿಚಾರ ಎಂದಿದ್ದಾರೆ. ಜಿ 20 ಸಭೆ ಜುಲೈ 21 ರಿಂದ ಜುಲೈ 22 ರವರೆಗೆ ನಡೆಯಿತು. ಇದು ಹಸಿರು ಭವಿಷ್ಯಕ್ಕಾಗಿ ಶುದ್ಧ ಇಂಧನ, ಸಾರ್ವತ್ರಿಕ ಸಮಗ್ರ ಆರೋಗ್ಯ ಮತ್ತು ಸಮಾಜ ಮತ್ತು ಸಂಸ್ಕೃತಿಯೊಂದಿಗೆ ವಿಜ್ಞಾನವನ್ನು ಸಂಪರ್ಕಿಸುವ ವಿಷಯಗಳ ಕುರಿತು ಚರ್ಚಿಸಲು ಸುಮಾರು 35 ವಿದೇಶಿ ಪ್ರತಿನಿಧಿಗಳು ಮತ್ತು ಪ್ರಪಂಚದಾದ್ಯಂತದ ಪ್ರತಿಷ್ಠಿತ ಸಂಸ್ಥೆಗಳಿಂದ 65 ಭಾರತೀಯ ಪ್ರತಿನಿಧಿಗಳನ್ನು ಒಟ್ಟುಗೂಡಿಸಿತು.

ಪ್ರತಿನಿಧಿಗಳಲ್ಲಿ ರಾಯಲ್ ಸೊಸೈಟಿ (ಯುನೈಟೆಡ್ ಕಿಂಗ್‌ಡಮ್), ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (ಯುಎಸ್‌ಎ), ಇಂಟರ್‌ನ್ಯಾಶನಲ್ ಕೌನ್ಸಿಲ್ ಆಫ್ ಸೈನ್ಸ್, (ಫ್ರಾನ್ಸ್), ಸಿಇಆರ್‌ಎನ್ (ಸ್ವಿಟ್ಜರ್ಲೆಂಡ್), ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ತಜ್ಞರು ಸೇರಿದ್ದಾರೆ. ಮಾರ್ಷಲ್ ಆರ್ಟ್ ಕಲರಿಪಯಟ್ಟು, ಭರತನಾಟ್ಯವನ್ನು ಇಶಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us