ಯುಪಿ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ‘ದಾಳ’: ಅಖಿಲೇಶ್ ಯಾದವ್
"ಸರ್ಕಾರ ಭ್ರಷ್ಟಾಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ ಎಂದು ಹೇಳುತ್ತಿತ್ತು. ಆದರೆ ಈಗ ಅವರ ನಾಯಕರೇ ನಮ್ಮ ರಾಜಕೀಯ ಜೀವನದಲ್ಲಿ ಅಂತಹ ಭ್ರಷ್ಟಾಚಾರವನ್ನು ನಾವು ನೋಡಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಿಡಿ ಕಾರಿದ್ದಾರೆ.
ಲಕ್ನೋ ಜುಲೈ 26: ಸಮಾಜವಾದಿ ಪಕ್ಷದ (Samajwadi Party) ಅಧ್ಯಕ್ಷ ಮತ್ತು ಉತ್ತರ ಪ್ರದೇಶದ (Uttar Pradesh) ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh yadav) ಶುಕ್ರವಾರ ಉತ್ತರ ಪ್ರದೇಶ ಬಿಜೆಪಿ ಘಟಕದಲ್ಲಿ ಬಿರುಕು ಇದೆ ಎಂಬ ವದಂತಿ ಬಗ್ಗೆ ಮತ್ತೆ ಮಾತನಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ದಾಳ ಎಂದು ಕೇಳಿದ್ದೇನೆ ಎಂದು ಹೇಳಿದರು. ಆದಾಗ್ಯೂ, ಮೌರ್ಯ ಅವರು ಅಖಿಲೇಶ್ ಹೇಳಿಕೆಗೆ ತಿರುಗೇಟು ನೀಡಿದ್ದು ಎಸ್‌ಪಿ ನಾಯಕ ಕಾಂಗ್ರೆಸ್‌ನ ದಾಳ ಎಂದಿದ್ದಾರೆ.
ಲಕ್ನೋದ ಎಸ್‌ಪಿ ಕೇಂದ್ರ ಕಚೇರಿಯಲ್ಲಿ ‘ಸಂವಿಧಾನ್-ಮಾನಸ್ತಂಭ’ವನ್ನು ಅನಾವರಣಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್, ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರವಾಗಿಯೂ ಯೋಗಿ ಆದಿತ್ಯನಾಥ್ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ. “ಸರ್ಕಾರ ಭ್ರಷ್ಟಾಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ ಎಂದು ಹೇಳುತ್ತಿತ್ತು. ಆದರೆ ಈಗ ಅವರ ನಾಯಕರೇ ನಮ್ಮ ರಾಜಕೀಯ ಜೀವನದಲ್ಲಿ ಅಂತಹ ಭ್ರಷ್ಟಾಚಾರವನ್ನು ನಾವು ನೋಡಿಲ್ಲ ಎಂದು ಹೇಳುತ್ತಿದ್ದಾರೆ” ಎಂದು ಮಾಜಿ ರಾಜ್ಯ ಸಚಿವರ ಹೇಳಿಕೆ ಉಲ್ಲೇಖಿಸಿ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಅಖಿಲೇಶ್ ಟ್ವೀಟ್
आज हमने ‘संविधान-मानस्तंभ’ की स्थापना करके अपने ‘संविधान के संरक्षण और मान’ के अपने संकल्प की पूर्ति की है।
सामाजिक न्याय के हमारे आंदोलन में ये ‘संविधान-मानस्तंभ’ हमारे PDA के सिद्धांत-सूत्र के लिए ‘पीडीए-प्रकाशस्तंभ’ के रूप में हमारा मार्ग सदैव प्रकाशित और आलोकित करता रहेगा।… pic.twitter.com/sP46surt6Y
— Akhilesh Yadav (@yadavakhilesh) July 26, 2024
‘ಕೆಲವರು ಕಾಲೆಳೆದಿರುವ ಕಾರಣ ಭ್ರಷ್ಟಾಚಾರ ಬಯಲಾಗುತ್ತಿದೆ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಯಾದವ್ ಅವರು ಬಿಜೆಪಿಯೊಳಗೆ ಬಿರುಕು ಇದೆ ಎಂಬ ವದಂತಿ ಬಗ್ಗೆ ಮಾತನಾಡಿದ್ದಾರೆ.
‘ಮೌರ್ಯ ಜಿ ಮೊಹ್ರೇ ಹೈ ‘ (ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ದಾಳ ), ದೆಹಲಿಯ ವೈ-ಫೈಗೆ ಪಾಸ್‌ವರ್ಡ್ ಎಂದು ನಾನು ಕೇಳಿದ್ದೇನೆ,” ಎಂದು ಹೇಳಿದ್ದಾರೆ.
ಮೌರ್ಯ ಟ್ವೀಟ್
सपा मुखिया @yadavakhilesh और इनका कुनबा पिछड़ों और दलितों का कट्टर जन्मजात विरोधी है। सपा का PDA बहुत बड़ा धोखा है। विदेशी शक्तियों के हाथों खेल रही कांग्रेस के मोहरा@yadavakhilesh ने प्रधानमंत्री @narendramodi को तीसरी बार प्रधानमंत्री बनने से रोकने में कोई कसर नहीं छोड़ी।
— Keshav Prasad Maurya (@kpmaurya1) July 26, 2024
ಅಖಿಲೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮೌರ್ಯ ಅವರು, ಎಸ್ ಪಿ ನಾಯಕ ಕಾಂಗ್ರೆಸ್ ಪಕ್ಷದ ದಾಳ,ಅವರು ಮೊದಲು ತಮ್ಮ ಪಕ್ಷವನ್ನು ಉಳಿಸಿಕೊಳ್ಳಿ ಎಂದಿದ್ದಾರೆ. ” ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಜಿ, ಕಾಂಗ್ರೆಸ್ ಪಕ್ಷದ ದಾಳ. ಅವರು ಬಿಜೆಪಿಯ ಬಗ್ಗೆ ತಪ್ಪು ಕಲ್ಪನೆಗಳನ್ನು ಬೆಳೆಸುವುದು, ಹಿಂದುಳಿದ ವರ್ಗಗಳನ್ನು ಗುರಿಯಾಗಿಸುವುದು ಮತ್ತು ಅವರನ್ನು ಅವಮಾನಿಸುವ ಬದಲು ಎಸ್‌ಪಿಯನ್ನು ಅಳಿವಿನಿಂದ ರಕ್ಷಿಸುವತ್ತ ಗಮನ ಹರಿಸಬೇಕು” ಎಂದು ಮೌರ್ಯ ಎಕ್ಸ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ‘ಜಗನ್ ರೆಡ್ಡಿ ಸರ್ಕಾರ ಆಂಧ್ರದ ಆರ್ಥಿಕತೆಯನ್ನು ನಾಶಪಡಿಸಿತು’:ಶ್ವೇತಪತ್ರ ಬಿಡುಗಡೆ ಮಾಡಿದ ಚಂದ್ರಬಾಬು ನಾಯ್ಡು
2027ರಲ್ಲಿ ಬಿಜೆಪಿ 2017ರ (ರಾಜ್ಯ ವಿಧಾನಸಭಾ ಚುನಾವಣೆಯ ಸಾಧನೆ) ಪುನರಾವರ್ತನೆಯಾಗಲಿದೆ. ಕಮಲ (ಬಿಜೆಪಿಯ ಚುನಾವಣಾ ಚಿಹ್ನೆ) ಅರಳಿದೆ ಮತ್ತು ಅರಳುತ್ತಲೇ ಇರುತ್ತದೆ ಎಂದು ಅವರು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ