ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಕಾಯಿದೆ ತಿದ್ದುಪಡಿಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಗಡಿ ಭಾಗದಲ್ಲಿ ಆರು ತಿಂಗಳ ಹಿಂದೆ ಭಾರಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರು ಇತ್ತೀಚೆಗೆ ತಮ್ಮ ಪತಿಭಟನೆಯನ್ನು ನಿಲ್ಲಿಸಿದ್ದರು. ಆದರೆ ಇದೀಗ ಮೇ 26ರಂದು ಬುಧವಾರ ಕರಾಳ ದಿನ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಸುಮಾರು 40ಕ್ಕೂ ಹೆಚ್ಚು ರೈತ ಒಕ್ಕೂಟಗಳ ಸಂಯುಕ್ತ ಕಿಸಾನ್ ಮೋರ್ಚಾವು ಇದೀಗ ಕೇಂದ್ರದ ಮೂರು ತಿದ್ದುಪಡಿಗಳನ್ನು ವಿರೋಧಿಸಿ ಮೇ 26ರಂದು ಕರಾಳ ದಿನ ಆಚರಿಸುವುದಾಗಿ ಘೋಷಿಸಿದೆ.
ಆ ವಿವಾದಿತ ಮೂರು ರೈತ ಕಾಯಿದೆಗಳ ವಿರುದ್ಧ ಪ್ರತಿಭಟನಾರ್ಥವಾಗಿ ರೈತರು ತಮ್ಮ ಮನೆಗಳಲ್ಲಿ, ತಮ್ಮ ವಾಹನಗಳಲ್ಲಿ ಮತ್ತು ತಮ್ಮ ಅಂಗಡಿಮುಂಗಟ್ಟುಗಳ ಎದುರು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಮೇ 26ರ ಕರಾಳ ದಿನವನ್ನು ಆಚರಿಸಬೇಕು. ಜೊತೆಗೆ ಪ್ರಧಾನಿ ಮೋದಿ ಅವರ ಆಕೃತಿಯನ್ನು ದಹಿಸಿ ಪ್ತತಿಭಟನೆ ನಡೆಸಬೇಕು ಎಂದು ರೈತ ನಾಯಕ ಬಲಬೀರ್ ಸಿಂಗ್ ರಾಜೇವಾಲ್ ವರ್ಚುಯಲ್ ಕಾನ್ಫರೆನ್ಸ್ ಮೂಲಕ ರೈತರಲ್ಲಿ ಮನವಿ ಮಾಡಿದ್ದಾರೆ.
ನಿರ್ದಿಷ್ಟವಾಗಿ ಮೇ 26ರಂದೇ ಏಕೆ ಕರಾಳ ದಿನ ಆಚರಿಸುತ್ತಿದ್ದೇವೆ ಅಂದ್ರೆ ಅಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಸರ್ಕಾರ ಸ್ಥಾಪಿಸಿ 7 ವರ್ಷಗಳಾಗಲಿದೆ. ಜೊತೆಗೆ ನಾವು ರೈತರೂ ಸಹ ಕೇಂದ್ರದ ಮೂರು ಕೃಷಿ ತಿದ್ದುಪಡಿ ಕಾಯಿದೆಗಳನ್ನು ವಿರೋಧಿಸಿ ಆಂದೋಲನ ಹಮ್ಮಿಕೊಂಡು ಆರು ತಿಂಗಳಾಗಲಿದೆ. ಹಾಗಾಗಿ ಆ ದಿನಕ್ಕೆ ಮಹತ್ವವಿದೆ ಎಂದು ಬಲಬೀರ್ ಸಿಂಗ್ ರಾಜೇವಾಲ್ ಹೇಳಿದ್ದಾರೆ. ಆರು ತಿಂಗಳ ಹಿಂದೆ, ನವೆಂಬರ್ 26ರಂದು ದೆಹಲಿ ಗಡಿ ಭಾಗದಲ್ಲಿ ರೈತರು ದೆಹಲಿ ಚಲೋ ಚಳವಳಿ ನಡೆಸಿದ್ದರು. ಅದಾದ ನಂತರ ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿ ಭಾಗಗಳಲ್ಲಿ ದೇಶಾದ್ಯಂತ ಆಗಮಿಸಿದ್ದ ಸಾವಿರಾರು ರೈತರು ಬೃಹತ್ ಆಂದೋಲನ ನಡೆಸುತ್ತಾ ಬಂದಿದ್ದರು.
ಮೂರು ಕೃಷಿ ತಿದ್ದುಪಡಿ ಕಾಯಿದೆಗಳ ವಾಪಸ್ ತೆಗೆದುಕೊಳ್ಳಬೇಕು ಎಂಬುದು ಮುಖ್ಯ ಬೇಡಿಕೆಯಾಗಿದೆ. ಇನ್ನು, ಇತ್ತೀಚೆಗೆ ರಸಗೊಬ್ಬರ ಬೆಲೆ ಏರಿಕಯಾಗಿದೆ. ಡೀಸೆಲ್ – ಪೆಟ್ರೋಲ್ ಬೆಲೆಯೂ ಗಗನಕ್ಕೆ ತಲುಪಿದೆ. ಕೇಂದ್ರದ ಇಂತಹ ಜನ ವಿರೋಧಿ ನೀತಿಗಳಿಂದಾಗಿ ರೈತಾಪಿ ವರ್ಗ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ರೈತ ನಾಯಕ ಬಲಬೀರ್ ಸಿಂಗ್ ರಾಜೇವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈತರು ಪ್ರಮುಖವಾಗಿ ಈ ಕೆಳಗಿನ ಮೂರು ತಿದ್ದುಪಡಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ನವೆಂಬರ್ – 2020 ರಿಂದ ದೆಹಲಿ ಗಡಿ ಭಾಗಗಳಲ್ಲಿ ಠಿಕಾಣಿ ಹೂಡಿ, ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಜೊತೆಗೆ ರೈತರ ಬೆಳಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲು ಹೊಸ ಕಾಯಿದೆ ಜಾರಿಗೆ ತರಬೇಕು ಎಂದೂ ಆ್ರಹಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವು ತಾನು ಜಾರಿಗೆ ತಂದಿರುವ ಮೂರೂ ಕೃಷಿ ತಿದ್ದುಪಡಿ ಕಾಯಿದೆಗಳು ರೈತ ಪರ ಇವೆ. ಹಾಗಾಗಿ ಅವುಗಳನ್ನು ಬದಲಾಯಿಸುವ ಮಾತೇ ಇಲ್ಲ ಎಂದು ಹೇಳಿದೆ. ಈ ಮಧ್ಯೆ. ರೈತ ನಾಯಕರೊಂದಿಗೆ ಅನೇಕ ಸುತ್ತಿನ ಮಾತುಕತೆಗಳನ್ನು ನಡೆಸಿದೆಯಾದರೂ ಯಾವುದೂ ಫಲಪ್ರದವಾಗಿಲ್ಲ.
1) Farmers’ Produce Trade and Commerce (Promotion and Facilitation) Act, 2020
2) Farmers’ (Empowerment and Protection) Agreement on Price Assurance and Farm Services Act, 2020 ಮತ್ತು
3) Essential Commodities (Amendment) Act, 2020
(Samyukta Kisan Morcha to observe May 26 as black day and to burn effigies of PM Narendra Modi in protest against Centres three farm laws)
Delhi Chalo: ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ‘ದೆಹಲಿ ಚಲೋ‘ಗೆ ಶತ ದಿನ; ರೈತ ಚಳವಳಿ ನಡೆದು ಬಂದಿದ್ದು ಹೀಗೆ..