AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ‘ಸಂಪೂರ್ಣ ಕ್ರಾಂತಿ ದಿನ್’​​ ಆಚರಣೆ ಮಾಡುತ್ತಿರುವ ರೈತ ಸಂಘಟನೆಗಳು; ಕೇಂದ್ರದ ವಿರುದ್ಧ ಮುಂದುವರಿದ ಸಮರ

ನಾವು ಸದ್ಯ ರಾಷ್ಟ್ರರಾಜಧಾನಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮನ್ನು ಹರ್ಯಾಣಕ್ಕೆ ಸ್ಥಳಾಂತರ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದ್ದು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಕೇಶ್​ ಟಿಕಾಯತ್​ ಹೇಳಿದ್ದಾರೆ.

ಇಂದು ‘ಸಂಪೂರ್ಣ ಕ್ರಾಂತಿ ದಿನ್’​​ ಆಚರಣೆ ಮಾಡುತ್ತಿರುವ ರೈತ ಸಂಘಟನೆಗಳು; ಕೇಂದ್ರದ ವಿರುದ್ಧ ಮುಂದುವರಿದ ಸಮರ
ಸಂಗ್ರಹ ಚಿತ್ರ
TV9 Web
| Updated By: Lakshmi Hegde|

Updated on: Jun 05, 2021 | 11:23 AM

Share

ದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂಥ ಕೊವಿಡ್​ ಸಂದರ್ಭದಲ್ಲೂ ತಮ್ಮ ಹೆಜ್ಜೆಯನ್ನು ಹಿಂದಿಟ್ಟಿಲ್ಲ. ಬದಲಿಗೆ ಒಂದೊಂದೇ ಹೊಸ ಅಸ್ತ್ರವನ್ನು ಕೇಂದ್ರ ಸರ್ಕಾರದ ವಿರುದ್ಧ ಪ್ರಯೋಗ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿ 7ವರ್ಷಗಳಾದ ದಿನವನ್ನು ಕರಾಳದಿನವನ್ನಾಗಿ ಆಚರಿಸಿದ್ದ ಸಂಯುಕ್ತ ಕಿಸಾನ್​ ಮೋರ್ಚಾ (SKM) ಮತ್ತಿತರ ರೈತ ಸಂಘಟನೆಗಳು ಇಂದು ಸಂಪೂರ್ಣ ಕ್ರಾಂತಿ ದಿನವನ್ನು ಆಚರಿಸುತ್ತಿದ್ದಾರೆ.

ಕಳೆದ ವರ್ಷ ಇದೇ ದಿನದಂದು ಅಂದರೆ ಜೂನ್​ 5ರಂದು ಕೇಂದ್ರ ಸರ್ಕಾರ ಮೂರು ರೈತ ಮತ್ತು ಜನವಿರೋಧಿ ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಮಾಡಿತು. ಆ ಕಾಯ್ದೆಗಳ ವಿರುದ್ಧ ಕಳೆದ ಆರು ತಿಂಗಳಿಂದಲೂ ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಅದನ್ನು ಹಿಂಪಡೆಯುವ ಭರವಸೆ ನೀಡುತ್ತಿಲ್ಲ. ಹಾಗಾಗಿ ಈ ದಿನವನ್ನು ಸಂಪೂರ್ಣ ಕ್ರಾಂತಿ ದಿವಸವನ್ನಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ರೈತ ಮೋರ್ಚಾಗಳು ಹೇಳಿಕೆ ಬಿಡುಗಡೆ ಮಾಡಿವೆ.

ಇಂದು ಸಂಪೂರ್ಣ ಕ್ರಾಂತಿ ದಿನದ ಅಂಗವಾಗಿ ದೇಶಾದ್ಯಂತ ಎಲ್ಲ ಬಿಜೆಪಿ ಶಾಸಕರು, ಸಂಸದರ ಮನೆ ಹೊರಗೆ, ಮೂರು ಕಾಯ್ದೆಗಳ ಪ್ರತಿಗಳನ್ನು ಸುಡಲಾಗುವುದು ಎಂದೂ ರೈತಸಂಘಟನೆ ತಿಳಿಸಿದೆ. ಯಾವ ಜಿಲ್ಲೆಯಲ್ಲಿ ಬಿಜೆಪಿ ಸಂಸದ, ಶಾಸಕರ ನಿವಾಸಗಳಿಲ್ಲವೋ, ಅಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದೂ ರೈತಸಂಘಟನೆಗಳು ಹೇಳಿಕೊಂಡಿವೆ.

ನಾವು ಸದ್ಯ ರಾಷ್ಟ್ರರಾಜಧಾನಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮನ್ನು ಹರ್ಯಾಣಕ್ಕೆ ಸ್ಥಳಾಂತರ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದ್ದು, ಅದಕ್ಕೆ ಅವಕಾಶ ನೀಡುವುದಿಲ್ಲ. ನಾವು ದೆಹಲಿಯನ್ನು ಬಿಡುವುದಿಲ್ಲ ಎಂದು ಭಾರತ್​ ಕಿಸಾನ್ ಯೂನಿಯನ್​ ನಾಯಕ ರಾಕೇಶ್​ ಟಿಕಾಯತ್​ ಹೇಳಿದ್ದಾರೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ರಂತೆ ಆಡುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಅವರು ಕಿಡಿಕಾರಿದ್ದರು.

ಮೂರು ಕೃಷಿ ಕಾಯ್ದೆಗಳ ವಿರುದ್ಧ 2020ರ ನವೆಂಬರ್​ನಿಂದಲೂ ಪಂಜಾಬ್​, ಪಶ್ಚಿಮ ಉತ್ತರಪ್ರದೇಶದ ಹಲವು ರೈತರು ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಅವುಗಳನ್ನು ಹಿಂಪಡೆಯಲು ಆಗ್ರಹಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಅದನ್ನು ಜಾರಿ ಮಾಡುವುದಿಲ್ಲ..ಆದರೆ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರವೂ ಪಟ್ಟು ಹಿಡಿದು ಕುಳಿತಿದೆ.

ಇದನ್ನೂ ಓದಿ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ವೈಯಕ್ತಿಕ ಖಾತೆಗೆ ನೀಡಿದ್ದ ಬ್ಲ್ಯೂಟಿಕ್​ನ್ನು ತೆಗೆದುಹಾಕಿದ್ದ ಟ್ವಿಟರ್​; ಕಾರಣವೇನು?