ಶಿಂದೆ ನಮ್ಮ ಜತೆ ಹಿಂದೆಂದೂ ಅಯೋಧ್ಯೆಗೆ ಬಂದಿರಲಿಲ್ಲ, ಶ್ರೀರಾಮ ದೇಶದ್ರೋಹಿಗಳಿಗೆ ಆಶೀರ್ವಾದ ಮಾಡುವುದಿಲ್ಲ: ರಾವತ್

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ(Eknath Shinde)ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇಂದು ಅಯೋಧ್ಯೆಗೆ ಭೇಟಿ ನೀಡಿರುವ ಕುರಿತು ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ. ಶಿಂದೆ ನಮ್ಮ ಜತೆ ಎಂದೂ ಅಯೋಧ್ಯೆಗೆ ಬಂದರಲಿಲ್ಲ, ಶ್ರೀರಾಮ ದೇಶದ್ರೋಹಿಗಳಿಗೆ ಎಂದೂ ಆಶೀರ್ವಾದ ಮಾಡುವುದಿಲ್ಲ ಎಂದಿದ್ದಾರೆ. ನಮಗೂ ಶ್ರೀರಾಮನ ಮೇಲೆ ನಂಬಿಕೆ ಇದೆ, ನಾನು ಕೂಡ ಹಲವು ಬಾರಿ ಅಯೋಧ್ಯೆಗೆ ಹೋಗಿದ್ದೇನೆ ಆಗ ನಮ್ಮೊಂದಿಗೆ ಯಾರೂ ಬಂದಿರಲಿಲ್ಲ, ಬಾಬ್ರಿ ವಿಚಾರ ಬಂದಾಗ ಓಡಿ ಹೋಗಿ ಈಗ ದೇಶದ್ರೋಹಿಗಳ ಹಿಂದೆ ಹೋಗುತ್ತಿದ್ದಾರೆ. ಅಂತವರಿಗೆ ಶ್ರೀರಾಮನ […]

ಶಿಂದೆ ನಮ್ಮ ಜತೆ ಹಿಂದೆಂದೂ ಅಯೋಧ್ಯೆಗೆ ಬಂದಿರಲಿಲ್ಲ, ಶ್ರೀರಾಮ ದೇಶದ್ರೋಹಿಗಳಿಗೆ ಆಶೀರ್ವಾದ ಮಾಡುವುದಿಲ್ಲ: ರಾವತ್
ಸಂಜಯ್ ರಾವತ್
Follow us
ನಯನಾ ರಾಜೀವ್
|

Updated on: Apr 09, 2023 | 2:16 PM

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ(Eknath Shinde)ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇಂದು ಅಯೋಧ್ಯೆಗೆ ಭೇಟಿ ನೀಡಿರುವ ಕುರಿತು ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ. ಶಿಂದೆ ನಮ್ಮ ಜತೆ ಎಂದೂ ಅಯೋಧ್ಯೆಗೆ ಬಂದರಲಿಲ್ಲ, ಶ್ರೀರಾಮ ದೇಶದ್ರೋಹಿಗಳಿಗೆ ಎಂದೂ ಆಶೀರ್ವಾದ ಮಾಡುವುದಿಲ್ಲ ಎಂದಿದ್ದಾರೆ. ನಮಗೂ ಶ್ರೀರಾಮನ ಮೇಲೆ ನಂಬಿಕೆ ಇದೆ, ನಾನು ಕೂಡ ಹಲವು ಬಾರಿ ಅಯೋಧ್ಯೆಗೆ ಹೋಗಿದ್ದೇನೆ ಆಗ ನಮ್ಮೊಂದಿಗೆ ಯಾರೂ ಬಂದಿರಲಿಲ್ಲ, ಬಾಬ್ರಿ ವಿಚಾರ ಬಂದಾಗ ಓಡಿ ಹೋಗಿ ಈಗ ದೇಶದ್ರೋಹಿಗಳ ಹಿಂದೆ ಹೋಗುತ್ತಿದ್ದಾರೆ. ಅಂತವರಿಗೆ ಶ್ರೀರಾಮನ ಆಶೀರ್ವಾದ ಸಿಗುವುದಿಲ್ಲ ಎಂದರು.

ಕಳೆದ 40 ವರ್ಷಗಳಿಂದ ನಾನು ಅಯೋಧ್ಯೆಗೆ ಹೋಗುತ್ತಿದ್ದೇನೆ, ಅಯೋಧ್ಯೆ ಪ್ರಕರಣದ ಚಳವಳಿಯಲ್ಲಿ ಭಾಗಿಯಾಗಿದ್ದೆ ಎಂದರು. ಇದೇ ಬಿಜೆಪಿ ಅಂದು ನಮ್ಮೊಂದಿಗೆ ಇರಲಿಲ್ಲ, ಬಾಬ್ರಿ ಮಸೀದಿ ವಿಚಾರ ಬಂದಾಗ ಓಡಿ ಹೋಗಿ ಈಗ ದೇಶದ್ರೋಹಿಗಳ ಬೆರಳುಗಳನ್ನು ಹಿಡಿದು ವಾಪಸಾಗುತ್ತಿದ್ದಾರೆ.

ಮತ್ತಷ್ಟು ಓದಿ: ಉದ್ಧವ್ ಠಾಕ್ರೆ ಆಪ್ತ ಸುಭಾಷ್ ದೇಸಾಯಿ ಪುತ್ರ ಭೂಷಣ್ ದೇಸಾಯಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾಗೆ ಸೇರ್ಪಡೆ

ಆದರೆ ಶ್ರೀರಾಮ ಅವರನ್ನು ಆಶೀರ್ವಧಿಸುತ್ತಾನೆ ಎಂದುಕೊಂಡಿದ್ದೀರಾ ಖಂಡಿತವಾಗಿಯೂ ಇಲ್ಲ, ಮುಂಬೈಗೆ ಮರಳಿದ ಬಳಿಕ ಸರ್ಕಾರದ ಪರಿಸ್ಥಿತಿ ಏನಾಗುತ್ತದೆ ನೋಡುತ್ತಿರಿ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಾಗಿದೆ, ಆಲಿಕಲ್ಲು ಮಳೆಯಾಗಿ ರೈತರ ಪರಿಸ್ಥಿತಿ ಹದಗೆಟ್ಟಿದೆ, ರೈತರು ಅಳಲು ತೋಡಿಕೊಂಡಿದ್ದಾರೆ. ಈ ಪರಿಸ್ಥಿತಿಯನ್ನು ನಿಭಾಯಿಸುವ ಬದಲು ಮುಖ್ಯಮಂತ್ರಿ ಆಯೋಧ್ಯೆಗೆ ತೆರಳಿದ್ದಾರೆ.

ಜೂನ್ 2022 ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮತ್ತು ಚುನಾವಣಾ ಆಯೋಗವು ಅವರ ನೇತೃತ್ವದ ಬಣಕ್ಕೆ ಶಿವಸೇನೆಯ ಮೂಲ ಚಿಹ್ನೆ ಬಿಲ್ಲು ಮತ್ತು ಬಾಣ ಪಡೆದ ನಂತರ ಶಿಂಧೆ ಅವರು ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ನಿರ್ಮಾಣ ಹಂತದಲ್ಲಿರುವ ರಾಮಮಂದಿರದಲ್ಲಿ ಮಹಾ ಆರತಿಯಲ್ಲಿ, ನಂತರ ಸಂಜೆ ಶರಾಯು ನದಿಯಲ್ಲಿ ಮಹಾ ಆರತಿಯಲ್ಲಿ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಅವರು ಭಾನುವಾರ ರಾತ್ರಿ ಮುಂಬೈಗೆ ಹಿಂತಿರುಗಲಿದ್ದಾರೆ ಎಂದು ಅವರ ಸಹಾಯಕರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು