ಮಹಾರಾಷ್ಟ್ರ ಶಾಸಕಾಂಗವನ್ನು ಚೋರ್ಮಂಡಲ್ ಎಂದ ಸಂಜಯ್ ರಾವುತ್; ಸದನದಲ್ಲಿ ಗದ್ದಲ, ಕಲಾಪ ಮುಂದೂಡಿಕೆ
ಹಿಂದಿನ ದಿನ ಕೊಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ, ರಾವತ್ ಅವರು "ವಿಧಿಮಂಡಲ" (ಶಾಸಕಾಂಗ) ಅನ್ನು "ಚೋರ್ ಮಂಡಸ್" ಎಂದು ಹೇಳಿದ್ದಕ್ಕೆ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ (Sanjay Raut) ಮಹಾರಾಷ್ಟ್ರ ಶಾಸಕಾಂಗವನ್ನು ಉಲ್ಲೇಖಿಸಿ ‘ಚೋರ್ ಮಂಡಲ್’ (chormandal) ಅಥವಾ ‘ಕಳ್ಳರ ಸಂಸ್ಥೆ’ ಎಂದು ಹೇಳಿರುವುದು ರಾಜ್ಯ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಸ್ಪೀಕರ್ ರಾಹುಲ್ ನಾರ್ವೇಕರ್ ರಾಜ್ಯಸಭಾ ಸದಸ್ಯರ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆಯ ನೋಟಿಸ್ ಸ್ವೀಕರಿಸಿದರು. ಹೇಳಿಕೆಯನ್ನು “ಗಂಭೀರ” ಎಂದು ಕರೆದ ನಾರ್ವೇಕರ್ ಅವರು ಈ ವಿಷಯವನ್ನು ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ. ರಾವುತ್ ಅವರ ಹೇಳಿಕೆಯಿಂದಾಗಿ ಸದನದಲ್ಲಿ ಗದ್ದಲವುಂಟಾಗಿದ್ದು ಸದನವನ್ನು ನಾಳೆಗೆ ಮುಂದೂಡಲಾಗಿದೆ.
ಹಿಂದಿನ ದಿನ ಕೊಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ, ರಾವತ್ ಅವರು “ವಿಧಿಮಂಡಲ” (ಶಾಸಕಾಂಗ) ಅನ್ನು “ಚೋರ್ ಮಂಡಸ್” ಎಂದು ಹೇಳಿದ್ದಕ್ಕೆ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸದನ ಸಭೆ ಸೇರಿದ ತಕ್ಷಣ ಬಿಜೆಪಿ ನಾಯಕ ಆಶಿಶ್ ಶೇಲಾರ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಸ್ಪೀಕರ್‌ಗೆ ವಿಶೇಷ ಹಕ್ಕು ಉಲ್ಲಂಘನೆಯ ನೋಟಿಸ್ ಸಲ್ಲಿಸಿದ ಬಿಜೆಪಿ ಶಾಸಕ ಅತುಲ್ ಭಟ್ಕಳಕರ್, ರಾವುತ್ ಅವರ ಹೇಳಿಕೆ “ರಾಜ್ಯಕ್ಕೆ ಅವಮಾನ” ಎಂದಿದ್ದಾರೆ. ನಾರ್ವೇಕರ್ ಅವರು ನೋಟಿಸ್ ಸ್ವೀಕರಿಸಿದ್ದು ಈ ವಿಷಯದ ಬಗ್ಗೆ ವಿವರವಾದ ವಿಚಾರಣೆಯ ನಂತರ ಮಾರ್ಚ್ 8 ರಂದು ತಮ್ಮ ನಿರ್ಧಾರವನ್ನು ನೀಡುವುದಾಗಿ ಹೇಳಿದರು.
ಇದನ್ನೂ ಓದಿ: S Jaishankar: ಬಿಬಿಸಿ ಭಾರತದ ಕಾನೂನನ್ನು ಗೌರವಿಸಲೇಬೇಕು; ಬ್ರಿಟನ್ ವಿದೇಶಾಂಗ ಸಚಿವರಿಗೆ ಜೈಶಂಕರ್ ಖಡಕ್ ಉತ್ತರ
ರಾವುತ್ ಅವರ ಹೇಳಿಕೆಯು ಸದನ ಮತ್ತು ಅದರ ಸದಸ್ಯರ ಘನತೆ, ಪಾವಿತ್ರ್ಯತೆ ಮತ್ತು ಸಾರ್ವಭೌಮತ್ವ” ವನ್ನು ಘಾಸಿಗೊಳಿಸಿದೆ “ಅದನ್ನು ರಕ್ಷಿಸಲು ನಾನು ಸಾಂವಿಧಾನಿಕ ಬಾಧ್ಯತೆಯನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು.
ಏತನ್ಮಧ್ಯೆ, ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಬಾಳಾಸಾಹೇಬ್ ಥೋರಟ್ ಕೂಡ ಇಂತಹ ಹೇಳಿಕೆಗಳನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಶಿವಸೇನೆಯ (ಯುಬಿಟಿ) ಮಿತ್ರಪಕ್ಷಗಳಾಗಿವೆ.
“ವಾಸ್ತವವಾಗಿ ಏನು ಹೇಳಲಾಗಿದೆ ಎಂಬುದನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಇದೇ ವೇಳೆ ಸದನದಲ್ಲಿ ಯಾವ ಮಾತುಗಳನ್ನಾಡುತ್ತಾರೆ ಎಂಬುದರ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ನಮ್ಮನ್ನು ‘ರಾಷ್ಟ್ರ ವಿರೋಧಿಗಳು’ ಎಂದೂ ಕರೆಯಲಾಗಿದೆ ಎಂದು ಥೋರಟ್ ಹೇಳಿದ್ದಾರೆ.
ಬಿಜೆಪಿ ಮತ್ತು ಶಿವಸೇನಾ ಶಾಸಕರು ರಾವುತ್ ಅವರ ಬಂಧನಕ್ಕೆ ಒತ್ತಾಯಿಸಿ ಸದನದ ಬಾವಿಗೆ ನುಗ್ಗಿ, ಪದೇ ಪದೇ ಕಲಾಪ ಮುಂದೂಡುವಂತೆ ಒತ್ತಾಯಿಸಿದರು. ಸದಸ್ಯರು ಕುಳಿತುಕೊಳ್ಳುವಂತೆ ಮಾಡಿದ ಮನವಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಮಾಡಿ