ದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಂತೂರ್ (Santoor) ಮಾಂತ್ರಿಕ ಭಜನ್ ಸೊಪೊರಿ (Pandit Bhajan Sopori )ಗುರುವಾರ ಗುರುಗ್ರಾಮ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಸೊಪೊರಿಯವರು ಅವರ ಪತ್ನಿ ಮತ್ತು ಇಬ್ಬರು ಪುತ್ರರಾದ ಸೊರಭ್ ಮತ್ತು ಅಭಯ್ ಅವರನ್ನು ಅಗಲಿದ್ದಾರೆ. ಅಭಯ್ ಕೂಡಾ ಸಂತೂರ್ ವಾದಕರಾಗಿದ್ದಾರೆ. 1948ರಲ್ಲಿ ಕಾಶ್ಮೀರದ (Kashmir) ಸೊಪೊರಿ ಕಣಿವೆ ಊರಲ್ಲಿ ಜನಿಸಿದ ಇವರು ಭಾರತೀಯ ಶಾಸ್ತ್ರೀಯ ಸಂಗೀತದ ಸೂಫಿಯಾನ ಘರಾಣೆಗೆ ಸೇರಿದ್ದಾರೆ. 1953ರಲ್ಲಿ 5ವರ್ಷದವರಾಗಿದ್ದಾಗ ಸೊಪೊರಿ ಮೊದಲ ಪ್ರದರ್ಶನ ನೀಡಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಅವರು ಈಜಿಪ್ಟ್,ಇಂಗ್ಲೆಂಡ್ ಜರ್ಮನಿ ಮತ್ತು ಅಮೆರಿಕದಲ್ಲಿಯೂ ಅವರು ಪ್ರದರ್ಶನ ನೀಡಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇಮ್ಯುನೊಥೆರಪಿ ಚಿಕಿತ್ಸೆಗಾಗಿ ರು ವಾರಗಳ ಹಿಂದೆ ಗುರುಗ್ರಾಮ್‌ನ ಫೋರ್ಟಿಸ್‌ಗೆ ಅವರನ್ನು ದಾಖಲಿಸಿದ್ದೆವು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸಲಿಲ್ಲ ಅವರ ಆರೋಗ್ಯ ಹದಗೆಟ್ಟಿತು, ”ಎಂದು ಅವರ ಮಗ ಅಭಯ್ ಪಿಟಿಐಗೆ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಲೋಧಿ ರಸ್ತೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Very sorry to hear about the tragic demise of Padma Shri Pandit Bhajan Sopori sahib.A great son of the soil, he was a colossus in the world of classical Indian music who made the santoor his own.May his soul rest in peace. My condolences to @abhaysopori and the rest of his family
— Omar Abdullah (@OmarAbdullah) June 2, 2022
ಸಪೊರಿ ನಿಧನ ವಾರ್ತೆಗೆ ಪ್ರತಿಕ್ರಿಯಿಸಿದ ಜಮ್ಮ ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪದ್ಮಶ್ರೀ ಭಜನ್ ಸೊಪೊರಿ ಸಾಹಿಬ್ ಅವರ ನಿಧನ ಸುದ್ದಿ ಕೇಳಿ ಆಘಾತವಾಗಿದೆ. ಅವರು ಮಣ್ಣಿನ ಮಗ. , ಸಂತೂರ್ ವಾದನದೊಂದಿಗೆ ಅವ ರುಭಾರತೀಯ ಶಾಸ್ತ್ರೀಯ ಸಂಗೀತದ ಜಗತ್ತಿನಲ್ಲಿ ಪ್ರಖ್ಯಾತರಾಗಿದ್ದರು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:50 pm, Thu, 2 June 22