ಕಾಶ್ಮೀರಿ ಪಂಡಿತರು ಮತ್ತೊಮ್ಮೆ ವಲಸೆ ಹೋಗುತ್ತಿದ್ದಾರೆ, ತಪ್ಪು ಪುನರಾವರ್ತನೆ ಆಗುತ್ತಿದೆ: ಮೋದಿ ಸರ್ಕಾರಕ್ಕೆ ಓವೈಸಿ ಎಚ್ಚರಿಕೆ
ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು ಬ್ಯಾಗ್ಗಳನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೊವನ್ನು ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಟ್ವೀಟ್ ಮಾಡಿದ್ದರು. ಈ ವಿಡಿಯೊವನ್ನು ರೀಟ್ವೀಟ್ ಮಾಡಿದ ಹೈದರಬಾದ್ ಸಂಸದ ಓವೈಸಿ ಎರಡನೇ ಬಾರಿ ಕಾಶ್ಮೀರಿ ಪಂಡಿತರ ವಲಸೆ ಪ್ರಗತಿಯಲ್ಲಿದೆ
ಕಾಶ್ಮೀರ ಕಣಿವೆಯಲ್ಲಿ (Kashmir Valley) ಕಾಶ್ಮೀರಿ ಪಂಡಿತರು (Kashmiri Pandit )ಸೇರಿದಂತೆ ನಾಗರಿಕರ ಉದ್ದೇಶಿತ ಹತ್ಯೆಗಳನ್ನು ಖಂಡಿಸಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು ಬ್ಯಾಗ್ಗಳನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೊವನ್ನು ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಟ್ವೀಟ್ ಮಾಡಿದ್ದರು. ಈ ವಿಡಿಯೊವನ್ನು ರೀಟ್ವೀಟ್ ಮಾಡಿದ ಹೈದರಬಾದ್ ಸಂಸದ ಓವೈಸಿ ಎರಡನೇ ಬಾರಿ ಕಾಶ್ಮೀರಿ ಪಂಡಿತರ ವಲಸೆ ಪ್ರಗತಿಯಲ್ಲಿದೆ. ಇದಕ್ಕೆ ದೇಶದ ಪ್ರಧಾನಿಯೊಬ್ಬರೇ ಕಾರಣ. 1989ರಲ್ಲಿ ಮಾಡಿದ ತಪ್ಪನ್ನೇ ಈ ಸರ್ಕಾರ ಪುನರಾವರ್ತಿಸುತ್ತಿದೆ. ಕಣಿವೆಯ ರಾಜಕೀಯ ನಾಯಕರಿಗೆ ಯಾವುದೇ ಮಾಹಿತಿ ಇಲ್ಲ. ಅಲ್ಲಿ ಯಾವುದೇ ರಾಜಕೀಯ ನ್ಯಾಯವೂ ಇಲ್ಲ. ಮೋದಿ ಸರ್ಕಾರ ಸಿನಿಮಾ ಪ್ರಚಾರದಲ್ಲಿ ನಿರತವಾಗಿದೆ ಎಂದು ಎಂದಿದ್ದಾರೆ. “1987 ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಆದಂತೆಈಗ ಹೊಸ ಕ್ಷೇತ್ರ ವಿಂಗಡಣೆ ಕ್ಷೇತ್ರಗಳನ್ನು ಅಲ್ಲೋಲಕಲ್ಲೋಲ ಮಾಡಿದೆ. ಬಿಜೆಪಿ ಪಂಡಿತರನ್ನು ರಾಜಕೀಯಕ್ಕೆ ಮಾತ್ರ ಬಳಸಿಕೊಂಡಿದೆ. ಪಂಡಿತರ ಬಗ್ಗೆ ಏನಂತೀರಿ ಎಂದು ಅವರು ಕೇಳುತ್ತಿದ್ದಾರೆ. ಹೀಗೆ ಅವರು ಕೇಳುತ್ತಿರುವುದು ತಮ್ಮದೇ ಆದ ಗಲಭೆಗಳ ಇತಿಹಾಸದ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ಮಾತ್ರ. ಪಂಡಿತರ ಬಗ್ಗೆ ಬಿಜೆಪಿ ಬೇರೆ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದಿದ್ದಾರೆ ಓವೈಸಿ.
ಕಾಶ್ಮೀರಿ ಪಂಡಿತರ ಹತ್ಯೆಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಸಮುದಾಯದಲ್ಲಿ ಭಾರೀ ಆಕ್ರೋಶವಿದೆ. ಗುರುವಾರ ಕುಲ್ಗಾಮ್ ಜಿಲ್ಲೆಯಲ್ಲಿ ವಿಜಯ್ ಕುಮಾರ್ ಎಂಬ ಬ್ಯಾಂಕ್ ಮ್ಯಾನೇಜರ್ ಅನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.ಕೆಲವು ದಿನಗಳ ಹಿಂದೆಯೇ ಇದೇ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ರಜನಿ ಬಾಲಾ ಎಂಬ ಶಾಲಾ ಶಿಕ್ಷಕಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
A second #KashmiriPandit exodus is in progress. @PMOIndia is alone responsible for this. Mistakes of 1989 are being repeated by his govt. Political leaders of valley have no levers & left with no political legitimacy. Modi govt is busy promoting movies 1/2 https://t.co/obkazviyAw
— Asaduddin Owaisi (@asadowaisi) June 2, 2022
ಮೇ 12 ರಂದು ಬದ್ಗಾಮ್‌ನ ಚದೂರ ತಹಸಿಲ್ ಕಚೇರಿಯಲ್ಲಿ ಸರ್ಕಾರಿ ನೌಕರ ರಾಹುಲ್ ಭಟ್ ಮೇಲೆ ಗುಂಡಿನ ದಾಳಿ ನಡೆದಾಗಿನಿಂದ ಪಂಡಿತ್ ಸಮುದಾಯವು ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಕೇಂದ್ರಾಡಳಿತ ಪ್ರದೇಶದಾದ್ಯಂತ ಪ್ರತಿಭಟನೆಗಳು ನಡೆದಿವೆ.
ಓವೈಸಿ ಮಾತ್ರವಲ್ಲ, ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಗಳ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 7:28 pm, Thu, 2 June 22