Sardar Vallabhbhai Patel: ಘನವಾಗಿ ನಡೆದ ಸರ್ದಾರ್ ಪಟೇಲ್ 148ನೇ ಜಯಂತಿ, ರನ್ ಫಾರ್ ಯೂನಿಟಿಯಲ್ಲಿ ಭಾಗಿಯಾದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

Run For Unity Day: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸಂದರ್ಭದಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಏಕತೆಗಾಗಿ ಓಟವನ್ನು ಆಯೋಜಿಸಲಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಕ್ನೋದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಏಕತೆಯ ಓಟಕ್ಕೆ ಚಾಲನೆ ನೀಡಿದರು. ಜಾರ್ಖಂಡ್‌ನ ರಾಮಗಢ್‌ನಲ್ಲಿರುವ ಪಂಜಾಬ್ ರೆಜಿಮೆಂಟಲ್ ಸೆಂಟರ್‌ಗೆ ಸೇರಿದ ನೂರಾರು ಸೈನಿಕರು ಓಟ ಹಮ್ಮಿಕೊಂಡಿದ್ದರು.

Sardar Vallabhbhai Patel: ಘನವಾಗಿ ನಡೆದ ಸರ್ದಾರ್ ಪಟೇಲ್ 148ನೇ ಜಯಂತಿ, ರನ್ ಫಾರ್ ಯೂನಿಟಿಯಲ್ಲಿ ಭಾಗಿಯಾದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಘನವಾಗಿ ನಡೆದ ಸರ್ದಾರ್ ಪಟೇಲ್ 148ನೇ ಜಯಂತಿ
Follow us
ಸಾಧು ಶ್ರೀನಾಥ್​
|

Updated on: Oct 31, 2023 | 6:37 PM

ಮಹಾನ್ ಪುರುಷ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 148 ನೇ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಯಿತು. ಇಡೀ ದೇಶವೇ ಅವರನ್ನು ಸ್ಮರಿಸುತ್ತಿದೆ. ಈ ಸಂದರ್ಭದಲ್ಲಿ ಒಡಿಶಾದ ಕಟಕ್ ನಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ನೇತೃತ್ವದಲ್ಲಿ ‘ರನ್ ಫಾರ್ ಯೂನಿಟಿ’ ಕಾರ್ಯಕ್ರಮ (Run For Unity Day) ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಮತ್ತೊಂದೆಡೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ಪಟೇಲ್ ಅವರಿಗೆ (Sardar Vallabhbhai Patel) ಗೌರವ ಸಲ್ಲಿಸಿದರು. ಇದಲ್ಲದೇ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಖರ್, ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಹಲವು ನಾಯಕರು ಪಟೇಲ್ ಚೌಕ್‌ನಲ್ಲಿ ದೇಶದ ಮೊದಲ ಗೃಹ ಸಚಿವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸರ್ದಾರ್ ಪಟೇಲ್ ಅವರನ್ನು ಸ್ಮರಿಸಿದರು.

ಗುಜರಾತ್‌ನ ಕೆವಾಡಿಯಾದಲ್ಲಿ 182 ಮೀಟರ್ ಎತ್ತರದ ಪಟೇಲ್ ವಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಪುಷ್ಪಾರ್ಚನೆ ಮಾಡಿದರು. ನಂತರ ರಾಷ್ಟ್ರೀಯ ಏಕತಾ ದಿನದ ಪರೇಡ್‌ನಲ್ಲಿ ಮೋದಿ ಭಾಗವಹಿಸಿದ್ದರು. ಈ ಪರೇಡ್‌ನಲ್ಲಿ ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿ ಮಾಡಿದ ಧೈರ್ಯಶಾಲಿ ಸಾಹಸವನ್ನು ಮೋದಿ ಶ್ಲಾಘಿಸಿದರು. ಇದೀಗ ರಾಷ್ಟ್ರವ್ಯಾಪಿ ಏಕತೆ ಓಟದ ಅಂಗವಾಗಿ ಮಕ್ಕಳು, ವಯಸ್ಕರು, ಯುವಕರು ಮತ್ತು ಮಹಿಳೆಯರು ದೇಶದ ಏಕತೆಗಾಗಿ ಓಡಿದರು. ಬಿಳಿ ಟೀ ಶರ್ಟ್ ಧರಿಸಿ, ಕೈಯಲ್ಲಿ ಘೋಷಣೆಗಳಿರುವ ಫಲಕಗಳನ್ನು ಹಿಡಿದು ಜನರು ಉತ್ಸಾಹದಿಂದ ಓಡಿದರು. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.

ಇದಲ್ಲದೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಟ್ವಿಟರ್‌ನಲ್ಲಿ ಇತರ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಗಳ ಜೊತೆಗೆ, ಸರ್ದಾರ್ ಪಟೇಲ್ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ ಎಂಬ ಶೀರ್ಷಿಕೆಯಿದೆ. ದೇಶವನ್ನು ಒಗ್ಗೂಡಿಸಿ ರೂಪಿಸಿದ್ದಕ್ಕಾಗಿ ನಾವು ಅವರನ್ನು ವಂದಿಸುತ್ತೇವೆ. ಇದರೊಂದಿಗೆ ಕಟಕ್ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಪುನರುಚ್ಚರಿಸಬೇಕು ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಈ ಸಂದರ್ಭದಲ್ಲಿ ಕರೆ ನೀಡಿದರು.

Also Read: ಇಂದು ಸರ್ದಾರ್ ಪಟೇಲ್ ಜನ್ಮದಿನ; ಭಾರತದ ಉಕ್ಕಿನ ಮನುಷ್ಯನ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸಂದರ್ಭದಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಏಕತೆಗಾಗಿ ಓಟವನ್ನು ಆಯೋಜಿಸಲಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಕ್ನೋದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಏಕತೆಯ ಓಟಕ್ಕೆ ಚಾಲನೆ ನೀಡಿದರು. ಜಾರ್ಖಂಡ್‌ನ ರಾಮಗಢ್‌ನಲ್ಲಿರುವ ಪಂಜಾಬ್ ರೆಜಿಮೆಂಟಲ್ ಸೆಂಟರ್‌ಗೆ ಸೇರಿದ ನೂರಾರು ಸೈನಿಕರು ಓಟ ಹಮ್ಮಿಕೊಂಡಿದ್ದರು.

ಇದರೊಂದಿಗೆ ರಾಜಧಾನಿ ದೆಹಲಿಯ ತುಘಲಕಾಬಾದ್‌ನಲ್ಲಿಯೂ ಏಕತೆಯ ಓಟವನ್ನು ಆಯೋಜಿಸಲಾಗಿತ್ತು. ಇಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧುರಿ ಅವರು ಹಸಿರು ಬಾವುಟ ತೋರಿಸಿ ಓಟಕ್ಕೆ ಚಾಲನೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ