ಭರದಿಂದ ಸಾಗುತ್ತಿದೆ ಶ್ರೀರಾಮಂದಿರ ನಿರ್ಮಾಣ ಕಾರ್ಯ; ಸ್ಥಳದ ಚಿತ್ರಣ ತೋರಿಸುವ ಸೆಟಲೈಟ್ ಫೋಟೋ ಬಿಡುಗಡೆ

ಅಯೋಧ್ಯೆ ರಾಮಮಂದಿರದ ಸ್ಥಳದಲ್ಲಿ ಭರದ ಕಾಮಗಾರಿ ನಡೆಯುತ್ತಿದೆ. ಅವಶೇಷಗಳನ್ನು ಸ್ವಚ್ಛಗೊಳಿಸಿ, ಕಾಂಕ್ರೀಟ್​ ಹಾಕಲು ನೆಲವನ್ನು ಸಮತಟ್ಟು ಮಾಡುವ ಕೆಲಸ ನಡೆಯುತ್ತಿರುವುದು ಸೆಟಲೈಟ್​ ಫೋಟೋದಿಂದ ಕಾಣುತ್ತಿದೆ.

ಭರದಿಂದ ಸಾಗುತ್ತಿದೆ ಶ್ರೀರಾಮಂದಿರ ನಿರ್ಮಾಣ ಕಾರ್ಯ; ಸ್ಥಳದ ಚಿತ್ರಣ ತೋರಿಸುವ ಸೆಟಲೈಟ್ ಫೋಟೋ ಬಿಡುಗಡೆ
ಕಲಾವಿದನ ಕಲ್ಪನೆಯಲ್ಲಿ ಅಯೋದ್ಯೆ ರಾಮಮಂದಿರ
Follow us
TV9 Web
| Updated By: Lakshmi Hegde

Updated on: Jun 30, 2021 | 4:01 PM

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕೊವಿಡ್​ 19 ಎರಡನೇ ಅಲೆ ಹೊತ್ತಲ್ಲೂ ಕಾಮಗಾರಿ ನಿಂತಿಲ್ಲ. ಅಲ್ಲೀಗ ಚಿತ್ರಣವೇ ಬದಲಾಗಿದ್ದು, ಅದರ ಸೆಟಲೈಟ್​ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ರಾಮಮಂದಿರವಿದ್ದ ಸ್ಥಳ ಮೊದಲು ಹೇಗಿತ್ತು? ಈಗ ಹೇಗಾಗಿದೆ ಎಂಬುದರ ಸ್ಪಷ್ಟ ಬದಲಾವಣೆಯನ್ನು ಫೋಟೋದಲ್ಲಿ ಕಾಣಬಹುದು.

ಅಯೋಧ್ಯೆ ರಾಮಮಂದಿರದ ಸ್ಥಳದಲ್ಲಿ ಭರದ ಕಾಮಗಾರಿ ನಡೆಯುತ್ತಿದೆ. ಅವಶೇಷಗಳನ್ನು ಸ್ವಚ್ಛಗೊಳಿಸಿ, ಕಾಂಕ್ರೀಟ್​ ಹಾಕಲು ನೆಲವನ್ನು ಸಮತಟ್ಟು ಮಾಡುವ ಕೆಲಸ ನಡೆಯುತ್ತಿರುವುದು ಸೆಟಲೈಟ್​ ಫೋಟೋದಿಂದ ಕಾಣುತ್ತಿದೆ. ಅಲ್ಲೆಲ್ಲ ಕೆಲಸಗಾರರು, ಇಂಜನಿಯರ್​ಗಳು ಇದ್ದಾರೆ. ತಜ್ಞರ ಸಲಹೆಯಂತೆ ಮಂದಿರಕ್ಕೆ ಅಡಿಪಾಯ ಹಾಕುವಾಗ ಹೆಚ್ಚುವರಿಯಾಗಿ ಕಾಂಕ್ರೀಟ್ ಪದರಗಳನ್ನು ಹಾಕಲು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಸಂಬಂಧಪಟ್ಟ ಇಂಜಿನಿಯರ್​ಗಳಿಗೆ ಸೂಚಿಸಿದೆ.

ಶ್ರೀರಾಮಮಂದಿರಕ್ಕೆ ರೋಲರ್​ ಕಾಂಪ್ಯಾಕ್ಟೆಡ್​ ಕಾಂಕ್ರೀಟ್​​ (ಆರ್​ಸಿಸಿ)ನ ಅಡಿಪಾಯ ಹಾಕಲಾಗುವುದು. ಇದರ ಅನ್ವಯ 1,20,000 ಚದರ ಅಡಿ ಪ್ರದೇಶದಲ್ಲಿ 40-45 ಪದರ ಕಾಂಕ್ರೀಟ್ ಹಾಕಲಾಗುವುದು. ಅದರಲ್ಲಿ 4 ಲೇಯರ್​​ಗಳಷ್ಟೇ ಮುಗಿದಿದೆ ಎಂದೂ ಟ್ರಸ್ಟ್ ಮೇ 31ರಂದು ಮಾಹಿತಿ ನೀಡಿತ್ತು. ಈಗಾಗಲೇ 1,20,000 ಘನ ಮೀಟರ್​ ಪ್ರದೇಶಗಳಲ್ಲಿ ಮಣ್ಣು ಅಗೆಯಲಾಗಿದ್ದು, ಅದನ್ನೆಲ್ಲ ತೆರವುಗೊಳಿಸಲಾಗಿದೆ. ಅಕ್ಟೋಬರ್ ಅಷ್ಟೊತ್ತಿಗೆ 45 ಪದರಗಳ ಕಾಂಕ್ರೀಟ್ ಹಾಕುವ ಕೆಲಸ ಮುಗಿಯಬಹುದು ಎಂದೂ ಟ್ರಸ್ಟ್​ ತಿಳಿಸಿದೆ. ಇಲ್ಲಿದೆ ನೋಡಿ ಸೆಟಲೈಟ್​​ ಮೂಲಕ ಸೆರೆ ಹಿಡಿಯಲಾದ ಶ್ರೀರಾಮಮಂದಿರ ಸ್ಥಳದ ಚಿತ್ರ..

Shreeram Temple

ಸೆಟಲೈಟ್​ ಚಿತ್ರ