AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವಿರುದ್ಧ ಹೋರಾಟದಲ್ಲಿ ಪಂಚಸೂತ್ರಗಳನ್ನು ಅನುಸರಿಸಿ; 15 ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಕೇಂದ್ರದಿಂದ ಪತ್ರ

ದೇಶಾದ್ಯಂತ ಕೊರೊನಾ ಸೋಂಕಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರೂ ಯಾವ ಕಾರಣಕ್ಕೂ ಮೈಮರೆಯುವಂತಿಲ್ಲ. ಲಾಕ್​ಡೌನ್​, ಕರ್ಫ್ಯೂದಂತ ನಿರ್ಬಂಧಗಳನ್ನು ತೆಗೆಯುವಾಗ ಏಕಾಏಕಿ ತೆಗೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಕೊರೊನಾ ವಿರುದ್ಧ ಹೋರಾಟದಲ್ಲಿ ಪಂಚಸೂತ್ರಗಳನ್ನು ಅನುಸರಿಸಿ; 15 ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಕೇಂದ್ರದಿಂದ ಪತ್ರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jun 30, 2021 | 4:37 PM

ಕೊರೊನಾ ಸೋಂಕಿನ ಎರಡನೇ ಅಲೆ ಸ್ವಲ್ಪ ತಗ್ಗಿದೆ. ಆದರೂ ಕೆಲವು ರಾಜ್ಯಗಳ ಒಂದಷ್ಟು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಜಾಸ್ತಿ ಇದೆ. ಹೀಗಿರುವಾಗ ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಒಟ್ಟು 15ರಾಜ್ಯಗಳ ಮುಖ್ಯ ಕಾರ್ಯದರ್ಶಿ (ಸಿಎಸ್​)ಗಳಿಗೆ ಪತ್ರ ಬರೆದಿದೆ.

ಆಂಧ್ರಪ್ರದೇಶ, ಮಿಜೋರಾಂ, ಸಿಕ್ಕಿಂ, ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಪುದುಚೆರಿ, ತ್ರಿಪುರಾ, ನಾಗಾಲ್ಯಾಂಡ್​, ಕೇರಳ, ಮಣಿಪುರ, ಮೇಘಾಲಯ ಸೇರಿ ಒಟ್ಟು 15 ರಾಜ್ಯಗಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ, ಟೆಸ್ಟ್, ಟ್ರ್ಯಾಕ್, ಟ್ರೀಟ್, ಬಿಹೇವಿಯರ್ ಮತ್ತು ವ್ಯಾಕ್ಸಿನೇಷನ್ ಎಂಬ ಪಂಚಸೂತ್ರಗಳನ್ನು ಅಳವಡಿಸಿಕೊಂಡು, ಕೊರೊನಾ ವಿರುದ್ಧ ಹೋರಾಡಿ ಎಂದು ಸೂಚಿಸಿದೆ. ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್​ ಇರುವ ಜಿಲ್ಲೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದೂ ಪತ್ರದಲ್ಲಿ ಹೇಳಲಾಗಿದೆ.

ದೇಶಾದ್ಯಂತ ಕೊರೊನಾ ಸೋಂಕಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರೂ ಯಾವ ಕಾರಣಕ್ಕೂ ಮೈಮರೆಯುವಂತಿಲ್ಲ. ಲಾಕ್​ಡೌನ್​, ಕರ್ಫ್ಯೂದಂತ ನಿರ್ಬಂಧಗಳನ್ನು ತೆಗೆಯುವಾಗ ಏಕಾಏಕಿ ತೆಗೆಯುವಂತಿಲ್ಲ. ಆಯಾ ಪ್ರದೇಶಗಳಲ್ಲಿರುವ ಸನ್ನಿವೇಶ ನೋಡಿಕೊಂಡು, ಕ್ರಮೇಣ ನಿರ್ಬಂಧಗಳ ತೆರವು ಮಾಡಬೇಕು. ಲಸಿಕೆಯ ವೇಗ ಹೆಚ್ಚಿಸಬೇಕು ಎಂದು ಆಗಾಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೆನಪು ಮಾಡುತ್ತಲೇ ಇದೆ. ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಪತ್ರ ಬರೆದು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸುತ್ತಿದೆ.

ಇದನ್ನೂ ಓದಿ: ಲಾಕ್​ಡೌನ್​ ಮುಗಿದ ಬೆನ್ನಲ್ಲೇ ಸ್ಯಾಂಡಲ್​ವುಡ್​ನಲ್ಲಿ ಚುರುಕಾಯ್ತು ಸಿನಿಮಾ ಕೆಲಸಗಳು

(Union Health Ministery Writes letter to Chief Secretaries of 15 states about corona control)