AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನ ನಡೆದ ಗಲಭೆ ಪ್ರಕರಣ: ಆರೋಪಿ ಬೂಟಾ ಸಿಂಗ್ ಬಂಧನ

Red Fort Violence Case: ಆ ದಿನ ಪ್ರತಿಭಟನಾ ನಿರತ ರೈತರು ಮೂರು ಹೊಸ ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿ ಕೆಂಪು ಕೋಟೆಗೆ ನುಗ್ಗಿದ್ದರು.ಈ ವೇಳೆ ಅದರ ಗುಮ್ಮಟಗಳ ಮೇಲೆ ಧಾರ್ಮಿಕ ಧ್ವಜಗಳನ್ನು ಹಾರಿಸಿದರು.

ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನ ನಡೆದ ಗಲಭೆ ಪ್ರಕರಣ: ಆರೋಪಿ ಬೂಟಾ ಸಿಂಗ್ ಬಂಧನ
ಬೂಟಾ ಸಿಂಗ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 30, 2021 | 5:35 PM

ದೆಹಲಿ: ಜನವರಿ 26 ರಂದು ಕೆಂಪು ಕೋಟೆ ಹಿಂಸಾಚಾರ ಪ್ರಕರಣದ ಆರೋಪಿ ಬುಟಾ ಸಿಂಗ್ ನ್ನು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಬುಧವಾರ ಬಂಧಿಸಿದೆ. ಸೋಮವಾರ ಗುರ್ಜೋತ್ ಸಿಂಗ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ಪಂಜಾಬ್‌ನಿಂದ ಬಂಧಿಸಿದ್ದು ಈತನನ್ನು ದೆಹಲಿ ಪೊಲೀಸರ ವಶದಲ್ಲಿ ಮೂರು ದಿನಗಳ ಕಾಲ ಇರಿಸಲು ನ್ಯಾಯಾಲಯ ಸೋಮವಾರ ಆದೇಶಿಸಿತ್ತು. ಆತನ ಬಂಧನಕ್ಕೆ ಒಂದು ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರ್ಜೋತ್, ಗುರ್ಜಂತ್ ಸಿಂಗ್​​ನ ಸಹಚರರಾಗಿದ್ದು, ಜನವರಿ 26 ರ ಹಿಂಸಾಚಾರದ ಸಂದರ್ಭದಲ್ಲಿ ಕೆಂಪು ಕೋಟೆಯ ಗುಮ್ಮಟದ ಮೇಲೆ ಸಿಖ್ ಧಾರ್ಮಿಕ ಧ್ವಜವನ್ನು ಹಾರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ದಿನ ಪ್ರತಿಭಟನಾ ನಿರತ ರೈತರು ಮೂರು ಹೊಸ ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿ ಕೆಂಪು ಕೋಟೆಗೆ ನುಗ್ಗಿದ್ದರು.ಈ ವೇಳೆ ಅದರ ಗುಮ್ಮಟಗಳ ಮೇಲೆ ಧಾರ್ಮಿಕ ಧ್ವಜಗಳನ್ನು ಹಾರಿಸಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ ಹಲವಾರು ಪೊಲೀಸರಿಗೆ ಗಾಯಗಳಾಗಿತ್ತು.

ನ್ಯಾಯಾಲಯವು ಇತ್ತೀಚೆಗೆ ಪ್ರಕರಣದ ಚಾರ್ಜ್‌ಶೀಟ್‌ ಪ್ರಕಾರ ಜೂನ್ 29 ರಂದು ಎಲ್ಲ ಆರೋಪಿಗಳನ್ನು ಕರೆಸಿಕೊಂಡಿತ್ತು.

ಹಿಂಸಾಚಾರದ ಪ್ರಮುಖ ರೂವಾರಿ ಎಂದು ಆರೋಪಿಸಲ್ಪಟ್ಟಿರುವ ನಟ-ಕಾರ್ಯಕರ್ತ ದೀಪ್ ಸಿಧು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. “ಘಟನೆಯ ನಂತರ, ಗುರ್ಜೋತ್ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಐತಿಹಾಸಿಕ ಸ್ಮಾರಕದಲ್ಲಿ ಧ್ವಜಾರೋಹಣ ಮಾಡಿದ ಘಟನೆಯಲ್ಲಿ ತಮ್ಮ ಪಾತ್ರವನ್ನು ಬಹಿರಂಗಪಡಿಸಿದರು.

ಆ ಆಧಾರದ ಮೇಲೆ, ಅವರು ಪ್ರಕರಣದಲ್ಲಿ ವಾಟೆಂಡ್ ಆಗಿದ್ದು ಆತನ ಬಂಧನದ ಮೇಲೆ ಒಂದು ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಸಂಜೀವ್ ಕುಮಾರ್ ಯಾದವ್ ಹೇಳಿದ್ದಾರೆ.

ಕಿಸಾನ್ ಆಂದೋಲನ್ ಬಗ್ಗೆ ಸಿಂಗ್ ಯೂಟ್ಯೂಬ್​ನಲ್ಲಿ ಲಖಾ ಸಿದ್ಧನಾ ಮತ್ತು ದೀಪ್ ಸಿಧು ಅವರ ಪ್ರಚೋದನಕಾರಿ ವಿಡಿಯೊಗಳನ್ನು ನೋಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

2020 ರ ಡಿಸೆಂಬರ್‌ನಲ್ಲಿ ಕೇಂದ್ರವು ಜಾರಿಗೆ ತಂದ ಹೊಸ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಎರಡು ಬಾರಿ ಸಿಂಗು ಗಡಿಗೆ ಬಂದಿದ್ದರು.

ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಮುಖಂಡರಾದ ಸರ್ವಾನ್ ಸಿಂಗ್ ಪಾಂಡರ್ ಮತ್ತು ಸತ್ನಮ್ ಸಿಂಗ್ ಪನ್ನು ಅವರ ಮನವಿಯ ಮೇರೆಗೆ ಅವರು ತಮ್ಮ ಗ್ರಾಮದ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾಗವಹಿಸಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಜನವರಿ 26ರಂದು ಕೆಂಪುಕೋಟೆ ಬಳಿ ನಡೆದ ಗಲಭೆಯ ಹಿಂದೆ ಇತ್ತು ಒಂದು ಪಿತೂರಿ; ಗುಟ್ಟು ಬಹಿರಂಗ ಗೊಳಿಸಿದ ದೆಹಲಿ ಪೊಲೀಸರು

(Delhi Police Crime Branch arrested Buta Singh accused in the January 26 Red Fort violence case)

ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ