ಇಂಟರ್ನೆಟ್ ಬ್ಯಾಂಕಿಂಗ್ (Internet Banking Services) ಸೇವೆಗಳಾದ ಯೊನೊ (Yono), ಯೊನೊ ಲೈಟ್ (Yono Lite), ಯೊನೊ ಬಿಜಿನೆಸ್ (Yono Business), ಐಎಂಪಿಎಸ್ (IMPS) ಮತ್ತು ಯುಪಿಐ (UPI)ಗಳು ಇಂದು ಸುಮಾರು ಮೂರು ತಾಸುಗಳ ಕಾಲ ಸ್ಥಗಿತಗೊಳ್ಳಲಿವೆ ಅಥವಾ ಅವುಗಳ ಕಾರ್ಯದಲ್ಲಿ ಅಡಚಣೆಯಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ತಿಳಿಸಿದೆ. ಸೆಪ್ಟೆಂಬರ್ 4ರ ರಾತ್ರಿ 10.30ಯಿಂದ ರಾತ್ರಿ 1.30 (ಸೆಪ್ಟೆಂಬರ್ 5)ರವರೆಗೆ ಯೊನೊ, ಯೊನೊ ಲೈಟ್, ಯೊನೊ, ಯೊನೊ ಲೈಟ್, ಯೊನೊ ಬಿಜಿನೆಸ್, ಐಎಂಪಿಎಸ್ ಮತ್ತು ಯುಪಿಐಗಳಿಗೆ ಸಂಬಂಧಪ್ಟ ನಿರ್ವಹಣಾ ಕೆಲಸ ಇರುವುದರಿಂದ ಈ ಅಡಚಣೆ ಉಂಟಾಗಲಿದೆ ಎಂದು ಎಸ್ಬಿಐ ಮಾಹಿತಿ ನೀಡಿದೆ. ಹಾಗೇ ಅನಾನುಕೂಲತೆಗಾಗಿ ಕ್ಷಮೆಯನ್ನೂ ಕೇಳಿದೆ.
We request our esteemed customers to bear with us as we strive to provide a better banking experience.#InternetBanking #YONOSBI #YONO #ImportantNotice pic.twitter.com/GXu3UCTSCu
— State Bank of India (@TheOfficialSBI) September 3, 2021
ಬ್ಯಾಂಕ್ಗಳು ಕೆಲವು ನಿರ್ವಹಣಾ ಕೆಲಸ ಮತ್ತು ತಮ್ಮ ಸೇವೆಗಳಲ್ಲಿ ಏನಾದರೂ ಅಪ್ಗ್ರೇಡ್ ಮಾಡಿಕೊಳ್ಳುವ ಕಾರ್ಯ ಇದ್ದಾಗ ಹೀಗೆ ನೆಟ್ಬ್ಯಾಂಕಿಂಗ್, ಎಟಿಎಂ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿಕೊಳ್ಳುತ್ತವೆ. ಹಾಗೇ, ಇದೀಗ ಎಸ್ಬಿಐ ಕೂಡ ತನ್ನ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ನಿರ್ವಹಣೆಗಾಗಿ ಇಂದು ರಾತ್ರಿ 10.30ರಿಂದ ಮೂರು ತಾಸು ಸ್ಥಗಿತಗೊಳಿಸಲಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ 85 ಮಿಲಿಯನ್ಗೂ ಅಧಿಕ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರನ್ನು ಹೊಂದಿದೆ. ಹಾಗೇ, ಮೊಬೈಲ್ ಬ್ಯಾಂಕಿಂಗ್ ಬಳಕೆದಾರರು 19 ಮಿಲಿಯನ್ಗೂ ಹೆಚ್ಚಿನ ಜನರಿದ್ದಾರೆ. ಇದರ ಯೊನೊ ಆ್ಯಪ್ನಲ್ಲಿ 34.5 ಮಿಲಿಯನ್ ಜನರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಏನಿಲ್ಲವೆಂದರೂ ದಿನಕ್ಕೆ 9 ಮಿಲಿಯನ್ ಜನರು ಲಾಗಿನ್ ಆಗುತ್ತಾರೆ.
ಇದನ್ನೂ ಓದಿ: ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯ ಮಿತಿಗೆ ತಿದ್ದುಪಡಿ ತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ
ಬೆಳಗಾವಿಯಲ್ಲಿ ಬಿಜೆಪಿ ಶಾಸಕನ ಹುಟ್ಟು ಹಬ್ಬದ ವಿಡಿಯೋ ವೈರಲ್; ಹೂವಿನ ಮಳೆ ಸುರಿಸಿದ ಪೊಲೀಸರು
Published On - 12:30 pm, Sat, 4 September 21