Big News ಕೊವಿಡ್​​​ 19 ವೈರಸ್​​ ನಿಷ್ಕ್ರಿಯಗೊಳಿಸಲು ಹೊಸ ಕಾರ್ಯವಿಧಾನ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

ಹೊಸ ಕಾರ್ಯವಿಧಾನವು ಜೀವಕೋಶಗಳಿಗೆ ವೈರಸ್ ಪ್ರವೇಶವನ್ನು ನಿರ್ಬಂಧಿಸುತ್ತದೆ ಮತ್ತು ಸೋಂಕಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಬುಧವಾರ ಹೇಳಿದೆ.

Big News ಕೊವಿಡ್​​​ 19 ವೈರಸ್​​ ನಿಷ್ಕ್ರಿಯಗೊಳಿಸಲು ಹೊಸ ಕಾರ್ಯವಿಧಾನ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು
ಸಾಂಧರ್ಬಿಕ ಚಿತ್ರ
Updated By: ರಶ್ಮಿ ಕಲ್ಲಕಟ್ಟ

Updated on: Jul 13, 2022 | 8:57 PM

ದೆಹಲಿ: ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು ಸಿಎಸ್ಐಆರ್ (CSIR)-ಇನ್‌ಸ್ಟಿಟ್ಯೂಟ್ ಆಫ್ ಮೈಕ್ರೋಬಿಯಲ್ ಟೆಕ್ನಾಲಜಿಯ ಸಂಶೋಧಕರ ಸಹಯೋಗದೊಂದಿಗೆ ಕೊವಿಡ್ (SARS-CoV-2) ವೈರಸ್ ಅನ್ನು ನಿಷ್ಕ್ರಿಯಗೊಳಿಸಲು ಹೊಸ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಜೀವಕೋಶಗಳಿಗೆ ವೈರಸ್  ಪ್ರವೇಶವನ್ನು ನಿರ್ಬಂಧಿಸುತ್ತದೆ ಮತ್ತು ಸೋಂಕಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಬುಧವಾರ ಹೇಳಿದೆ. ಸಂಶೋಧಕರು ಹೊಸ ವರ್ಗದ ಸಿಂಥೆಟಿಕ್ ಪೆಪ್ಟೈಡ್‌ಗಳ ವಿನ್ಯಾಸವನ್ನು ಮಾಡಿದ್ದು ಇದು ಕೊವಿಡ್ ವೈರಸ್‌ನ ಜೀವಕೋಶಗಳ ಪ್ರವೇಶವನ್ನು ನಿರ್ಬಂಧಿಸುವುದು ಮಾತ್ರವಲ್ಲದೆ ವೈರಿಯಾನ್‌ಗಳನ್ನು (ವೈರಸ್ ಕಣಗಳು) ಒಟ್ಟಿಗೆ ಜೋಡಿಸಿ, ಅವುಗಳ ಸೋಂಕಿಗೆ ಒಳಗಾಗುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಈ ನೂತನ ವಿಧಾನವು SARS-CoV-2 ನಂತಹ ವೈರಸ್‌ಗಳನ್ನು ನಿಷ್ಕ್ರಿಯಗೊಳಿಸಲು ಪರ್ಯಾಯ ಕಾರ್ಯವಿಧಾನವನ್ನು ಒದಗಿಸುತ್ತದೆ. SARS-CoV-2 ವೈರಸ್‌ನ ಹೊಸ ತಳಿಗಳ ತ್ವರಿತ ಹೊರಹೊಮ್ಮುವಿಕೆಯು ವೈರಸ್‌ನಿಂದ ಸೋಂಕನ್ನು ತಡೆಗಟ್ಟಲು ಬಳಸುವ ಕೊವಿಡ್ ಲಸಿಕೆಯ ಹೊರತಾಗಿ ಹೊಸ ವಿಧಾನಗಳಿಗೆ ಮೊರೆ ಹೋಗುವಂತೆ ಮಾಡಿದೆ.

ಪ್ರೊಟೀನ್- ಪ್ರೊಟೀನ್ ಪರಸ್ಪರ ಕ್ರಿಯೆಯ ಲಾಕ್ ಮತ್ತು ಕೀಯಂತೆ ವರ್ತಿಸುತ್ತದೆ. ಈ ಪರಸ್ಪರ ಕ್ರಿಯೆಗೆ ಸಿಂಥೆಟಿಕ್ ಪೆಪ್ಟೈಡ್ ಅಡಚಣೆಯುಂಟು ಮಾಡುತ್ತದೆ. ಇವು ಕೀ ಮತ್ತು ಲಾಕ್ ಬಂಧಿಸುವುದನ್ನು ತಡೆಯುತ್ತದೆ.
ಸಚಿವಾಲಯದ ಪ್ರಕಾರ ಐಐಎಸ್​​ಸಿ ವಿಜ್ಞಾನಿಗಳು SARS-CoV-2 ವೈರಸ್‌ನ ಮೇಲ್ಮೈಯಲ್ಲಿ ಸ್ಪೈಕ್ ಪ್ರೊಟೀನ್‌ಗೆ ಬಂಧಿಸುವ ಮತ್ತು ನಿರ್ಬಂಧಿಸುವ ಪೆಪ್ಟೈಡ್‌ಗಳನ್ನು ವಿನ್ಯಾಸಗೊಳಿಸಲು ಈ ವಿಧಾನವನ್ನು ಬಳಸಿಕೊಂಡಿದ್ದಾರೆ. ಈ ಬಂಧಿಸುವಿಕೆಯು ಕ್ರಯೋ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿ (cryo-EM) ಮತ್ತು ಇತರ ಜೈವಿಕ ಭೌತಶಾಸ್ತ್ರದ ವಿಧಾನಗಳಿಂದ ನಿರೂಪಿಸಲ್ಪಟ್ಟಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಂಸ್ಥೆಯಾದ ಎಸ್ಇಆರ್ ಬಿ (SERB) ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿಯ ಕೊವಿಡ್-19 ಐಆರ್​​ಪಿಎಚ್ಎ ಅಡಿಯಲ್ಲಿ ಸಂಶೋಧನೆ ಮಾಡಲಾಗಿದೆ.

ಇದನ್ನೂ ಓದಿ
‘ಆ ಉದ್ಯಮಿಗೆ ಹೆಂಡತಿಯಾಗಿ ಇದ್ದರೆ ಸ್ಯಾಲರಿ ಕೊಡ್ತೀನಿ ಅಂದ್ರು’; ಕೆಲಸ ಇಲ್ಲದೆ ಗೋಳಾಡಿದ ನಟಿ
ದ್ರೌಪದಿ ಮುರ್ಮು ಒಳ್ಳೆಯವರು, ನನ್ನ ಮಾತನ್ನು ಬೇರೇ ರೀತಿಯಲ್ಲಿ ಅರ್ಥೈಸಲಾಗಿದೆ: ಕಾಂಗ್ರೆಸ್ ನಾಯಕ
India Covid Updates: ಭಾರತದಲ್ಲಿ 16,906 ಕೊರೊನಾ ಸೋಂಕಿತರು ಪತ್ತೆ, 45 ಸಾವು

 

Published On - 8:40 pm, Wed, 13 July 22