Omicron: ದೆಹಲಿಯಲ್ಲಿ ಇನ್ನೊಂದು ಒಮಿಕ್ರಾನ್ ಕೇಸ್ ದಾಖಲು; ಭಾರತದಲ್ಲೀಗ ಹೊಸ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆ
ಭಾರತದಲ್ಲಿ ಈಗ ಒಮಿಕ್ರಾನ್ ಪ್ರಕರಣ 33ಕ್ಕೆ ಏರಿಕೆಯಾಗಿದೆ. ಶುಕ್ರವಾರ ಮಹಾರಾಷ್ಟ್ರದಲ್ಲಿ ಒಟ್ಟಿಗೇ 7 ಕೇಸ್ಗಳು ದಾಖಲಾಗಿ, ಗುಜರಾತ್ನಲ್ಲಿ ಇಬ್ಬರಿಗೆ ಈ ಸೋಂಕು ದೃಢಪಟ್ಟಿತ್ತು.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಎರಡನೇ ಹಾಗೂ ದೇಶದಲ್ಲಿ 33ನೇ ಒಮಿಕ್ರಾನ್ (Omicron) ಸೋಂಕಿನ ಪ್ರಕರಣ ಪತ್ತೆಯಾಗಿದೆ. ದೆಹಲಿ (Delhi)ಯಲ್ಲಿ ಇಂದು 2ನೇ ಒಮಿಕ್ರಾನ್ ಕೇಸ್ ದಾಖಲಾಗಿದ್ದನ್ನು ಅಲ್ಲಿನ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ದೃಢಪಡಿಸಿದ್ದಾರೆ. ಇವರು ಜಿಂಬಾಬ್ವೆಯಿಂದ ದೆಹಲಿಗೆ ಬಂದವರಾಗಿದ್ದು, ಕೊವಿಡ್ 19 ಸೋಂಕು ದೃಢಪಟ್ಟಿತ್ತು. ನಂತರ ಅವರ ಮಾದರಿಗಳನ್ನು ಜಿನೋಮ್ ಸಿಕ್ವೆನ್ಸಿಂಗ್ಗೆ ಕಳಿಸಲಾಗಿತ್ತು. ಅದರಲ್ಲಿ ಒಮಿಕ್ರಾನ್ ಇರುವುದು ದೃಢಪಟ್ಟಿದೆ.
ಒಮಿಕ್ರಾನ್ ಸೋಂಕಿತನನ್ನು ಸದ್ಯ ದೆಹಲಿಯ ಲೋಕ ನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಅಲ್ಲಿ ಒಮಿಕ್ರಾನ್ ಸೋಂಕಿತರಿಗೆಂದೇ ಪ್ರತ್ಯೇಕ್ ವಾರ್ಡ್ ಕೂಡ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಒಟ್ಟಾರೆ 27 ಪ್ರಯಾಣಿಕರನ್ನು ಅಡ್ಮಿಟ್ ಮಾಡಲಾಗಿತ್ತು. ಅದರಲ್ಲಿ ಇದೀಗ ಎರಡನೇ ವ್ಯಕ್ತಿಗೆ ಸೋಂಕು ತಗುಲಿದೆ. ಕೆಲವೇ ದಿನಗಳ ಹಿಂದೆ ಒಬ್ಬರಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿತ್ತು. ಉಳಿದ 25ಜನರಲ್ಲಿ ವರದಿ ನೆಗೆಟಿವ್ ಬಂದಿದೆ.
ಭಾರತದಲ್ಲಿ ಈಗ ಒಮಿಕ್ರಾನ್ ಪ್ರಕರಣ 33ಕ್ಕೆ ಏರಿಕೆಯಾಗಿದೆ. ಶುಕ್ರವಾರ ಮಹಾರಾಷ್ಟ್ರದಲ್ಲಿ ಒಟ್ಟಿಗೇ 7 ಕೇಸ್ಗಳು ದಾಖಲಾಗಿ, ಗುಜರಾತ್ನಲ್ಲಿ ಇಬ್ಬರಿಗೆ ಈ ಸೋಂಕು ದೃಢಪಟ್ಟಿತ್ತು. ಮಹಾರಾಷ್ಟ್ರದಲ್ಲೇ 17 ಒಮಿಕ್ರಾನ್ ಸೋಂಕಿತರು ಇದ್ದು, ಸದ್ಯ ಮುಂಬೈನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಯಾವುದೇ ಮೆರವಣಿಗೆ, ರ್ಯಾಲಿ, ಗುಂಪುಗೂಡುವಿಕೆಯನ್ನು ನಿಷೇಧಿಸಲಾಗಿದೆ. ಈ ಮಧ್ಯೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆಂದು ದೇಶದಲ್ಲಿ ಮಾರ್ಗಸೂಚಿ ಬದಲಾಗಿದೆ. ಒಮಿಕ್ರಾನ್ ನಿಯಂತ್ರಣಕ್ಕೆ ಇನ್ನಷ್ಟು ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಸೋಮವಾರದಿಂದ 3 ದಿನ ಸಿಎಂ ಪ್ರವಾಸ; ಕುಟುಂಬ ಸಮೇತರಾಗಿ ಕಾಶಿ, ಅಯೋಧ್ಯೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬೊಮ್ಮಾಯಿ