65ರ ಹರೆಯದಲ್ಲಿ ಮತ್ತೆ ಸಪ್ತಪದಿ ತುಳಿಯಲು ಸಜ್ಜಾದ ಹಿರಿಯ ವಕೀಲ ಹರೀಶ್‌ ಸಾಳ್ವೆ

|

Updated on: Oct 27, 2020 | 7:49 AM

ದೆಹಲಿ: ಕುಲಭೂಷನ್ ಜಾಧವ್ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಐಸಿಜೆಯಲ್ಲಿ ವಾದಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ 65 ರ ಹರೆಯದಲ್ಲೂ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಮೊದಲನೇ ಪತ್ನಿಗೆ ವಿಚ್ಛೇದನ ನೀಡಿರುವ ಹರೀಶ್ ಸಾಳ್ವೆ ಲಂಡನ್​ನ‌ ಕಲಾವಿದೆ ಕ್ಯಾರೋಲಿನ್ ಬ್ರೋಸಾರ್ಡ್ ಅವರ ಜೊತೆ 2ನೇ ವಿವಾಹ ಮಾಡಿಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಮಾಜಿ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿದ್ದ ಹರೀಶ್ ಸಾಳ್ವೆ. ದೇಶದಲ್ಲಿ ಅತಿ ಹೆಚ್ಚು ಶುಲ್ಕ ಪಡೆಯುವ ಹಿರಿಯ ವಕೀಲರಾಗಿದ್ದಾರೆ. ಹರೀಶ್ ಸಾಳ್ವೆ- ಮೀನಾಕ್ಷಿ ಸಾಳ್ವೆ […]

65ರ ಹರೆಯದಲ್ಲಿ ಮತ್ತೆ ಸಪ್ತಪದಿ ತುಳಿಯಲು ಸಜ್ಜಾದ ಹಿರಿಯ ವಕೀಲ ಹರೀಶ್‌ ಸಾಳ್ವೆ
Follow us on

ದೆಹಲಿ: ಕುಲಭೂಷನ್ ಜಾಧವ್ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಐಸಿಜೆಯಲ್ಲಿ ವಾದಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ 65 ರ ಹರೆಯದಲ್ಲೂ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಮೊದಲನೇ ಪತ್ನಿಗೆ ವಿಚ್ಛೇದನ ನೀಡಿರುವ ಹರೀಶ್ ಸಾಳ್ವೆ ಲಂಡನ್​ನ‌ ಕಲಾವಿದೆ ಕ್ಯಾರೋಲಿನ್ ಬ್ರೋಸಾರ್ಡ್ ಅವರ ಜೊತೆ 2ನೇ ವಿವಾಹ ಮಾಡಿಕೊಳ್ಳಲಿದ್ದಾರೆ.

ಕೇಂದ್ರ ಸರ್ಕಾರದ ಮಾಜಿ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿದ್ದ ಹರೀಶ್ ಸಾಳ್ವೆ. ದೇಶದಲ್ಲಿ ಅತಿ ಹೆಚ್ಚು ಶುಲ್ಕ ಪಡೆಯುವ ಹಿರಿಯ ವಕೀಲರಾಗಿದ್ದಾರೆ. ಹರೀಶ್ ಸಾಳ್ವೆ- ಮೀನಾಕ್ಷಿ ಸಾಳ್ವೆ ದಂಪತಿಗೆ 37 ವರ್ಷದ ಸಾಕ್ಷಿ, 33 ವರ್ಷದ ಸಾನಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ‌.

ಈಗ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ಹಾಗೂ 2ನೇ ಮದುವೆಯಾಗಲು ಹೊರಟಿರುವ ಕ್ಯಾರೋಲಿನ್ ಬ್ರೋಸಾರ್ಡ್ ಗೆ 18 ವರ್ಷದ ಮಗಳಿದ್ದಾಳೆ. ಸದ್ಯ ಲಂಡನ್​ನಲ್ಲಿರುವ ಹರೀಶ್ ಅಲ್ಲೇ ಕ್ಯಾರೋಲಿನ್ ಜೊತೆಗೆ ವಿವಾಹ ಆಗಲಿದ್ದಾರೆ‌.