Video: ಓಲಾ ಸ್ಕೂಟರ್​ನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ, ಸ್ವಲ್ಪದರಲ್ಲೇ ಪಾರಾದ ತಂದೆ-ಮಗ

Updated on: Jan 22, 2026 | 9:07 AM

ಓಲಾ ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸೋಲಾಪುರದಲ್ಲಿ ನಡೆದಿದೆ. ತಂದೆ ಮಗನನ್ನು ಶಾಲೆಗೆ ಬಿಡಲು ಬೈಕ್ ಮೇಲೆ ಕುಳಿತು ಕಾಯುತ್ತಿರುತ್ತಾರೆ. ಮಗ ಬಂದು ಕುಳಿತ ತಕ್ಷಣ, ಅಲ್ಲೇ ಹೋಗುತ್ತಿದ್ದ ಮಹಿಳೆಯೊಬ್ಬರು ಬೈಕ್​ನಲ್ಲಿ ಹೊಗೆ ಬರುತ್ತಿರುವುದನ್ನು ನೋಡಿ ಎಚ್ಚರಿಕೆ ಕೊಡುತ್ತಾರೆ, ಆಗ ಇಬ್ಬರೂ ಬೈಕ್​ನಿಂದ ಇಳಿದು ದೂರ ಓಡುತ್ತಾರೆ.

ಸೋಲಾಪುರ, ಜನವರಿ 22: ಓಲಾ ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸೋಲಾಪುರದಲ್ಲಿ ನಡೆದಿದೆ. ತಂದೆ ಮಗನನ್ನು ಶಾಲೆಗೆ ಬಿಡಲು ಬೈಕ್ ಮೇಲೆ ಕುಳಿತು ಕಾಯುತ್ತಿರುತ್ತಾರೆ. ಮಗ ಬಂದು ಕುಳಿತ ತಕ್ಷಣ, ಅಲ್ಲೇ ಹೋಗುತ್ತಿದ್ದ ಮಹಿಳೆಯೊಬ್ಬರು ಬೈಕ್​ನಲ್ಲಿ ಹೊಗೆ ಬರುತ್ತಿರುವುದನ್ನು ನೋಡಿ ಎಚ್ಚರಿಕೆ ಕೊಡುತ್ತಾರೆ, ಆಗ ಇಬ್ಬರೂ ಬೈಕ್​ನಿಂದ ಇಳಿದು ದೂರ ಓಡುತ್ತಾರೆ. ಬೈಕ್​ನಿಂದ ಬರುತ್ತಿದ್ದ ಹೊಗೆ ಮತ್ತಷ್ಟು ಹೆಚ್ಚಾಗುತ್ತದೆ. ಆಗ ಅಲ್ಲಿದ್ದವರು ಬೈಕ್ ಮೇಲೆ ನೀರು ಸುರಿಯುತ್ತಾರೆ. ಇದಿಷ್ಟು ಆ ವಿಡಿಯೋದಲ್ಲಿದೆ. ತಂದೆ ಮಗ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More