ಗಣರಾಜ್ಯೋತ್ಸವಕ್ಕೂ ಮುನ್ನ ಉಗ್ರರ ದಾಳಿ ಸಾಧ್ಯತೆ; ಭದ್ರತಾ ಪಡೆಗಳಿಂದ ಹೈ ಅಲರ್ಟ್ ಘೋಷಣೆ
ಉಗ್ರರ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ಪಡೆ ವಿಧಾನಸಭಾ ಚುನಾವಣೆಗೆ ಒಳಪಡುವ 5 ರಾಜ್ಯಗಳಲ್ಲಿ ನಿಯೋಜಿಸಲಾದ ಅಧಿಕಾರಿಗಳು ಮತ್ತು ಪಡೆಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಭಾರತದ ಇತರ ಭಾಗಗಳಲ್ಲಿ ಗಣರಾಜ್ಯೋತ್ಸವದ (ಜ. 26) ಮೊದಲು ಶಂಕಿತ ಭಯೋತ್ಪಾದನಾ ದಾಳಿಯ ಕುರಿತು ಶುಕ್ರವಾರ ಅನೇಕ ಏಜೆನ್ಸಿಗಳಿಂದ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಏಜೆನ್ಸಿಗಳು ದೇಶಾದ್ಯಂತ ಹೆಚ್ಚಿನ ಅಲರ್ಟ್ ಘೋಷಿಸಿವೆ. ಉಗ್ರರ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ಪಡೆ ವಿಧಾನಸಭಾ ಚುನಾವಣೆಗೆ ಒಳಪಡುವ 5 ರಾಜ್ಯಗಳಲ್ಲಿ ನಿಯೋಜಿಸಲಾದ ಅಧಿಕಾರಿಗಳು ಮತ್ತು ಪಡೆಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಿದೆ.
ಮಾಹಿತಿ ಮತ್ತು ಒಳಹರಿವಿನ ವಿವರವಾದ ಪ್ರತಿಯನ್ನು ಭದ್ರತಾ ಪಡೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ನ್ಯೂಸ್ 18 ವರದಿ ಮಾಡಿದೆ. ಭದ್ರತಾ ಎಚ್ಚರಿಕೆಯ ಪ್ರಕಾರ, ಜನನಿಬಿಡ ಸ್ಥಳಗಳು ಮತ್ತು ಮಾರುಕಟ್ಟೆಗಳನ್ನು ಹೊರತುಪಡಿಸಿ ಉನ್ನತ ಮಟ್ಟದ ನಾಯಕರನ್ನು ಗುರಿಯಾಗಿಸಲು ಭಯೋತ್ಪಾದಕರು ದಾಳಿ ಅಥವಾ ಸ್ಫೋಟಗಳನ್ನು ನಡೆಸುವ ಸಾಧ್ಯತೆಯಿದೆ. ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಧಾರ್ಮಿಕ ಸ್ಥಳಗಳು ಮತ್ತು ಪ್ರಮುಖ ಸ್ಥಾಪನೆಗಳ ಮೇಲೆ ಕೂಡ ದಾಳಿ ನಡೆಸಬಹುದು.
ಈ ಹಿನ್ನೆಲೆಯಲ್ಲಿ ಯೂನಿಟ್ ಕಂಟ್ರೋಲ್ ರೂಂಗಳು ಮತ್ತು ಕೇಂದ್ರಗಳನ್ನು ತ್ವರಿತವಾಗಿ ಮಾಹಿತಿ ಹಂಚಿಕೊಳ್ಳಲು 24 ಗಂಟೆಗಳ ಕಾಲ ಸೂಕ್ತವಾಗಿ ನಿರ್ವಹಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹೆಚ್ಚು ಎಚ್ಚರ ವಹಿಸಲಾಗುತ್ತದೆ.
ಇದನ್ನೂ ಓದಿ: ಇಂದು 3 ಉಗ್ರರ ಹತ್ಯೆ; ‘2022ರಲ್ಲಿ ಒಟ್ಟು 11 ಭಯೋತ್ಪಾದಕರನ್ನು ಕೊಲ್ಲಲಾಗಿದೆ’- ಪೊಲೀಸ್ ಮೂಲಗಳ ಮಾಹಿತಿ
ಶ್ರೀನಗರದಲ್ಲಿ ಇಂದು 3 ಉಗ್ರರ ಹತ್ಯೆ; 24 ಗಂಟೆಗಳಲ್ಲಿ ಒಟ್ಟು 9 ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು