ನಾವು ಯಾವುದೇ ಉಗ್ರ ಸಂಘಟನೆಯವರಲ್ಲ, ನಿರುದ್ಯೋಗಿಗಳು ಎಂದು ನೀಲಂ ಹೇಳಿದ್ದಾರೆ. ಲೋಕಸಭೆಯ ಭದ್ರತೆಯಲ್ಲಿ ಭಾರಿ ಲೋಪ ಉಂಟಾಗಿದೆ. ಸಂಸತ್ ಹೊರಗೆ ನಿಂತು, ಭಾರತ್ ಮಾತಾ ಕಿ ಜೈ, ಜೈ ಭೀಮ್, ಜೈ ಭಾರತ್ ಎಂದು ಘೋಷಣೆ ಕೂಗುತ್ತಿದ್ದ ನೀಲಂರನ್ನು ವಶಕ್ಕೆ ಪಡೆಯುವಾಗ ಕೆಲವು ಮಾಹಿತಿಯನ್ನು ಹೊರಹಾಕಿದ್ದಾರೆ.
ಇಬ್ಬರು ಪ್ರೇಕ್ಷಕರ ಗ್ಯಾಲರಿ ಮೂಲಕ ಸದನಕ್ಕೆ ನುಗ್ಗಿ ಸ್ಮೋಕ್ ಬಾಂಬ್ ಎಸೆದಿದ್ದರು. ಅವರನ್ನು ಸಾಗರ್ ಹಾಗೂ ಮೈಸೂರು ಮೂಲದ ಮನೋರಂಜನ್ ಎಂಬುದು ತಿಳಿದುಬಂದಿದೆ.
ನಾವು ಯಾವ ಉಗ್ರ ಸಂಘಟನೆಗಳಿಗೆ ಸೇರಿದವರಲ್ಲ ನಿರುದ್ಯೋಗದ ಕಾರಣ ಹೀಗೆ ಮಾಡಿದ್ದೇವೆ, ನಾವು ನಮ್ಮ ಹಕ್ಕುಗಳ ಬಗ್ಗೆ ಮಾತನಾಡಲು ಹೋದರೆ ಲಾಠಿ ಚಾರ್ಜ್ ಮೂಲಕ ಜೈಲಿಗಟ್ಟುತ್ತಾರೆ, ಚಿತ್ರಹಿಂಸೆ ನೀಡುತ್ತಾರೆ. ನಾವು ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಎಲ್ಲಾ ಕಡೆಯು ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಸಂಸತ್ತಿನಲ್ಲಿ ಭದ್ರತಾಲೋಪ: ಕಲಾಪದೊಳಗೆ ನುಗ್ಗಿದ್ದವ ಗುರುತು ಪತ್ತೆ, ಪ್ರತಾಪ್ ಸಿಂಹ ಪಿಎ ಕಡೆಯಿಂದ ಪಾಸ್
ನೀಲಂ ತಾಯಿ ಹೇಳಿದ್ದೇನು?
ಮಗಳು ಚೆನ್ನಾಗಿ ಓದಿಕೊಂಡಿದ್ದಾಳೆ, ಕೆಲಸ ಸಿಕ್ಕಿಲ್ಲ ಎಂದು ನೊಂದಿದ್ದಾಳೆ, ನಾನು ಚೆನ್ನಾಗಿ ಓದಿದ್ದೇನೆ ಆದರೆ ಕೆಲಸವಿಲ್ಲ ಎಂದು ಯಾವಾಗಲೂ ಹೇಳುತ್ತಲೇ ಇರುತ್ತಿದ್ದಳು. ನೀಲಂ ಮತ್ತು ಅಮೋಲ್ ಶಿಂಧೆ ಹೊರತುಪಡಿಸಿ, ಲೋಕಸಭೆಯ ಕಲಾಪದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಸದನದ ಒಳಗೆ ಜಿಗಿದು ಹೊಗೆ ಹರಡಿದ ಇಬ್ಬರು ಜನರನ್ನು ಪೊಲೀಸರು ಬಂಧಿಸಿದ್ದಾರೆ, ಸಾಗರ್ ಮತ್ತು ಮನೋರಂಜನ್. ಒಟ್ಟು ಆರು ಮಂದಿ ಭಾಗಿಯಾಗಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ