ಲಕ್ನೋ: 9 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ
ಬೀದಿ ನಾಯಿ( Stray Dog)ಯೊಂದು ದಾಳಿ ಮಾಡಿದ ಪರಿಣಾಮ 9 ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಜ್‌ಗಢ್ ಜಿಲ್ಲೆಯ ಮಚಲ್‌ಪುರ ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ಬಾಲಕಿಯನ್ನು ಅರ್ಪಿತಾ ಗುರ್ಜರ್ ಎಂದು ಗುರುತಿಸಲಾಗಿದ್ದು, ಆಕೆಯ ಮುಖ ಮತ್ತು ಕುತ್ತಿಗೆಗೆ ಗಾಯಗಳಾಗಿವೆ, ಚಿಕಿತ್ಸೆಯಲ್ಲಿ 17 ಹೊಲಿಗೆಗಳನ್ನು ಹಾಕಲಾಗಿದೆ.

ಮಚಲ್‌ಪುರ ಪ್ರದೇಶದಲ್ಲಿನ ತನ್ನ ಚಿಕ್ಕಪ್ಪ ಜ್ಞಾನ್ ಸಿಂಗ್ ಗುರ್ಜರ್ ಅವರ ಮನೆಯಲ್ಲಿ ತಂಗಿರುವ ಅರ್ಪಿತಾ ಗುರ್ಜಾರ್ ಸ್ಥಳೀಯ ದಿನಸಿ ಅಂಗಡಿಗೆ ಬಂದಿದ್ದಾಗ ಬೀದಿ ನಾಯಿ ದಾಳಿ ಮಾಡಿದೆ. ಬೀಳುತ್ತಿದ್ದಂತೆಯೇ ನಾಯಿ ಆಕೆಯ ಮುಖ, ಕುತ್ತಿಗೆ ಹಾಗೂ ಬಲ ಕಿವಿಗೆ ಕಚ್ಚಿದೆ.
ಬಾಲಕಿಯ ಮೇಲೆ ನಾಯಿ ದಾಳಿ ನಡೆಸುತ್ತಿರುವುದನ್ನು ಕಂಡ ಅಲ್ಲಿದ್ದವರೊಬ್ಬರು ಆಕೆಯ ಸಹಾಯ ಮಾಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕಿಗೆ ಒಟ್ಟು 17 ಹೊಲಿಗೆಗಳನ್ನು ಹಾಕಲಾಗಿದೆ. ಕಿರಾಣಿ ಅಂಗಡಿ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ.
ಮತ್ತಷ್ಟು ಓದಿ: ಜನನಿಬಿಡ ಚೆನ್ನೈ ರಸ್ತೆಯಲ್ಲಿ ಒಂದು ಗಂಟೆಯೊಳಗೆ 29 ಜನರಿಗೆ ಕಚ್ಚಿದ ಬೀದಿನಾಯಿ
ಅದೇ ದಿನ ನಾಲ್ವರ ಮೇಲೆ ಬೀದಿ ನಾಯಿ ದಾಳಿ ಮಾಡಿದೆ ಗ್ರಾಮಸ್ಥರ ಪ್ರಕಾರ, ಅದೇ ದಿನ ಅರ್ಪಿತಾ ಗುರ್ಜರ್ ಹೊರತುಪಡಿಸಿ ನಾಲ್ಕು ಜನರ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಗಂಟೆಗಳ ಹುಡುಕಾಟದ ನಂತರ, ಬೀದಿ ನಾಯಿಯನ್ನು ನಾಗರಿಕ ಮಂಡಳಿಯ ಅಧಿಕಾರಿಗಳು ಪತ್ತೆ ಹಚ್ಚಿ ಹತ್ಯೆ ಮಾಡಿದ್ದಾರೆ.
ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಸಾದತ್‌ಗಂಜ್ ಪ್ರದೇಶದಲ್ಲಿ 6 ವರ್ಷದ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬೀದಿ ನಾಯಿಯೊಂದು ದಾಳಿ ಮಾಡಿತ್ತು. ವರದಿಗಳ ಪ್ರಕಾರ, ಆಲಿಯಾ ತನ್ನ ಅಣ್ಣನೊಂದಿಗೆ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಳು. ಇದ್ದಕ್ಕಿದ್ದಂತೆ 6 ನಾಯಿಗಳು ಆಲಿಯಾ ಬಳಿ ಬಂದು ದಾಳಿ ನಡೆಸಿತ್ತು.
ಆಲಿಯಾಳ ಕಿರುಚಾಟವನ್ನು ಕೇಳಿ ಆ ಪ್ರದೇಶದಿಂದ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಆಕೆಗೆ ಸಹಾಯ ಮಾಡಲು ಧಾವಿಸಿ ನಾಯಿಗಳನ್ನು ಓಡಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ