ಸಂಸತ್ತಿನ ಭದ್ರತಾ ವ್ಯವಸ್ಥೆ ಬದಲು, ಪ್ರವೇಶದ್ವಾರದಲ್ಲಿ ಬಾಡಿ ಸ್ಕ್ಯಾನರ್ ಅಳವಡಿಕೆ

ಲೋಕಸಭೆ( Lok Sabha)ಯಲ್ಲಿ ಸಂಭವಿಸಿದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಕೊಂಚ ಬದಲಾಯಿಸಲಾಗುತ್ತಿದ್ದು, ಪ್ರವೇಶದ್ವಾರದಲ್ಲಿ ಬಾಡಿ ಸ್ಕ್ಯಾನರ್​ ಅಳವಡಿಸಲಾಗುತ್ತದೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ಭದ್ರತಾ ಪರಿಶೀಲನೆ ನಡೆಸುವಂತೆ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಓಂ ಬಿರ್ಲಾ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ.

ಸಂಸತ್Image Credit source: NDTV
Follow us
|

Updated on: Dec 13, 2023 | 8:31 PM

ಲೋಕಸಭೆ( Lok Sabha)ಯಲ್ಲಿ ಸಂಭವಿಸಿದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಕೊಂಚ ಬದಲಾಯಿಸಲಾಗುತ್ತಿದ್ದು, ಪ್ರವೇಶದ್ವಾರದಲ್ಲಿ ಬಾಡಿ ಸ್ಕ್ಯಾನರ್​ ಅಳವಡಿಸಲಾಗುತ್ತದೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ಭದ್ರತಾ ಪರಿಶೀಲನೆ ನಡೆಸುವಂತೆ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಓಂ ಬಿರ್ಲಾ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ.

ಸಂಸತ್ತಿನ ಎಲ್ಲಾ ವಿವಿಧ ಗೇಟ್‌ಗಳಲ್ಲಿ ಪ್ರವೇಶ ವ್ಯವಸ್ಥೆಯನ್ನು ನವೀಕರಿಸಲಾಗುವುದು ಮತ್ತು ಪೂರ್ಣ ದೇಹದ ಸ್ಕ್ಯಾನರ್‌ಗಳನ್ನು ಅಳವಡಿಸಲಾಗುವುದು ಎಂದು ಲೋಕಸಭೆ ಸ್ಪೀಕರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರ ಸಂಸತ್ತಿನಲ್ಲಿ ನಡೆದ ಪ್ರಮುಖ ಭದ್ರತಾ ಲೋಪದಲ್ಲಿ ಇಬ್ಬರು ವ್ಯಕ್ತಿಗಳು ಲೋಕಸಭೆಯ ಸಾರ್ವಜನಿಕ ಗ್ಯಾಲರಿಯಿಂದ ಸಂಸದರು ಕುಳಿತುಕೊಳ್ಳುವ ಪ್ರದೇಶಕ್ಕೆ ಜಿಗಿದು ಕಲರ್ ಕ್ರ್ಯಾಕರ್ಸ್​ಗಳನ್ನು ಎಸೆದಿದ್ದರು.

ಸಂಸತ್ತಿನ ಪ್ರವೇಶಕ್ಕಾಗಿ ನಾಲ್ಕು ಹಂತದ ಭದ್ರತಾ ತಪಾಸಣೆ ಜಾರಿಯಲ್ಲಿದೆ. ಸಿಆರ್‌ಪಿಎಫ್ ಹೊರ ವರ್ತುಲದ ಭದ್ರತೆಯ ಉಸ್ತುವಾರಿ ವಹಿಸಿದ್ದರೆ, ವಿಶೇಷ ಭದ್ರತಾ ತಂಡವು ಮುಖ್ಯ ಕಟ್ಟಡದ ಉಸ್ತುವಾರಿ ವಹಿಸಿಕೊಂಡಿದೆ. ಇದಲ್ಲದೆ, ಎರಡೂ ಸದನಗಳು ತಮ್ಮದೇ ಆದ ಭದ್ರತಾ ನಿರ್ದೇಶಕರನ್ನು ಹೊಂದಿವೆ.

ಮತ್ತಷ್ಟು ಓದಿ: ಸಂಸತ್ತಿನೊಳಗೆ ಹೋಗಲು ವಿಸಿಟರ್ಸ್ ಪಾಸ್ ಪಡೆಯುವುದು ಹೇಗೆ? ಈ ಭದ್ರತಾ ಹಂತಗಳನ್ನು ಪಾಲಿಸಲೇಬೇಕು

ಲೋಕಸಭೆಗೆ ವಿಸಿಟರ್ಸ್​ ಪಾಸ್ ಪಡೆಯಲು ಫಾರ್ಮ್‌ನಲ್ಲಿ ಸಂಸದರ ಶಿಫಾರಸು ಸಹಿ ಅಗತ್ಯ. ಭೇಟಿಯ ಸಮಯದಲ್ಲಿ ವಿಸಿಟರ್ಸ್​ ತಮ್ಮ ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು.

ಭದ್ರತೆಯಿಂದ ತಪಾಸಣೆಗೆ ಒಳಗಾಗಬೇಕು, ನಂತರ ಅವರು ಫೋಟೋ ಗುರುತಿನ ಚೀಟಿಯನ್ನು ಪಡೆಯಬೇಕು. ನಂತರ ಅವರನ್ನು ಭದ್ರತಾ ಕಮಾಂಡೋಗಳು ಸಂದರ್ಶಕರ ಗ್ಯಾಲರಿಗೆ ಕರೆದೊಯ್ಯುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ

ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ

ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು

ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?

ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು

ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ

ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ

ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ

Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ

Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ