AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್ತಿನೊಳಗೆ ಹೋಗಲು ವಿಸಿಟರ್ಸ್ ಪಾಸ್ ಪಡೆಯುವುದು ಹೇಗೆ? ಈ ಭದ್ರತಾ ಹಂತಗಳನ್ನು ಪಾಲಿಸಲೇಬೇಕು

ಸಂಸತ್​​​​ ಒಳಗೆ ಬಂದು ಅಶ್ರುವಾಯು ಸಿಡಿಸಿದ ಮೈಸೂರಿನ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್​​​ ಸಿಂಹ ಅವರ ಪಿಎ ವಿಸಿಟರ್ಸ್ ಪಾಸ್ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ವಿಸಿಟರ್ಸ್ ಪಾಸ್ ಪಡೆಯಬೇಕಾದರೆ ಏನು ಮಾಡಬೇಕು. ಅಲ್ಲಿಯ ಭದ್ರತಾ ಹಂತಗಳು ಹೇಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ.

ಸಂಸತ್ತಿನೊಳಗೆ ಹೋಗಲು ವಿಸಿಟರ್ಸ್ ಪಾಸ್ ಪಡೆಯುವುದು ಹೇಗೆ? ಈ ಭದ್ರತಾ ಹಂತಗಳನ್ನು ಪಾಲಿಸಲೇಬೇಕು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Dec 14, 2023 | 5:41 PM

Share

ಸಂಸತ್ತಿನಲ್ಲಿ ಭದ್ರತಾ ಲೋಪ (Parliament security breach) ಉಂಟಾಗಿದ್ದು, ಸಾಗರ್​​ ಶರ್ಮ ಮತ್ತು ಮನೋರಂಜನ್‌​​ ಎಂಬ ಇಬ್ಬರು ಯುವಕರು ಸಂಸತ್​​​ ಅಧಿವೇಶದಲ್ಲಿ ನಿಂತ ಅಶ್ರುವಾಯು ಸಿಡಿಸಿದ ಘಟನೆ ನಡೆದಿದೆ. ಇದೀಗ ಒಟ್ಟು ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧನವಾಗಿರುವ ನಾಲ್ವರಲ್ಲಿ ಒಬ್ಬ ಮೈಸೂರಿನ ಮನೋಹರ್​​ ಎಂದು ಹೇಳಲಾಗಿದೆ. ಇವರಿಗೆ ಸಂಸತ್​​​ ಒಳಗೆ ಹೋಗಲು ಮೈಸೂರಿನ ಸಂಸದ ಪ್ರತಾಪ್​​​​ ಸಿಂಹ ಅವರ ಪಿಎ ಪಾಸ್​​​ ನೀಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈ ವಿಸಿಟರ್ಸ್ ಪಾಸ್ ಎಂದರೇನು? ಸಂಸತ್​​ ಒಳಗೆ ಒಬ್ಬ ಸಾಮಾನ್ಯ ವ್ಯಕ್ತಿ ಹೋಗಬೇಕಾದರೆ ಯಾವೆಲ್ಲ ಕ್ರಮ ಮತ್ತು ಭದ್ರತೆಗಳನ್ನು ಪರಿಶೀಲನೆ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಪಾಸ್​​ ಪಡೆಯುವುದು ಮತ್ತು ಪ್ರೋಟೋಕಾಲ್​​ಗಳು ಹೇಗೆ?

ಸಂಸತ್ತಿನ ಸಂಕೀರ್ಣದೊಳಗೆ ಹೋಗಲು ನೀಡುವ ಗ್ಯಾಲರಿ ಪಾಸ್‌ಗಳ ವಿತರಣೆಯ ನಿಯಂತ್ರಣ ಪ್ರೋಟೋಕಾಲ್​​​​​​ ಹೊಂದಿರುತ್ತದೆ. ಸಂಸತ್ತಿನ ಸದಸ್ಯರು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸಬಹುದು, ಪತ್ರಕರ್ತರು, ಮಾಧ್ಯಮ ಮಿತ್ರರು ವೀಕ್ಷಕರಾಗಿ ಈ ಪಾಸ್ ಪಡೆಯಬಹುದು​​​ , ಪ್ರತಿ ಪಾಸ್‌ಗೆ ವಿಶಿಷ್ಟ ಐಡಿಯನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಈ ಪಾಸ್​​​ ಐಡಿಯಲ್ಲೂ ಬೇರೆ ಬೇರೆ ವಿಧಗಳಿವೆ. ಪ್ರೇಕ್ಷಕರ ಗ್ಯಾಲರಿಗೆ ಪಾಸ್​​​​ ಪಡೆಯಬೇಕಾದರೆ ಸಂಸದ ಸಹಿ ಕೂಡ ಇರಬೇಕು. ಒಂದು ಪಾಸ್​​​ನಲ್ಲಿ ಇಬ್ಬರು ಹೋಗಬಹುದು. ಆ ಪಾಸಿನಲ್ಲಿ  ಒಬ್ಬ ಮತ್ತು ಪ್ಲಸ್​​​ ಎಂದು ನಮೂದಿಸಿರುತ್ತಾರೆ.  ಇನ್ನು ವಿದ್ಯಾರ್ಥಿಗಳು ಈ ಪಾಸ್​​​ ಪಡೆಯಬೇಕಾದರೆ ಶಾಲೆಯಿಂದ ಒಂದು ಪತ್ರವನ್ನು ಪಡೆದು, ಅದಕ್ಕೆ ಸಂಸದರ ಸಹಿ ಇದ್ದು, ನಂತರ ಹೋಗಬಹುದು.

ಭದ್ರತಾ ರಕ್ಷಕರ ಕಾರ್ಯ

ಸಂಸತ್ತಿನ ಒಳಗೆ ಹಲವು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ಇದನ್ನು ನೋಡಿಕೊಳ್ಳುವವರು ಜಂಟಿ ಕಾರ್ಯದರ್ಶಿ. ಇದರಲ್ಲಿ ದೆಹಲಿ ಪೊಲೀಸ್, ಸಂಸತ್ತು ರಕ್ಷಕರು ಮತ್ತು ವಿವಿಧ ಮಿತ್ರ ಭದ್ರತಾ ಏಜೆನ್ಸಿಗಳನ್ನು ಒಳಗೊಂಡಿರುತ್ತಾರೆ. ಇನ್ನು ಸಂಸತ್ತಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಬಹು-ಪದರದಿಂದ ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸಾಂಪ್ರದಾಯಿಕ ಭದ್ರತಾ ಕ್ರಮಗಳನ್ನು ಒಳಗೊಂಡಿದೆ. ಇಲ್ಲಿ ಟೈರ್ ಕಿಲ್ಲರ್‌ಗಳು ಮತ್ತು ರೋಡ್ ಬ್ಲಾಕರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ.

ಪ್ರದೇಶವಾರು ಜವಾಬ್ದಾರಿ

ಇನ್ನು ಇಲ್ಲಿ ಪ್ರದೇಶವಾರು ಜವಾಬ್ದಾರಿಗಳನ್ನು ಹೊಂದಿರುತ್ತದೆ. ಭದ್ರತಾ ಅಧಿಕಾರಿ/ಸಹಾಯಕ ನಿರ್ದೇಶಕರು (ಭದ್ರತೆ) ಸಂಸತ್ ಭವನದ ಕಟ್ಟಡದೊಳಗೆ ಹೋಗುವ ವ್ಯಕ್ತಿಗಳ ಪಾಸ್‌ಗಳನ್ನು ಸರಿಯಾಗಿ ಪರಿಶೀಲಿಸುತ್ತಾರೆ ಮತ್ತು ಅವರನ್ನು ಕೂಡ ಪರಿಶೀಲಿಸುತ್ತಾರೆ. ಯಾವುದೇ ಅನುಮಾನ ಬಂದರು ಅವುಗಳನ್ನು ಹಿರಿಯ ಅಧಿಕಾರಿಗಳಿಗೆ ಹೇಳುತ್ತಾರೆ. ಅಲ್ಲಿ ಅನುಮಾನಾಸ್ಪ ವಿಚಾರಗಳು ತಿಳಿದುಬಂದಲ್ಲಿ ತಕ್ಷಣ ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ.

ಸಂಸತ್​​​ ಗ್ಯಾಜೆಟ್‌, ಡೋರ್-ಫ್ರೇಮ್ ಮೆಟಲ್ ಡಿಟೆಕ್ಟರ್‌ ಅಳವಡಿಕೆ

ಭದ್ರತಾ ಶಸ್ತ್ರಾಗಾರವು ಡೋರ್-ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳು, ಆಧುನಿಕ ಗ್ಯಾಜೆಟ್‌ಗಳು ಮತ್ತು ವಾಹನದ ಪ್ರವೇಶವನ್ನು ನಿಯಂತ್ರಿಸುವ ರೇಡಿಯೋ ಫ್ರೀಕ್ವೆನ್ಸಿ ಟ್ಯಾಗ್‌ಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಈ ಮೂಲಕ ಸಂಸತ್ತಿನಲ್ಲಿ ಸಂದರ್ಶಕನನ್ನು ಪರೀಕ್ಷಿಸಲಾಗುತ್ತದೆ ಮತ್ತು ಅವರ ಬ್ಯಾಗ್‌ಗಳನ್ನು ಕನಿಷ್ಠ ಮೂರು ಬಾರಿ ಪರಿಶೀಲಿಸಲಾಗುತ್ತದೆ. ಮೆಟಲ್ ಡಿಟೆಕ್ಟರ್‌ಗಳಲ್ಲಿ ಪರಿಶೀಲಿಸಿದ ನಂತರ ಮತ್ತೆ ಎರಡನೇ ಹಂತದ ಭದ್ರತಾ ತಪಾಸಣೆ ಮಾಡಲಾಗುತ್ತದೆ. ಸಂದರ್ಶಕರ ಗ್ಯಾಲರಿಗೆ ಪ್ರವೇಶಿಸುವ ಮೊದಲು ಮತ್ತೊಂದು ಭದ್ರತಾ ತಪಾಸಣೆ ಮಾಡಲಾಗುತ್ತದೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾಲೋಪ: ಕಲಾಪದೊಳಗೆ ನುಗ್ಗಿದ್ದವ ಗುರುತು ಪತ್ತೆ, ಪ್ರತಾಪ್​​​ ಸಿಂಹ ಪಿಎ ಕಡೆಯಿಂದ ಪಾಸ್

ಶಸ್ತ್ರಾಸ್ತ್ರ ನಿಷೇಧ

ಸಂಸತ್ತಿನ ಕೆಲವು ಸದಸ್ಯರಿಗೆ ಭದ್ರತಾ ಸಿಬ್ಬಂದಿಗಳನ್ನು ನೀಡಲಾಗಿದೆ. ಆದರೆ ಅವರು ಅಧಿವೇಶನದ ಒಳಗೆ ಬರುವಂತಿಲ್ಲ. ಸಂಸತ್ ಭವನದ ಸಂಕೀರ್ಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರತಿ ಗೇಟ್‌ನಲ್ಲಿ ನಿಖರವಾದ ತಪಾಸಣೆ ನಂತರವೇ ಭದ್ರತಾ ಸಿಬ್ಬಂದಿಗೆ ಸಂಸತ್ತಿನ ಒಳಗೆ ಬರಬಹುದು

ಭದ್ರತಾ ಗುರುತಿಸುವಿಕೆ ಮತ್ತು ಸಮನ್ವಯ

ಸಂಸತ್ತಿನ ಒಳಗಿನ ಪ್ರವೇಶವು ವಿವಿಧ ಭದ್ರತಾ ಏಜೆನ್ಸಿಗಳ ನಡುವೆ ಗುರುತಿಸುವಿಕೆ ಮತ್ತು ಪರಿಶೀಲನೆ ಹಾಗೂ ಸಮನ್ವಯವನ್ನು ಸಾಧಿಸಲಾಗುತ್ತದೆ. ದೆಹಲಿ ಪೊಲೀಸ್, ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್, ಇಂಟೆಲಿಜೆನ್ಸ್ ಬ್ಯೂರೋ, ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಮತ್ತು ನ್ಯಾಷನಲ್ ಸೆಕ್ಯುರಿಟಿ ಗಾರ್ಡ್‌ ಸಂಸತ್ತಿನ ಭದ್ರತಾ ಸೇವೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Wed, 13 December 23

Follow Us
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು
ಉಚಿತ ಗ್ಯಾರಂಟಿಗೆ ‘ಕೈ’ ಶಾಸಕರಿಂದಲೇ ಮತ್ತೆ ಅಪಸ್ವರ
ಉಚಿತ ಗ್ಯಾರಂಟಿಗೆ ‘ಕೈ’ ಶಾಸಕರಿಂದಲೇ ಮತ್ತೆ ಅಪಸ್ವರ
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?