ಟಿಫಿನ್​ ಬಾಕ್ಸ್​ನಲ್ಲಿ ಪತ್ತೆಯಾಯ್ತು ಸ್ಫೋಟಕ; ದೊಡ್ಡಮಟ್ಟದ ಉಗ್ರ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ

ಟಿಫಿನ್​ ಬಾಕ್ಸ್​ನಲ್ಲಿ ಪತ್ತೆಯಾಯ್ತು ಸ್ಫೋಟಕ; ದೊಡ್ಡಮಟ್ಟದ ಉಗ್ರ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ
ಪ್ರಾತಿನಿಧಿಕ ಚಿತ್ರ

ಪಾಕಿಸ್ತಾನದಿಂದ ಡ್ರೋನ್​ ಮೂಲಕ ಗಡಿಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳ ಸ್ಮಗ್ಲಿಂಗ್​ ನಡೆಯುತ್ತಿದೆ. ಭಾನುವಾರ ಸಂಜೆ ಹೊತ್ತಿಗೆ ಸಹ ಡ್ರೋನ್​ ಶಬ್ದ ಕೇಳಿದ್ದಾಗಿ, ಇಲ್ಲಿನ ಜನ ನಮಗೆ ತಿಳಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

TV9kannada Web Team

| Edited By: Lakshmi Hegde

Aug 09, 2021 | 3:37 PM

ಪಂಜಾಬ್​: ಇಲ್ಲಿನ ಅಮೃತಸರ್​​ನ ದಲೆಕೆ ಎಂಬ ಗ್ರಾಮದಲ್ಲಿ ತಿಂಡಿಯ ಬಾಕ್ಸ್​​ನಲ್ಲಿ (ಟಿಫಿನ್ ಬಾಕ್ಸ್​) ಐಇಡಿ (IED) ಪತ್ತೆಯಾಗಿದೆ. ಸ್ವಾತಂತ್ರ್ಯ ದಿನ ಕೆಲವೇ ದಿನ ಇರುವಾಗ ಹೀಗೆ ಮಗುವೊಂದರ ಟಿಫಿನ್ ಬಾಕ್ಸ್​ನಲ್ಲಿ ಐಇಡಿ ಕಾಣಿಸಿಕೊಂಡಿದ್ದು ತೀವ್ರ ಆತಂಕವನ್ನೂ ಸೃಷ್ಟಿಸಿತ್ತು. ಇದು ಉಗ್ರಕೃತ್ಯ ಎಂದು ಹೇಳಲಾಗಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾದಂತಾಗಿದೆ. ಭಾನುವಾರ ಈ ಘಟನೆ ನಡೆದಿದ್ದು, ಸಂಪೂರ್ಣ ವಿವರಣೆಯನ್ನು ಪಂಜಾಬ್​ ಡಿಜಿಪಿ ದಿನಕರ್ ಗುಪ್ತಾ ನೀಡಿದ್ದಾರೆ.

ಪಾಕಿಸ್ತಾನದಿಂದ ಡ್ರೋನ್​ ಮೂಲಕ ಈ ಐಇಡಿಯನ್ನು ಅಮೃತಸರ್​ನ ಈ ಹಳ್ಳಿಗೆ ಪೂರೈಸಲಾಗಿದೆ ಎಂದು ಭದ್ರತಾ ಪಡೆಗಳು ಶಂಕೆ ವ್ಯಕ್ತಪಡಿಸಿವೆ. ಮಗುವೊಂದರ ಬ್ಯಾಗ್​ನಲ್ಲಿದ್ದ ಟಿಫಿನ್​ ಬಾಕ್ಸ್​​ನಲ್ಲಿ ಐಇಡಿ ಪತ್ತೆಯಾಗಿದೆ. ಅದೇ ಬ್ಯಾಗ್​​ನಲ್ಲಿ 5 ಹ್ಯಾಂಡ್​ ಗ್ರೆನೇಡ್​ಗಳೂ ಇದ್ದವು ಎಂದು ಹೇಳಲಾಗಿದೆ. ಅದನ್ನು ಸದ್ಯ ನಿಷ್ಕ್ರಿಯಗೊಳಿಸಲಾಗಿದೆ.

ಪಾಕಿಸ್ತಾನದಿಂದ ಡ್ರೋನ್​ ಮೂಲಕ ಗಡಿಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳ ಸ್ಮಗ್ಲಿಂಗ್​ ನಡೆಯುತ್ತಿದೆ. ಭಾನುವಾರ ಸಂಜೆ ಹೊತ್ತಿಗೆ ಸಹ ಡ್ರೋನ್​ ಶಬ್ದ ಕೇಳಿದ್ದಾಗಿ, ಇಲ್ಲಿನ ಜನ ನಮಗೆ ತಿಳಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ. ಅದರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ದೇಶದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಲಿದ್ದು, ಇಂಥ ಬೆದರಿಕೆಗಳು ಪದೇಪದೆ ಬರುತ್ತಲೇ ಇರುತ್ತವೆ. ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಸಾಸಿವೆ ಕಾಳುಗಳಂತೆ ಉದುರಿ ಬಿದ್ದ ಸಾವಿರಾರು ಜನ! ಮೈನವಿರೇಳಿಸುವ ಈ ವಿಡಿಯೋ ಮಿಸ್​ ಮಾಡ್ಕೋಬೇಡಿ​

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಉನ್ನತ ಮಟ್ಟದ ಚರ್ಚೆಯ ಅಧ್ಯಕ್ಷತೆ ವಹಿಸಲಿದ್ದಾರೆ ಮೋದಿ; ಇಂದು ಸಂಜೆ 5.30ಕ್ಕೆ ವಿಡಿಯೊ ಸಂವಾದ

Follow us on

Related Stories

Most Read Stories

Click on your DTH Provider to Add TV9 Kannada