ಜಮ್ಮು-ಕಾಶ್ಮೀರದ ಕುಲಗಾಂವ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್ಕೌಂಟರ್ ನಡೆಯುತ್ತಿದೆ. ಇಲ್ಲಿಯವರೆಗೆ ರಕ್ಷಣಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣವಿದೆ. ಈ ಮಧ್ಯೆ ಎನ್ಕೌಂಟರ್ ನಡೆಯುತ್ತಿರುವ ಸ್ಥಳದಿಂದ, ಶಾಲಾ ಮಕ್ಕಳೂ ಸೇರಿ ಸುಮಾರು 60 ಜನರನ್ನು ಭದ್ರತಾ ಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಅಂದಹಾಗೆ ಈ ಎನ್ಕೌಂಟರ್ನಲ್ಲಿ ಹತ್ಯೆಯಾದ ಇಬ್ಬರು ಉಗ್ರರಲ್ಲಿ ಒಬ್ಬಾತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಎಂದು ಗುರುತಿಸಲಾಗಿದೆ. ಕುಲಗಾಂವ್ನ ಅಶ್ಮುಂಜಿ ಎಂಬಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದಿದ್ದವು. ಸೈನಿಕರು ಪ್ರದೇಶವನ್ನು ಸುತ್ತುವರಿದು ಹುಡುಕಾಟ ನಡೆಸುತ್ತಿದ್ದಂತೆ ಅವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಲು ಶುರು ಮಾಡಿದರು. ಆಗ ಭದ್ರತಾ ಸಿಬ್ಬಂದಿಯೂ ಪ್ರತಿದಾಳಿ ನಡೆಸಲು ಶುರು ಮಾಡಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದೆಡೆ ಎನ್ಕೌಂಟರ್ ಶುರುವಾಗಿತ್ತು..ಇನ್ನೊಂದೆಡೆ ಅಲ್ಲಿದ್ದ ನಾಗರಿಕರನ್ನು ರಕ್ಷಣೆ ಮಾಡುವ ಕಾರ್ಯವೂ ನಡೆದಿತ್ತು ಎಂದೂ ತಿಳಿಸಿದ್ದಾರೆ. ಸ್ಥಳದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
#WATCH | J&K: An encounter is underway at Ashmuji area of Kulgam. One unidentified terrorist killed so far. School children among 60 people rescued from the site of encounter by Kulgam Police & Army.
(Source: Indian Army)
(Visuals deferred by unspecified time) pic.twitter.com/eVyTlvGi9V
— ANI (@ANI) November 20, 2021
ಇದನ್ನೂ ಓದಿ: ಅಲಿಬಾಬ ಸೇರಿ ವಿವಿಧ ಕಂಪೆನಿಗಳಿಗೆ ಚೀನಾದಲ್ಲಿ ವಿಶ್ವಾಸ ಧಕ್ಕೆ ಪ್ರಕರಣದಲ್ಲಿ ಹೊಸದಾಗಿ ಭಾರೀ ದಂಡ