ಮುಕೇಶ್ ಅಂಬಾನಿ ಅವರ ಮನೆಯ ವಿಳಾಸ ಕೇಳಿ ಆತಂಕ ಸೃಷ್ಟಿಸಿದ ವ್ಯಕ್ತಿ ಪೊಲೀಸ್ ವಶಕ್ಕೆ
Mukesh Ambani ದೊಡ್ಡ ಚೀಲವನ್ನು ಹೊತ್ತಿದ್ದ ಇಬ್ಬರು ವ್ಯಕ್ತಿಗಳು ಬಂದು ವಿಳಾಸವನ್ನು ಕೇಳಿದ ನಂತರ ಟ್ಯಾಕ್ಸಿ ಡ್ರೈವರ್ ಒಬ್ಬರು ಫೋನ್ ಮಾಡಿದ್ದಾರೆ ಎಂದು ಪೊಲೀಸರು ಸುದ್ದಿಗಾರರಿಗೆ ತಿಳಿಸಿದರು.
ಮುಂಬೈ: ಸೋಮವಾರ ರಾತ್ರಿ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ (Mukesh Ambanis)ಅವರ ನಗರದ ನಿವಾಸದ ಸುತ್ತಲೂ ಭದ್ರತಾ ಸಿಬ್ಬಂದಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಏರ್ಪಡಿಸಿದ್ದು 40 ವರ್ಷದ ವ್ಯಕ್ತಿಯೊಬ್ಬರನ್ನು ಸೋಮವಾರ ರಾತ್ರಿ ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸುರೇಶ್ ವಿಸಾಂಜಿ ಪಟೇಲ್ (Suresh Visanji Patel) ಎಂದು ಗುರುತಿಸಲಾದ ವ್ಯಕ್ತಿಯನ್ನು ನವಿ ಮುಂಬೈನಿಂದ (Navi Mumbai) ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರಂಭಿಕ ವಿಚಾರಣೆಯಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಪೊಲೀಸರು ಮಂಗಳ ಬೆಳಿಗ್ಗೆ ಹೇಳಿದ್ದಾರೆ. ಪಟೇಲ್ ಅವರು ಪ್ರವಾಸಿ ಆಗಿದ್ದು ಅಂಬಾನಿ ಅವರ ಮನೆಯ ಬಗ್ಗೆ ವಿಚಾರಿಸಿದ್ದರು. ಆದಾಗ್ಯೂ ಯಾವುದೇ ಸಂಭವನೀಯ ಬೆದರಿಕೆಯನ್ನು ತಳ್ಳಿಹಾಕಲು ಪಟೇಲ್ ಅವರನ್ನು ಸಂಪೂರ್ಣವಾಗಿ ಪ್ರಶ್ನಿಸುವುದಾಗಿ ಪೊಲೀಸರು ಹೇಳಿದ್ದಾರೆ. ಕಳೆದ ರಾತ್ರಿ ಅಂಬಾನಿ ಅವರ ನಿವಾಸ ಆಂಟಿಲಿಯಾ ಇರುವ ಸ್ಥಳದ ಬಗ್ಗೆ ಇಬ್ಬರು ವ್ಯಕ್ತಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಅಂಶವನ್ನು ಪೊಲೀಸರು ಎಚ್ಚರಿಸಿದ ನಂತರ ಭದ್ರತೆಯನ್ನು ಬಲಪಡಿಸಲಾಯಿತು.
Security heightened outside Mukesh Ambani’s residence ‘Antilia’ after Mumbai Police received a call from a taxi driver that two people carrying a bag asked for Ambani’s residence. pic.twitter.com/RW5uMtcleK
— ANI (@ANI) November 8, 2021
ದೊಡ್ಡ ಚೀಲವನ್ನು ಹೊತ್ತಿದ್ದ ಇಬ್ಬರು ವ್ಯಕ್ತಿಗಳು ಬಂದು ವಿಳಾಸವನ್ನು ಕೇಳಿದ ನಂತರ ಟ್ಯಾಕ್ಸಿ ಡ್ರೈವರ್ ಒಬ್ಬರು ಫೋನ್ ಮಾಡಿದ್ದಾರೆ ಎಂದು ಪೊಲೀಸರು ಸುದ್ದಿಗಾರರಿಗೆ ತಿಳಿಸಿದರು. ಮಂಗಳವಾರ ಬೆಳಗ್ಗೆ ಪೊಲೀಸರು ಟ್ಯಾಕ್ಸಿ ಚಾಲಕನನ್ನು (ಅವನು ಗುಜರಾತ್‌ನಿಂದ ಬಂದಿದ್ದಾನೆ) ಮತ್ತು ವಾಹನವನ್ನು (ವ್ಯಾಗನ್ ಆರ್ ಟೂರಿಸ್ಟ್ ಟ್ಯಾಕ್ಸಿ) ಗುರುತಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಅಂಬಾನಿ ಕುಟುಂಬಕ್ಕೆ ಲಂಡನ್ ವಾಸ್ತವ್ಯದ ಆಲೋಚನೆಯಿಲ್ಲ: ರಿಲಯನ್ಸ್ ಇಂಡಸ್ಟ್ರೀಸ್ ಸ್ಪಷ್ಟನೆ