AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Security Breach: ವರದಿ ಸಲ್ಲಿಸಲು ಪಂಜಾಬ್ ಪೊಲೀಸರಿಗೆ ಒಂದು ದಿನ ಗಡುವು ನೀಡಿದ ಕೇಂದ್ರ

ಪಂಜಾಬ್‌ನ ಗೃಹ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರೆ.  ಪಂಜಾಬ್ ಸರ್ಕಾರದ ವಿಚಾರಣೆಯು ಕೇಂದ್ರ ಗೃಹ ಸಚಿವಾಲಯದ ತನಿಖೆಗೆ ಸಮಾನಾಂತರವಾಗಿರುತ್ತದೆ, ಇದು ಭದ್ರತಾ ವ್ಯವಸ್ಥೆಗಳಲ್ಲಿ "ಗಂಭೀರ ಲೋಪ" ಗಳನ್ನು ತನಿಖೆ ಮಾಡುತ್ತದೆ.

PM Security Breach: ವರದಿ ಸಲ್ಲಿಸಲು ಪಂಜಾಬ್ ಪೊಲೀಸರಿಗೆ ಒಂದು ದಿನ ಗಡುವು ನೀಡಿದ ಕೇಂದ್ರ
ಫ್ಲೈಓವರ್ ಮೇಲೆ ಸಿಲುಕಿದ ಪ್ರಧಾನಿಯವರ ವಾಹನ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 07, 2022 | 5:51 PM

ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಚುನಾವಣಾ ಪ್ರಚಾರದ ವೇಳೆ ಭದ್ರತಾ ಲೋಪಗಳ (Security lapses) ಬಗ್ಗೆ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯದ ( Union Home Ministry) ತಂಡವು ಇಂದು (ಶುಕ್ರವಾರ) ಪಂಜಾಬ್‌ನ ಬಟಿಂಡಾದಲ್ಲಿರುವ ಫ್ಲೈಓವರ್‌ಗೆ ಭೇಟಿ ನೀಡಿತು. ರೈತರು ರಸ್ತೆ ತಡೆ ನಡೆಸಿದ್ದರಿಂದ ಪ್ರಧಾನಿ ಬೆಂಗಾವಲು ಪಡೆ 20 ನಿಮಿಷಗಳ ಕಾಲ ನಿಲ್ಲುವಂತಾಗಿತ್ತು. ಮೂವರು ಸದಸ್ಯರ ತಂಡ- ಸುಧೀರ್ ಕುಮಾರ್ ಸಕ್ಸೇನಾ, ಕಾರ್ಯದರ್ಶಿ (ಭದ್ರತೆ), ಬಲ್ಬೀರ್ ಸಿಂಗ್, ಗುಪ್ತಚರ ಬ್ಯೂರೋದ ಜಂಟಿ ನಿರ್ದೇಶಕ ಮತ್ತು ಎಸ್‌ಪಿಜಿಯ ಇನ್ಸ್‌ಪೆಕ್ಟರ್-ಜನರಲ್ ಅಥವಾ ವಿಶೇಷ ರಕ್ಷಣಾ ಗುಂಪು, ಪ್ರಧಾನ ಮಂತ್ರಿಯನ್ನು ಕಾಪಾಡುವ ಕಾರ್ಯವನ್ನು ವಹಿಸಿದ್ದು ಇವರು ಪ್ಯಾರಾಯನ ಮೇಲ್ಸೇತುವೆಯಲ್ಲಿ 45 ನಿಮಿಷಗಳನ್ನು ಕಳೆದರು. ನಂತರ ಅವರು ವಿಚಾರಣೆಯನ್ನು ಮುಂದುವರಿಸಲು ಗಡಿ ಭದ್ರತಾ ಪಡೆಯ ಸೆಕ್ಟರ್ ಪ್ರಧಾನ ಕಚೇರಿಗೆ ಹೋದರು. ಬುಧವಾರ ಪ್ರಧಾನಿ ಭೇಟಿಗೆ  ನಿಯೋಜನೆಗೊಂಡಿರುವವರು ಸೇರಿದಂತೆ ಹಿರಿಯ ಪೊಲೀಸ್ ಮತ್ತು ನಾಗರಿಕ ಅಧಿಕಾರಿಗಳನ್ನು ವಿಚಾರಣೆಗೆ ಕರೆಯಲಾಗಿದೆ.

ಗೃಹ ಸಚಿವಾಲಯವು ಬಟಿಂಡಾದ ಉನ್ನತ ಪೊಲೀಸ್‌ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿದ್ದು, ಒಂದು ದಿನದಲ್ಲಿ ಉತ್ತರ ಕೇಳಿದೆ. ಇಂದು ಮುಂಜಾನೆ ಪಂಜಾಬ್ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಅವರು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರಿಗೆ ರಾಜ್ಯದ ವಿಚಾರಣೆಗಳ ಅಪ್​​ಡೇಟ್ಸ್ ಜತೆ ಪತ್ರ ಬರೆದಿದ್ದಾರೆ. ಪೊಲೀಸ್ ಪ್ರಕರಣವನ್ನು ದಾಖಲಿಸಲಾಗಿದೆ. ಇಬ್ಬರು ಸದಸ್ಯರ ಸಮಿತಿ – ನ್ಯಾಯಮೂರ್ತಿ (ನಿವೃತ್ತ) ಮೆಹ್ತಾಬ್ ಗಿಲ್ ಮತ್ತು ಪಂಜಾಬ್‌ನ ಗೃಹ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನುರಾಗ್ ವರ್ಮಾ ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಂಜಾಬ್‌ನ ಗೃಹ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರೆ.  ಪಂಜಾಬ್ ಸರ್ಕಾರದ ವಿಚಾರಣೆಯು ಕೇಂದ್ರ ಗೃಹ ಸಚಿವಾಲಯದ ತನಿಖೆಗೆ ಸಮಾನಾಂತರವಾಗಿರುತ್ತದೆ, ಇದು ಭದ್ರತಾ ವ್ಯವಸ್ಥೆಗಳಲ್ಲಿ “ಗಂಭೀರ ಲೋಪ” ಗಳನ್ನು ತನಿಖೆ ಮಾಡುತ್ತದೆ.

ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಫಿರೋಜ್‌ಪುರಕ್ಕೆ ತೆರಳುವ ವೇಳೆ ಈ ಭದ್ರತಾ ಲೋಪವಾಗಿತ್ತು. ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆದಿದೆ. ಎನ್‌ಜಿಒ ಲಾಯರ್ಸ್ ವಾಯ್ಸ್ ಮನವಿ ಸಲ್ಲಿಸಿದ್ದು ಪಂಜಾಬ್ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಮತ್ತು ಪೊಲೀಸ್ ಮಹಾನಿರ್ದೇಶಕ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಬಾಕಿ ಇರುವ ಕ್ರಮವನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದೆ.

ಚುನಾವಣಾ ರ್ಯಾಲಿಗಾಗಿ ಫಿರೋಜ್‌ಪುರಕ್ಕೆ ತೆರಳುತ್ತಿದ್ದ ಪ್ರಧಾನಿ ಮೋದಿ ಅವರನ್ನು ಫ್ಲೈಓವರ್ ಮೇಲೆ 20 ನಿಮಿಷಗಳ ಕಾಲ ತಡೆದು ನಿಲ್ಲಿಸಿದಾಗ ಭಾರೀ ಗದ್ದಲ ಉಂಟಾಗಿತ್ತು. ಅವರ ಬೆಂಗಾವಲುಪಡೆ ಬಟಿಂಡಾದಿಂದ ರಸ್ತೆಯ ಮೂಲಕ 100 ಕಿಮೀ ದೂರದ ರ್ಯಾಲಿಗೆ ಪ್ರಯಾಣಿಸುತ್ತಿದ್ದರು. ಕೆಟ್ಟ ಹವಾಮಾನದ ನಂತರ ಅವರ ಹೆಲಿಕಾಪ್ಟರ್ ಪ್ರಯಾಣವನ್ನು ಕೈ ಬಿಡಲಾಗಿತ್ತು. ರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರಿಂದ ಪ್ರಧಾನಿ ಪ್ರಯಾಣಕ್ಕೆ ಅಡ್ಡಿಯಾಗಿತ್ತು.

ರಸ್ತೆ ತಡೆ ನಡೆಸಿದ ರೈತರಿಗೆ ಪ್ರಧಾನಿಯವರು ಆ ದಾರಿಯಲ್ಲಿ ಹೋಗುತ್ತಿದ್ದಾರೆ ಎಂಬ ಕಲ್ಪನೆಯೂ ಇರಲಿಲ್ಲ. ಪ್ರಧಾನಿಯವರು ಈ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ಅಧಿಕಾರಿಗಳು ನಮ್ಮಲ್ಲಿ ಹೇಳಿದರು. ಆದರೆ ಅವರು ನಮ್ಮನ್ನು ತೆರವು ಮಾಡುವುದಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ನಾವು ಭಾವಿಸಿದೆವು ಎಂದು ರೈತರು ಹೇಳಿದ್ದಾರೆ.

ಏತನ್ಮಧ್ಯೆ, ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ ರೈತ ಸಂಘಗಳ ಛತ್ರಿ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ – ಘಟನೆಯ ಸಮಯದಲ್ಲಿ “ಹೇಗೋ ತನ್ನ ಜೀವವನ್ನು ಉಳಿಸಿಕೊಂಡಿದ್ದೇನೆ” ಎಂದು ಪ್ರಧಾನಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದು ‘ತಮ್ಮ ರ್ಯಾಲಿಯ ವೈಫಲ್ಯವನ್ನು ಮುಚ್ಚಿಹಾಕಲು’ ಪ್ರಧಾನಿ ರೈತರ ಚಳವಳಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

ಪ್ರಧಾನಿ ಭೇಟಿಗೆ ಅಗತ್ಯ ಭದ್ರತೆ, ಟ್ರಾಫಿಕ್ ಮತ್ತು ಮಾರ್ಗ ವ್ಯವಸ್ಥೆಗಳನ್ನು ಮಾಡುವಂತೆ ಪಂಜಾಬ್ ಪೊಲೀಸರಿಗೆ ಸೂಚಿಸಿರುವ ಆಂತರಿಕ ಮೆಮೊಗಳನ್ನು ಬಿಜೆಪಿ ನಿನ್ನೆ ಬಿಡುಗಡೆ ಮಾಡಿದೆ. ಈ ಮೆಮೊಗಳು, ಕೆಟ್ಟ ಹವಾಮಾನದಿಂದಾಗಿ ಕೊನೆಯ ಕ್ಷಣದ ಯೋಜನೆ ಬದಲಾವಣೆಗಳ ಬಗ್ಗೆಯೂ ಎಚ್ಚರಿಕೆ ನೀಡುತ್ತವೆ ಮತ್ತು “ರೈತರು ಧರಣಿ ನಡೆಸುವ ಸಾಧ್ಯತೆಯಿದೆ (ಅದು) ರಸ್ತೆ ತಡೆಗಳಿಗೆ ಕಾರಣವಾಗಬಹುದು. ದಯವಿಟ್ಟು ಅಗತ್ಯ ತಿರುವು ಯೋಜನೆಗಳನ್ನು ಮಾಡಿ” ಎಂದು ಬಿಜೆಪಿ ಹೇಳಿತ್ತು.

ಇಡೀ ಘಟನೆಯು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದವನ್ನು ಹುಟ್ಟುಹಾಕಿದೆ. ಇದು “ಪ್ರಧಾನಿಗೆ ಹಾನಿಯನ್ನುಂಟು ಮಾಡುವ ಪಿತೂರಿ” ಎಂದು ಬಿಜೆಪಿ ಆರೋಪಿಸಿದೆ. ಆದರೆ ಮುಖ್ಯಮಂತ್ರಿ ಚರಣ್​​ಜಿತ್ ಚನ್ನಿ ಅಂತಹ ಯಾವುದೇ ಆರೋಪವನ್ನು ನಿರಾಕರಿಸಿದ್ದಾರೆ. “ಒಬ್ಬ ಪಂಜಾಬಿಯಾಗಿ, ನಿಮ್ಮನ್ನು (ಪ್ರಧಾನಿ) ರಕ್ಷಿಸಲು ನಾನು ಪ್ರಾಣವನ್ನೇ ಕೊಡುವೆ. ಅಲ್ಲಿ ಯಾವುದೇ ಅಪಾಯವಿಲ್ಲ. ಯಾವುದೇ ಭದ್ರತಾ ಲೋಪ ಆಗಿಲ್ಲ ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ:  PM Modi’s Security Breach ಪ್ರಯಾಣದ ದಾಖಲೆಗಳನ್ನು ಸಂರಕ್ಷಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ

Published On - 5:46 pm, Fri, 7 January 22

ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ