ಪ್ರೀತಿಸಿದವನಿಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್​ಗೆ ಹೆಣ್ಣು ಮಗು ಜನನ

ಆನ್​ಲೈನ್​ ಗೇಮಿಂಗ್ ಆ್ಯಪ್ ಮೂಲಕ ಪರಿಚಯವಾದ ಪ್ರಿಯಕರನಿಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿರುವ ಕೃಷ್ಣ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮಕೊಟ್ಟಿದ್ದಾಳೆ. ಸೀಮಾ ಹೈದರ್ ಆನ್​ಲೈನ್ ಗೇಮಿಂಗ್ ಮೂಲಕ ಸಚಿನ್ ಎಂಬುವವರನ್ನು ಭೇಟಿಯಾಗಿದ್ದರು, ಬಳಿಕ ಅವರ ಸ್ನೇಹ ಪ್ರೀತಿಗೆ ಚಿಗುರಿತ್ತು.

ಪ್ರೀತಿಸಿದವನಿಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್​ಗೆ ಹೆಣ್ಣು ಮಗು ಜನನ
ಸೀಮಾ ಹೈದರ್ -ಸಚಿನ್ ಮೀನಾ
Image Credit source: Business Today

Updated on: Mar 18, 2025 | 2:10 PM

ನೋಯ್ಡಾ, ಮಾರ್ಚ್​ 18: ಆನ್​ಲೈನ್​ ಗೇಮಿಂಗ್ ಆ್ಯಪ್ ಮೂಲಕ ಪರಿಚಯವಾದ ಪ್ರಿಯಕರನಿಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿರುವ ಕೃಷ್ಣ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮಕೊಟ್ಟಿದ್ದಾಳೆ. ಸೀಮಾ ಹೈದರ್ ಆನ್​ಲೈನ್ ಗೇಮಿಂಗ್ ಮೂಲಕ ಸಚಿನ್ ಎಂಬುವವರನ್ನು ಭೇಟಿಯಾಗಿದ್ದರು, ಬಳಿಕ ಅವರ ಸ್ನೇಹ ಪ್ರೀತಿಗೆ ಚಿಗುರಿತ್ತು.

ಸೀಮಾಗೆ ಆಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು. ಪ್ರೀತಿಸಿದವನಿಗಾಗಿ ಸೀಮಾ ಗಂಡನನ್ನು ಬಿಟ್ಟು ಮಕ್ಕಳನ್ನು ಕರೆದುಕೊಂಡು ಭಾರತಕ್ಕೆ ಬಂದಿದು ಸಚಿನ್ ಮೀನಾರನ್ನು ಮದುವೆಯಾಗಿದ್ದಳು. ಕಳೆದ ವರ್ಷ ತಾನು ಗರ್ಭಿಣಿಯಾಗಿರುವ ಬಗ್ಗೆ ಸೀಮಾ ವಿಡಿಯೋ ಮೂಲಕ ಹೇಳಿಕೊಂಡಿದ್ದರು. ಇದು ಅವರಿಬ್ಬರ ಹೊಸ ಅಧ್ಯಾಯವೆಂದೇ ಹೇಳಬಹುದು. ಪ್ರಸ್ತುತ ಗ್ರೇಟರ್ ನೋಯ್ಡಾದ ರಬುಪುರದಲ್ಲಿ ವಾಸಿಸುತ್ತಿರುವ ಈ ದಂಪತಿ ಸಂತೋಷದ ಜೀವನ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಅಕ್ರಮವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್​ಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸೋ ಚಾನ್ಸ್

ಒಂದು ಸಿನಿಮಾ ರೀತಿಯ ಪ್ರೇಮಕಥೆ
ಇಬ್ಬರೂ ಆನ್​ಲೈನ್ ಗೇಮ್ ಪಬ್ಜಿ ಆಡುವಾಗ ಪರಿಚಯವಾದರು. ಇಬ್ಬರು ಪರಸ್ಪರ ಪ್ರೀತಿಸಲು ಆರಮಭಿಸಿದರು. ಎಲ್ಲಾ ಅಡೆತಡೆಗಳನ್ನು ಧಿಕ್ಕರಿಸಿ, ಸೀಮಾ ಸಚಿನ್ ಜತೆ ಇರಲು ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ದಾಟಿ ನಾಲ್ಕು ಮಕ್ಕಳನ್ನು ಕರೆದುಕೊಂಡು ಬಂದಿದ್ದಳು.

ಆದರೆ ಅದು ಸುಲಭವಾಗಿರಲಿಲ್ಲ. 2023ರ ಜುಲೈನಲ್ಲಿ ಕಾನೂನು ಹೋರಾಟಗಳು ಮತ್ತು ಬಂಧನವನ್ನು ಎದುರಿಸಬೇಕಾಯಿತು. ಕೊನೆಗೂ ಪ್ರೀತಿ ಗೆದ್ದಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ