‘ಅಸಾದುದ್ದೀನ್​ ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳಿಸಿ..ಅಲ್ಲಿನ ಮಹಿಳೆಯರ ರಕ್ಷಣೆ ಮಾಡಲಿ’- ಶೋಭಾ ಕರಂದ್ಲಾಜೆ

ಪಾಕಿಸ್ತಾನದ ಐಎಸ್​ಐ ತಾಲಿಬಾನ್​​ನ್ನು ನಿಯಂತ್ರಿಸುತ್ತಿದೆ ಮತ್ತು ಅದನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ. ಈಗಾಗಲೇ ಅಲ್​ ಖೈದಾ ಮತ್ತು ಡೇಶ್​ ಸಂಘಟನೆಗಳು ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಿಗೆ ತಲುಪಿವೆ ಎಂದೂ ಅಸಾದುದ್ದೀನ್​ ಓವೈಸಿ ಹೇಳಿದ್ದಾರೆ.

‘ಅಸಾದುದ್ದೀನ್​ ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳಿಸಿ..ಅಲ್ಲಿನ ಮಹಿಳೆಯರ ರಕ್ಷಣೆ ಮಾಡಲಿ’- ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ ಮತ್ತು ಅಸಾದುದ್ದೀನ್ ಓವೈಸಿ
Edited By:

Updated on: Aug 21, 2021 | 1:01 PM

ಅಫ್ಘಾನಿಸ್ತಾನ (Afghanistan)ದ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿರುವವರೆಲ್ಲ ನಮ್ಮ ದೇಶದ ಮಹಿಳೆಯರ ಮೇಲಿನ ದೌರ್ಜನ್ಯ ನೋಡಿಕೊಂಡೂ ಸುಮ್ಮನಿದ್ದಾರೆ ಎಂದು ಹೇಳಿಕೆ ನೀಡಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ (AIMIM chief Asaduddin Owaisi)ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ತಿರುಗೇಟು ನೀಡಿದ್ದಾರೆ. ಅಸಾದುದ್ದೀನ್​ ಓವೈಸಿಯವರನ್ನ ಅಫ್ಘಾನಿಸ್ತಾನಕ್ಕೆ ಕಳಿಸುವುದು ಒಳ್ಳೆಯದು ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಅವರ ಸಮುದಾಯ ಮತ್ತು ಮುಸ್ಲಿಂ ಮಹಿಳೆಯರನ್ನು ರಕ್ಷಿಸಲು ಅಸಾದುದ್ದೀನ್​ ಓವೈಸಿಯವರನ್ನು ಅಫ್ಘಾನಿಸ್ತಾನಕ್ಕೆ ಕಳಿಸುವುದೇ ತುಂಬ ಉತ್ತಮ ಎಂದು ಹೇಳಿದ್ದಾರೆ.

ತಾಲಿಬಾನಿಗಳ ಷರಿಯಾ ಕಾನೂನು ಎಷ್ಟು ಕ್ರೌರ್ಯವಾದದ್ದು ಎಂದು ಜಗತ್ತಿಗೇ ಗೊತ್ತಿದೆ. ಅದು ಮಹಿಳೆಯರ ಪಾಲಿಗಂತೂ ಉಸಿರುಗಟ್ಟಿಸುವಷ್ಟು ಹಿಂಸೆ. ಹೀಗಿದ್ದಾಗ ಇನ್ನು ಮುಂದೆ ತಾಲಿಬಾನ್​ ಆಡಳಿತ ನಡೆಯಲಿರುವ ಅಫ್ಘಾನಿಸ್ತಾನದ ಮಹಿಳೆಯರ ಬಗ್ಗೆ ಭಾರತ ಸೇರಿ ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಆದರೆ ಭಾರತದ ಕೇಂದ್ರ ಸರ್ಕಾರ ಅಫ್ಘಾನ್ ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿ ತೋರಿಸಿದ್ದರ ಬಗ್ಗೆ ಅಸಾದುದ್ದೀನ್​ ಓವೈಸಿ ವ್ಯಂಗ್ಯವಾಡಿದ್ದರು. ಗುರುವಾರ ಸಮಾರಂಭವೊಂದರಲ್ಲಿ ಮಾತನಾಡಿದ ಓವೈಸಿ, ಭಾರತದಲ್ಲಿ ಪ್ರತಿದಿನವೂ ಮಹಿಳೆಯರ ಮೇಲಿನ ದೌರ್ಜನ್ಯದ ವರದಿಯಾಗುತ್ತಿದೆ.  ಆದರೆ ಈ ಬಗ್ಗೆ ಚಿಂತಿಸದೆ, ಅವರು ಅಫ್ಘಾನಿಸ್ತಾನದ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದಾರೆ. ಯಾಕೆ ಇಲ್ಲಿ ನಡೆಯುತ್ತಿರುವುದು ದೌರ್ಜನ್ಯವಲ್ಲವಾ? ಎಂದು ಪ್ರಶ್ನಿಸಿದ್ದರು.

ಹಾಗೇ, ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಬಗ್ಗೆ ಮಾತನಾಡಿದ್ದ ಓವೈಸಿ, ಮೊದಲಿನಿಂದಲೂ ತಾಲಿಬಾನಿಗಳಿಗೆ ಶಸ್ತ್ರಾಸ್ತ್ರ, ವೈದ್ಯಕೀಯ ಮತ್ತು ಸಾರಿಗೆ ಸೌಕರ್ಯ ಒದಗಿಸುತ್ತದೆ ಎಂಬ ಆರೋಪ ಇದೆ. ಇದೀಗ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳಿಂದ ಅತ್ಯಂ ಹೆಚ್ಚು ಪ್ರಯೋಜನ ಪಡೆಯುತ್ತಿರುವುದೂ ಅದೇ ದೇಶವೇ ಆಗಿದೆ.  ಐಎಸ್​ಐ ಯಾವಾಗಾಲೂ ಭಾರತದ ವೈರಿಯೇ ಆಗಿದೆ. ಈ ಐಎಸ್​ಐ ತಾಲಿಬಾನ್​​ನ್ನು ನಿಯಂತ್ರಿಸುತ್ತಿದೆ ಮತ್ತು ಅದನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ. ಈಗಾಗಲೇ ಅಲ್​ ಖೈದಾ ಮತ್ತು ಡೇಶ್​ ಸಂಘಟನೆಗಳು ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಿಗೆ ತಲುಪಿವೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಅಸಾದುದ್ದೀನ್​ ಓವೈಸಿ ನಿನ್ನೆಯ ಕಾರ್ಯಕ್ರಮದಲ್ಲಿ ಹೇಳಿದ್ದರು.

ಇದನ್ನೂ ಓದಿ: ಕಾಬೂಲ್​ ವಿಮಾನ ನಿಲ್ದಾಣದಿಂದ 150 ಭಾರತೀಯರು ಕಿಡ್ನ್ಯಾಪ್​ ಆಗಿರುವ ಸಾಧ್ಯತೆ: ವಿದೇಶಿ ಮಾಧ್ಯಮಗಳಲ್ಲಿ ಮಾಹಿತಿ

Afghanistan Photos: ಅಫ್ಘಾನಿಸ್ತಾನದಲ್ಲಿ ಹೆತ್ತವರಿಗೂ ಭಾರವಾದ ಮಕ್ಕಳು; ಬಂದೂಕಿನ ಸದ್ದಿನಲ್ಲಿ ಮಕ್ಕಳ ಆಕ್ರಂದನ ಕೇಳುವವರಾರು?