ಜ್ಞಾನವಾಪಿ ಪ್ರಕರಣದಲ್ಲಿ ಮುಸ್ಲಿಂ ಪರ ವಾದಿಸಿದ್ದ ವಕೀಲ ಅಭಯ್ ನಾಥ್ ಯಾದವ್ ಹೃದಯಾಘಾತದಿಂದ ಸಾವು
ಭಾನುವಾರ ರಾತ್ರಿ 10.30ಕ್ಕೆ ಅವರಿಗೆ ತೀವ್ರ ಹೃದಯಾಘಾತವಾಗಿದೆ ಎಂದು ಬನಾರಸ್ ಬಾರ್ ಅಸೋಸಿಯೇಷನ್ ನ ಹಿರಿಯ ವಕೀಲ ನಿತ್ಯಾನಂದ ರಾಯ್ ಹೇಳಿದ್ದಾರೆ. ಯಾದವ್ ಅವರನ್ನು ತಕ್ಷಣವೇ ತ್ರಿಮೂರ್ತಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ದೆಹಲಿ: ಜ್ಞಾನವಾಪಿ ಪ್ರಕರಣದಲ್ಲಿ(Gyanvapi case) ಅಂಜುಮಾನ್ ಇಂತೆಜಾಮಿಯಾ ಮಸ್ಜಿದ್ ಸಮಿತಿಯ ( Anjuman Intezamia Masjid Committee) ಪರ ವಾದಿಸಿದ್ದ ಹಿರಿಯ ವಕೀಲ ಅಭಯ್ ನಾಥ್ ಯಾದವ್ (Abhay Nath Yadav) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ವರದಿಗಳ ಪ್ರಕಾರ ಭಾನುವಾರ ಅವರನ್ನು ವಾರಣಾಸಿಯಲ್ಲಿರುವ ಮಕ್ಭೂಲ್ ಅಲಾಂ ರೋಡ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ 10.30ಕ್ಕೆ ಅವರಿಗೆ ತೀವ್ರ ಹೃದಯಾಘಾತವಾಗಿದೆ ಎಂದು ಬನಾರಸ್ ಬಾರ್ ಅಸೋಸಿಯೇಷನ್ ನ ಹಿರಿಯ ವಕೀಲ ನಿತ್ಯಾನಂದ ರಾಯ್ ಹೇಳಿದ್ದಾರೆ. ಯಾದವ್ ಅವರನ್ನು ತಕ್ಷಣವೇ ತ್ರಿಮೂರ್ತಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆಮೇಲೆ ಅವರ ಕುಟುಂಬದ ಸದಸ್ಯರು ಶುಭಂ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿನ ವೈದ್ಯರು ಯಾದವ್ ಮೃತಪಟ್ಟಿದ್ದಾರೆ ಎಂದು ದೃಢೀಕರಿಸಿದ್ದಾರೆ.
ಶೃಂಗಾರ್ ಗೌರಿ ಮತ್ತು ಜ್ಞಾನವಾಪಿ ಪ್ರಕರಣದಲ್ಲಿ ಆಗಸ್ಟ್ 4ರಂದು ಮುಸ್ಲಿಂ ಕಕ್ಷಿದಾರರು ಸಲ್ಲಿಕೆಸಲಾಗುವ ಪ್ರತಿಕ್ರಿಯೆಯಲ್ಲಿ ಅಭಯ್ ನಾಥ್ ಯಾದವ್ ಅವರ ಪಾತ್ರ ಮಹತ್ತರವಾದುದಾಗಿದೆ.
ಜ್ಞಾನವಾಪಿ ಪ್ರಕರಣಗಲ್ಲಿ ಸುಪ್ರೀಂಕೋರ್ಟ್ ಅಕ್ಟೋಬರ್ ನಲ್ಲಿ ವಿಚಾರಣೆ ನಡೆಸಲಿದೆ. ಪ್ರಸ್ತುತ ಪ್ರಕರಣವನ್ನು ಸದ್ಯ ಕೆಳಗಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತದೆ. ನ್ಯಾಯಮೂರ್ತಿ ಚಂದ್ರಚೂಡ್, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ನರಸಿಂಹ ಅವರ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.
Published On - 1:07 pm, Mon, 1 August 22