ಲೋಕಸಭೆ: ಕಾಂಗ್ರೆಸ್ನ ನಾಲ್ವರು ಸಂಸದರ ಅಮಾನತು ರದ್ದು
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾದ ಮಣಿಕಂ ಟ್ಯಾಗೋರ್, ರಮ್ಯಾ ಹರಿದಾಸ್, ಜ್ಯೋತಿಮಣಿ ಮತ್ತು ಟಿಎನ್ ಪ್ರತಾಪ ಅವರನ್ನು ಜುಲೈ 26ರಂದು ಸದನದ ಕಲಾಪಗಳಿಂದ ಅಮಾನತುಗೊಳಿಸಲಾಗಿತ್ತು.
ನಾಲ್ವರು ಕಾಂಗ್ರೆಸ್ (Congress) ಸಂಸದರ ಅಮಾನತು ಹಿಂಪಡೆಯಲಾಗಿದೆ. ಲೋಕಸಭೆಯಲ್ಲಿ (Loksabha) ಸಂಸದರ ಅಮಾನತು ತೆಗೆದುಹಾಕುವ ಪ್ರಸ್ತಾವನೆ ಅಂಗೀಕಾರಗೊಂಡ ನಂತರ ಸೋಮವಾರ ಕೆಳಮನೆಯಲ್ಲಿ ಗದ್ದಲ ಕೊನೆಗೊಂಡಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾದ ಮಣಿಕಂ ಟ್ಯಾಗೋರ್, ರಮ್ಯಾ ಹರಿದಾಸ್, ಜ್ಯೋತಿಮಣಿ ಮತ್ತು ಟಿಎನ್ ಪ್ರತಾಪ ಅವರನ್ನು ಜುಲೈ 26ರಂದು ಸದನದ ಕಲಾಪಗಳಿಂದ ಅಮಾನತುಗೊಳಿಸಲಾಗಿತ್ತು. ಸದನದಲ್ಲಿ ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರನ್ನು ಅಮಾನತುಗೊಳಿಸಿದ್ದರು. ಸಂಸದರ ಅಮಾನತು ರದ್ದಾದ ಕೂಡಲೇ ಸದನದಲ್ಲಿ ಬೆಲೆ ಏರಿಕೆ ಚರ್ಚೆ ಆರಂಭವಾಗಿದೆ.
ಸಂಸತ್ನಲ್ಲಿ ಇಂದು ಏನೇನಾಯ್ತು?
- ಲೋಕಸಭೆ ಮತ್ತು ರಾಜ್ಯಸಭಾ ಸದನದ ಒಳಗೂ ಹೊರಗೂ ಹಲವಾರು ವಿಷಯಗಳನ್ನು ಉಲ್ಲೇಖಿಸಿ ವಿಪಕ್ಷ ಪ್ರತಿಭಟನೆ ನಡೆಸಿದೆ. ಸಂಸದರನ್ನು ಅಮಾನತುಗೊಳಿಸಿದ್ದನ್ನು ಖಂಡಿಸಿ ಘೋಷಣೆ ಕೂಗಿದ ವಿಪಕ್ಷದ ಸಂಸದರು ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಲೋಕಸಭೆ ಕಲಾಪ ಮುಂದೂಡಲಾಯಿತು.
- ಮೇಲ್ಮನೆಯಲ್ಲಿ ಶಿವಸೇನಾ ಸಂಸದರು ರಾಜ್ಯಸಭಾ ಸದಸ್ಯ ಮತ್ತು ಪಕ್ಷದ ಹಿರಿಯ ನೇತಾರಾ ಸಂಜಯ್ ರಾವತ್ ಅವರನ್ನು ಭೂ ಹಗರಣ ಪ್ರಕರಣದಲ್ಲಿ ಬಂಧಿಸಿದ್ದನ್ನು ಖಂಡಿಸ್ ಘೋಷಣೆ ಕೂಗಿದ್ದಾರೆ. ಶಿವಸೇನಾ ಸಂಸದ ಪ್ರಿಯಾಂಕಾ ಚತುರ್ವೇದಿ ವ್ಯವಹಾರ ಸ್ಥಗಿತ ನೋಟಿಸ್ ನೀಡಿದ್ದು ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತಮ್ಮ ರಾಜಕೀಯ ಅಜೆಂಡಕ್ಕಾಗಿ ದುರ್ಬಳಕೆ ಮಾಡುವುದರ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
- ಮಹಾತ್ಮಾ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯಿಮೆಂಟ್ ಗ್ಯಾರಂಟಿ ಸ್ಕೀಮ್ ನ್ನು ಇಲ್ಲದಾಗಿಸಲಾಗುತ್ತಿದೆ ಎಂದು ಆರಿಸಿ ಎಡರಂಗದ ಸದಸ್ಯರು ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಯೋಜನೆಯಡಿಯಲ್ಲಿ ವೇತನ ಏರಿಕೆ ಮಾಡಬೇಕು ಎಂದು ಪಕ್ಷದ ಸದಸ್ಯರು ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗಿದ್ದಾರೆ.
- ಸಂಸತ್ನಲ್ಲಿ ನ ಹಲವಾರು ಪ್ರತಿಭಟನೆಗಳು ಟ್ರೆಷರಿ ಬೆಂಚ್ ನಿಂದಲೇ ಆರಂಭವಾಗಿವೆಯ. ಬಂಗಾಳದಲ್ಲಿನ ಬಿಜೆಪಿ ಸಂಸದರು ಗಾಂಧಿ ಪ್ರತಿಮೆ ಎಂದು ಪ್ರತಿಭಟನೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು ಎಂದು ಇವರು ಒತ್ತಾಯಿಸಿದ್ದಾರೆ.
- ಇಂದು ಮಧ್ಯಾಹ್ನದ ನಂತರ ಲೋಕಸಭೆಯಲ್ಲಿ ಬೆಲೆ ಏರಿಕೆ ಚರ್ಚೆ ನಡೆಯುತ್ತಿದೆ. ಈ ವಿಷಯವನ್ನು ಶಿವಸೇನಾದ ವಿನಾಯಕ್ ರಾವತ್ ಮತ್ತು ಕಾಂಗ್ರೆಸ್ ನ ಮನೀಶ್ ತಿವಾರಿ ಎತ್ತಿದ್ದಾರೆ. ಬೆಲೆ ಏರಿಕೆ ಬಗ್ಗೆ ರಾಜ್ಯಸಭೆಯಲ್ಲಿ ನಾಳೆ ಚರ್ಚೆ ನಡೆಯಲಿದೆ.
- ಇಂಥಾ ಪ್ರತಿಭಟನೆಗಳು ಸದನದ ಘನತೆಯನ್ನು ಕುಗ್ಗಿಸುತ್ತದೆ ಎಂದು ಸ್ಪೀಕರ್ ಓಂ ಬಿರ್ಲಾ ಇಂದು ಬೆಳಗ್ಗೆ ಹೇಳಿದ್ದಾರೆ. ಆಮೇಲೆ ಅವರು ಎಲ್ಲ ಪಕ್ಷದ ಸಂಸದರ ಸಭೆ ಕರೆದಿದ್ದಾರೆ.
- ಬೆಲೆ ಏರಿಕೆ ಬಗ್ಗೆ ಇಂದು ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ನಾಳೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಅಮಾನತುಗೊಂಡಿರುವ ಸಂಸದರು ಕ್ಷಮೆ ಯಾಚಿಸಬೇಕು. ಸದನದೊಳಗೆ ಪ್ಲೆಕಾರ್ಡ್ ತರಲೇ ಬಾರದು ಎಂಬುದನ್ನು ವಿಪಕ್ಷಗಳು ಖಚಿತ ಪಡಿಸಬೇಕು ಎಂದು ಅವರು ಹೇಳಿದ್ದಾರೆ.
- ನಾವು ಸದನಲ್ಲಿ ಚರ್ಚೆ ನಡೆಸಲು, ಕಾನೂನು ಅಂಗೀಕರಿಸಲು ಬಯಸುತ್ತೇವೆ. ಸದನದ ಕಲಾಪಗಳು ಸುಗಮವಾಗಿ ನಡೆಯಲು ಸಹಕರಿಸಬೇಕು ಎಂದು ಕೇಂದ್ರ ಸಚಿವ ಪೀಯುಷ್ ಗೋಯಲ್ ಹೇಳಿದ್ದಾರೆ.
- ಸಂಜಯ್ ರಾವತ್ ವಿರುದ್ಧ ಇಡಿ ಕ್ರಮದ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಿದ ಗೋಯಲ್, ಸರ್ಕಾರ ಕೇಂದ್ರೀಯ ಸಂಸ್ಥೆಗಳ ಕೆಲಸಗಳಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಕಾನೂನು ಅದರ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದಿದ್ದಾರೆ.
- ಮಧ್ಯಾಹ್ನ 2 ಗಂಟೆಗೆ ಲೋಕಸಭಾ ಕಲಾಪ ಆರಂಭವಾದಾಗ ಕಾಂಗ್ರೆಸ್ ನೇತಾರ ಅಧೀರ್ ರಂಜನ್ ಚೌಧರಿ ಕಾಂಗ್ರೆಸ್ ಸಂಸದರ ಅಮಾನತು ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ
Published On - 2:41 pm, Mon, 1 August 22