Breaking News: ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ​ ಆರ್.ವೆಂಕಟರಮಣಿ ನೇಮಕ

| Updated By: ವಿವೇಕ ಬಿರಾದಾರ

Updated on: Sep 28, 2022 | 9:44 PM

ಭಾರತದ ಮುಂದಿನ ಅಟಾರ್ನಿ ಜನರಲ್​ ಆಗಿ ಹಿರಿಯ ವಕೀಲ ಆರ್.ವೆಂಕಟರಮಣಿಯವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

Breaking News: ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ​ ಆರ್.ವೆಂಕಟರಮಣಿ ನೇಮಕ
ಹಿರಿಯ ವಕೀಲ ಆರ್.ವೆಂಕಟರಮಣಿ
Follow us on

ನವದೆಹಲಿ: ಭಾರತದ ಮುಂದಿನ ಅಟಾರ್ನಿ ಜನರಲ್ (Attorney General) ​ ಆಗಿ ಹಿರಿಯ ವಕೀಲ ಆರ್.ವೆಂಕಟರಮಣಿಯವರನ್ನು (R Venkataramani) ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೆ.ಕೆ.ವೇಣುಗೋಪಾಲ್‌ರಿಂದ ತೆರವಾಗಿದ್ದ ಸ್ಥಾನಕ್ಕೆ ಆರ್.ವೆಂಕಟರಮಣಿಯವರನ್ನು ನೇಮಕ ಮಾಡಲಾಗಿದೆ.

ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಪ್ರಸ್ತಾಪವನ್ನು ನಿರಾಕರಿಸಿದ ಮುಕುಲ್ ರೋಹಟಗಿ

ನವದೆಹಲಿ: ಕೇಂದ್ರ ಸರ್ಕಾರ ಮುಕುಲ್ ರೋಹಟಗಿ  ಅವರನ್ನು ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿತ್ತು, ಆದರೆ ಮುಕುಲ್ ರೋಹಟಗಿ ಅವರು ಕೇಂದ್ರ ಸರ್ಕಾರದ  ಪ್ರಸ್ತಾಪವನ್ನು ನಿರಾಕರಿಸಿದ್ದಾರೆ. ಇವರ ನಿರಾಕರಣೆಗೆ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಮುಕುಲ್ ರೋಹಟಗಿ ಅಕ್ಟೋಬರ್ 1 ರಿಂದ ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಬೇಕಿತ್ತು. ಕೆಕೆ ವೇಣುಗೋಪಾಲ್ ಅವರ ಅಧಿಕಾರಾವಧಿಯು ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳಲಿದ್ದು, ಅವರ ಸ್ಥಾನವನ್ನು ರೋಹಟಗಿ ವಹಿಸಲಿದ್ದರು.

ರೋಹಟಗಿ ಅವರು ಈ ಹಿಂದೆ ಜೂನ್ 2014 ರಲ್ಲಿ ಅಟಾರ್ನಿ ಜನರಲ್ ಆಗಿ ನೇಮಕಗೊಂಡರು ಮತ್ತು ಜೂನ್ 2017 ರವರೆಗೆ ಸೇವೆ ಸಲ್ಲಿಸಿದರು. ಈಗ ಅವರನ್ನು ಎರಡನೇ ಬಾರಿಗೆ ಈ ನೇಮಕ ಮಾಡಲಾಗಿತ್ತು. ಪ್ರಸ್ತುತ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಸೇವೆ ಜೂನ್ 30 ರಂದು ಕೊನೆಗೊಂಡಿದೆ, ಆದರೆ ಅವರ ಸೆ.30ರ ವರೆಗೆ ಸೇವೆಯನ್ನು ವಿಸ್ತರಿಸಲಾಗಿದೆ.

ವೇಣುಗೋಪಾಲ್ ಅವರು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಸೆಪ್ಟೆಂಬರ್ 30 ರ ನಂತರ ಅಧಿಕಾರದಲ್ಲಿ ಇರುವುದಿಲ್ಲ ಎಂದು ಸೂಚಿಸಿದ್ದರು. ವೇಣುಗೋಪಾಲ್ ಅವರು ಮೊದಲು 1 ಜುಲೈ 2017 ರಂದು ಕೇಂದ್ರ ಸರ್ಕಾರದ ಉನ್ನತ ಕಾನೂನು ಅಧಿಕಾರಿಯಾಗಿ ಅಟಾರ್ನಿ ಜನರಲ್ ಆಗಿ ಅಧಿಕಾರ ವಹಿಸಿಕೊಂಡರು. ಸೇವೆ ಮುಗಿದ ನಂತರ, ಅವರಿಗೆ 3 ತಿಂಗಳ ವಿಸ್ತರಣೆಯನ್ನು ನೀಡಲಾಯಿತು. ವೇಣುಗೋಪಾಲ್ ಅವರು ಯಾವುದೇ ಹೆಚ್ಚಿನ ವಿಸ್ತರಣೆಯನ್ನು ತೆಗೆದುಕೊಳ್ಳಲು ನಿರಾಕರಿಸಿದರು, ಆದ್ದರಿಂದ ಸರ್ಕಾರವು ಹೊಸ ಅಟಾರ್ನಿ ಜನರಲ್ ಅನ್ನು ನೇಮಿಸಲು ನಿರ್ಧರಿಸಿತ್ತು

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 pm, Wed, 28 September 22